logo
भारतवाणी
bharatavani  
logo
Knowledge through Indian Languages
Bharatavani

Krishi Rasayana Shastra Shabdartha Nirupanavali (English-Kannada)
A B C D E F G H I J K L M N O P Q R S T U V W X Y Z

Terrace
ಜಗತಿಭೂಮಿ ; ಅಟ್ಟಳಿಗೆಭೂಮಿ; ತಟ್ಟೆ ಭೂಮಿ. ಇಳಿಜಾರು ಭೂಮಿಗೆ ಅಡ್ಡಲಾಗಿ ನಿರ್ಮಿಸಲ್ಪಟ್ಟ ಬದು ಅಥವಾ ಕಟ್ಟೆ. ಇದು ಭೂಮಿಯ ಮೇಲೆ ಹರಿಯುವ ನೀರಿನ ವೇಗಕ್ಕೆ ತಡೆಯಾಗಿ, ಮೇಲ್ಮಣ್ಣು ಕೊಚ್ಚುವುದು ತಪ್ಪುತ್ತದೆ. ಇದರಿಂದಾಗಿ, ತೇವ ಮತ್ತು ಮಣ್ಣಿನ ರಕ್ಷಣೆ ಸಾಧ್ಯವಾಗುತ್ತದೆ.

Texture
ಸ್ವರೂಪ. ವಿವಿಧ ಗಾತ್ರದ ಮಣ್ಣಿನ ಕಣಗಳ ಪ್ರಮಾಣವನ್ನು ಸೂಚಿಸುವ ಶಬ್ಧ.

Thermodynamic Law
ಉಷ್ಣಗತಿ ನಿಯಮ. ಬೇರೆ ಬೇರೆ ಶಕ್ತಿಯನ್ನು ಉಷ್ಣವಾಗಿ ಪರಿವರ್ತಿಸಿದಾಗ ಅಥವಾ ಉಷ್ಣವನ್ನು ಬೇರೆ ರೀತಿಯ ಶಕ್ತಿಯನ್ನಾಗಿ ಪರಿವರ್ತಿಸಿದಾಗ, ಉಷ್ಣ ಮತ್ತು ಶಕ್ತಿಯ ಪರಿಮಾಣ ಒಂದು ಗೊತ್ತಾದ ಪ್ರಮಾಣದಲ್ಲಿರುತ್ತದೆ.

Thermophyllic Bacteria
ಉಷ್ಣಪ್ರಿಯ ಬ್ಯಾಕ್ಟೀರಿಯಾ. ಹೆಚ್ಚು ಉಷ್ಣವಿರುವಲ್ಲಿ ಅಂದರೆ 50°c ಗಿಂತ ಹೆಚ್ಚು ಶಾಖದಲ್ಲಿ ಅಧಿಕವಾಗಿ ವೃದ್ಧಿಯಾಗುವ ಬ್ಯಾಕ್ಟೀರಿಯಾ.

Tilth
ಮಣ್ಣಿನ ಹದ; ಉತ್ತು. ಮಣ್ಣಿನ ಈ ಭೌತಿಕ ಸ್ಥಿತಿ, ಸಾಮಾನ್ಯವಾಗಿ, ಸಸ್ಯಗಳ ಬೆಳವಣಿಗೆಗೆ ಸಹಾಯಕವಾಗುತ್ತದೆ.

Tile Drain
ಹೆಂಚು ಬಸಿಗಾಲುವೆ. ಜೌಗು ಭೂಮಿಗಳಿಂದ ನೀರು ತೆಗೆಯಲು ಇಳಿಜಾರಿಗೆ ಅಭಿಮುಖವಾಗಿ ಸೂಕ್ತ ಆಳದಲ್ಲಿ ಮಣ್ಣಿನಲ್ಲಿ ಇಡುವ ಹೆಂಚಿನ ಕಾಲುವೆ.

Titration
ಗಾತ್ರ ಮಾಪನ. ಒಂದು ದ್ರಾವಣದ ತೀಕ್ಷ್ಣತೆಯನ್ನಾಗಲೀ, ದ್ರಾವಣದಲ್ಲಿನ ವಸ್ತುವಿನ ಪ್ರಮಾಣವನ್ನಾಗಲಿ, ಮತ್ತೊಂದು ಗೊತ್ತಾದ ನಿಖರ ಗಾತ್ರ ಪ್ರಮಾಣದ ದ್ರಾವಣದೊಡನೆ ಸಂಪೂರ್ಣ ಪ್ರತಿಕ್ರಿಯೆಗೊಳಿಸಿ, ಕಂಡುಹಿಡಿಯುವ ವಿಧಾನ.

Total Cat – ion Exchange Capacity
ಒಟ್ಟು ಧನ ಅಯಾನ್ ವಿನಿಮಯ ಸಾಮರ್ಥ್ಯ. ಏಕ ಸಂಯೋಗ ಸಾಮರ್ಥ್ಯವುಳ್ಳ ತಟಸ್ಥ ದ್ರಾವಣದಿಂದ ಒಂದು ಮಣ್ಣು ಹೀರಿಕೊಳ್ಳಬಹುದಾದಂತಹ ಧನ ಅಯಾನ್ ಗಳ ಮೊತ್ತ.

Transported Soil
ಸಾಗುಮಣ್ಣು. ನೀರು, ಗಾಳಿ ಮುಂತಾದವುಗಳಿಂದ ಕೊಚ್ಚಿ ಬಂದು ಶೇಖರವಾದ ವಸ್ತುಗಳಿಂದುಂಟಾದ ಮಣ್ಣು.

True Density
ನೈಜ ಸಾಂದ್ರತೆ. ರಂಧ್ರದ ಆವರಣವನ್ನು ಬಿಟ್ಟು ಮಣ್ಣಿನ ಘನವಸ್ತುಗಳಿಂದ ಕೂಡಿರುವ ಏಕಮಾನ ಗಾತ್ರದ ತೂಕ.


logo