logo
भारतवाणी
bharatavani  
logo
Knowledge through Indian Languages
Bharatavani

Krishi Rasayana Shastra Shabdartha Nirupanavali (English-Kannada)
A B C D E F G H I J K L M N O P Q R S T U V W X Y Z

Valency
ಸಂಯೋಗಸಾಮರ್ಥ್ಯ. ಒಂದು ಮೂಲವಸ್ತುವಿನ ಪರಮಾಣು ಮತ್ತೊಂದು ಮೂಲವಸ್ತುವಿನ ಪರಮಾಣುವಿನೊಂದಿಗೆ ಸಂಯೋಗವಾಗಲು ಹೊಂದಿರುವ ಸಾಮರ್ಥ್ಯ.

Vesicular Rock
ವೆಸಿಕುಲಾರ್ ಶಿಲೆ; ನಾಳಯುಕ್ತ ಶಿಲೆ. ಶಿಲೆಯ ಮಡ್ಡಿ ಇನ್ನೂ ಕುದಿಯುವ ಸ್ಥಿತಿಯಲ್ಲಿದ್ದಾಗ ಅನಿಲ ಹಿಗ್ಗುವುದರಿಂದ ಹಲವು ಅಗ್ನಿಶಿಲೆಗಳಲ್ಲಿ ಕೋಶಾಕಾರದ ಸ್ಥಳವುಂಟಾಗುತ್ತದೆ. ಈ ಸ್ಥಿತಿಯನ್ನು ತೋರುವ ಶಿಲೆಗೆ ವೆಸಿಕುಲಾರ್ ಶಿಲೆ ಎಂದು ಹೆಸರು.

Vieth’s Ratio
ವಿಥ್ ನ ಅನುಪಾತ. ವಿಥ್ ರವರು ಹಾಲಿನಲ್ಲಿ 13 : 9 : 2 ಪ್ರಮಾಣದಲ್ಲಿ ಲ್ಯಾಕ್ಟೋಸ್, ಪ್ರೋಟೀನ್ ಮತ್ತು ಬೂದಿಯಿರುತ್ತದೆ ಎಂದು ಕಂಡುಹಿಡಿದರು.

Vitamin
ಅನ್ನಾಂಗ; ವಿಟಮಿನ್. ಆಹಾರದಲ್ಲಿ ಕಡಿಮೆ ಪ್ರಮಾಣದಲ್ಲಿ ಕಂಡುಬರುವ ಒಂದು ಉಪಯುಕ್ತ ಸಾವಯವ ವಸ್ತು.

Vitamer
ವಿಟಮರ್ ರಾಸಾಯನಿಕವಾಗಿ ರಚನೆಯಲ್ಲಿ ವ್ಯತ್ಯಾಸವಿದ್ದರೂ ಅನ್ನಾಂಗಗಳ ಗುಣಲಕ್ಷಣಗಳನ್ನು ಹೊಂದಿದ್ದು ಪ್ರಕೃತಿಯಲ್ಲಿ ದೊರೆಯುವ ಅಥವಾ ಸಂಯೋಜಿತ ವಸ್ತು.

Voids Ratio
ಶೂನ್ಯ ಅನುಪಾತ. ಒಂದು ಮೊತ್ತದ ಮಣ್ಣಿನಲ್ಲಿಯ ಶೂನ್ಯದ ಸಂಪೂರ್ಣ ಗಾತ್ರವು ಘನಗಳ ಸಂಪೂರ್ಣ ಗಾತ್ರಕ್ಕೆ ಅನುಪಾತವಾಗಿರುತ್ತದೆ. C = [S (1+W) Sm] ➗ Sm ಇದರಲ್ಲಿ : C = ಶೂನ್ಯ ಅನುಪಾತ. S = ಮಣ್ಣಿನ ಸಂಪೂರ್ಣ ಸಾಪೇಕ್ಷ ಗುರುತ್ವ. Sm = ಸ್ಪಷ್ಟ ಸಾಪೇಕ್ಷ ಗುರುತ್ವ. W = ಒಣ ತೂಕದ ಭಾಗವಾಗಿ ಸೂಚಿಸಿದ ಶೇಕಡ

Volcano
ಅಗ್ನಿ ಪರ್ವತ; ಜ್ವಾಲಾಮುಖಿ. ಕರಗಿದ ಅಗ್ನಿಶಿಲೆ ಮತ್ತು ಹೊಗೆಯನ್ನು ಹೊರದೂಡುವ ಭೂಮಿಯ ಮೇಲ್ಭಾಗ.


logo