logo
भारतवाणी
bharatavani  
logo
Knowledge through Indian Languages
Bharatavani

Krishi Rasayana Shastra Shabdartha Nirupanavali (English-Kannada)
A B C D E F G H I J K L M N O P Q R S T U V W X Y Z

Manure
ಗೊಬ್ಬರ. ಸಸ್ಯ ಅಥವಾ ಪ್ರಾಣಿ ಮೂಲಗಳಿಂದ ಉಂಟಾದ, ಬೆಳೆ ಉತ್ಪತ್ತಿಯನ್ನು ಹೆಚ್ಚಿಸಲು ಉಪಯೋಗಿಸುವ, ಕಳಿತ ಸಾವಯವ ವಸ್ತುಗಳು.

Magnesia
ಮೆಗ್ನೀಸಿಯಾ. ಸುಣ್ಣದ ಕಲ್ಲಿನಲ್ಲಿ, ಕ್ಯಾಲ್ಸಿಯಂ ಮತ್ತು ಮೆಗ್ನೀಸಿಯಂ ಕಾರ್ಬೋನೆಟ್ ಜೊತೆ ಇರುತ್ತದೆ. ಇದರಿಂದ ತಯಾರಿಸಿದ, ಶೇಕಡ 10 ರಿಂದ 15 ರಷ್ಟು ಮೆಗ್ನೀಸಿಯಂ ಕಾರ್ಬೊನೇಟ್ ಇರುವ ಸುಣ್ಣ.

Magnification
ವರ್ಧನೆ ವರ್ಧನೆಯನ್ನು ಈ ಕೆಳಗಿನ ಸೂತ್ರದಿಂದ ಅಳೆಯಬಹುದು. M = P ➗ Q [(25 cms ➗ Fe)+1] P ಮತ್ತು Q = ಮೊದಲ ಪ್ರತಿಮೆ ಮತ್ತು ವಸ್ತುಗಳ ದೂರ (ಗುರಿಯಿಂದ). Fe = ನೇತ್ರ ಮಸೂರದಿಂದ ಸಂಗಮ ಬಿಂದುವಿನ ದೂರ.

Mass
ದ್ರವ್ಯರಾಶಿ. ಒಂದು ವಸ್ತುವಿನಲ್ಲಿರುವ ಪರಿಮಾಣಕ್ಕೆ ದ್ರವ್ಯರಾಶಿ ಎಂದು ಹೆಸರು.

Matter
ದ್ರವ್ಯ. ಸ್ಥಳವನ್ನು ಆವರಿಸಿಕೊಳ್ಳುವ ಮತ್ತು ಒಂದು ನಿರ್ದಿಷ್ಟ ಪರಿಮಾಣವುಳ್ಳ ವಸ್ತು.

Marine Soil
ಕಡಲ ಮಣ್ಣು. ಸಾಗರ ಮತ್ತು ಸಮುದ್ರಗಳ ನೀರಿನಿಂದ ಶೇಖರವಾದ ವಸ್ತುಗಳಿಂದ ಉಂಟಾದ ಮಣ್ಣು.

Marl
ಚಿಪ್ಪು ವಸ್ತು. ಪ್ರಕೃತಿಯಲ್ಲಿ, ನೀರಿನ ತಳದಲ್ಲಿ ಶೇಖರವಾಗಿರುವ ಕ್ಯಾಲ್ಸಿಯಂ ಕಾರ್ಬೊನೇಟ್.

Mature Soil
ಪಕ್ವಮಣ್ಣು; ಬೆಳೆದ ಮಣ್ಣು. ಸ್ವಾಭಾವಿಕ ಮಣ್ಣು ಉತ್ಪಾದನಾ ವಿಧಾನಗಳಿಂದುಟಾದ ಸಂಪೂರ್ಣ ಪಕ್ವ ಹೊಂದಿದ ಮಣ್ಣು.

Major Plant Nutrients
ಪ್ರಧಾನ ಸಸ್ಯಪೋಷಕಗಳು. ಸಾರಜನಕ, ರಂಜಕ ಮತ್ತು ಪೊಟ್ಯಾಷ್ ಇವು ಪ್ರಧಾನ ಸಸ್ಯಪೋಷಕಗಳು. ಸಸ್ಯ ಪೋಷಣೆ ಮತ್ತು ಅವುಗಳ ಬೆಳವಣಿಗೆಯಲ್ಲಿ ಇವುಗಳ ಪಾತ್ರ ಅತಿ ಮುಖ್ಯ. ಮಣ್ಣಿನಲ್ಲಿ ಇವುಗಳ ಅಂಶ ಅಷ್ಟೇನೂ ಹೆಚ್ಚಿಲ್ಲ; ಆದರೆ ಸಸ್ಯಗಳಿಗೆ ಇವು ಸ್ವಲ್ಪ ಹೆಚ್ಚಿನ ಪ್ರಮಾಣದಲ್ಲೇ ಅಗತ್ಯ. ಸಾಗುವಳಿಯಲ್ಲಿ ಇವುಗಳ ಸರಬರಾಜಾಗದಿದ್ದರೆ, ಕೊರತೆಯುಂಟಾಗಿ ಸಸ್ಯ ಬೆಳವಣಿಗೆ ಹಿಂದಾಗುತ್ತದೆ.

Marshy Land
ಜೌಗು ಜಮೀನು; ಜವಳು ಭೂಮಿ. ನೀರು ಬಸಿಯುವುದಕ್ಕೆ ಅವಕಾಶವಿಲ್ಲದ ಕಾರಣ ಸದಾ ತೇವವಾಗಿರುವ ಭೂ ಸನ್ನಿವೇಶ. ಇಂಥ ಸ್ಥಿತಿಗೆ ಹೊಂದಿಕೊಂಡು ಬದುಕಬಲ್ಲ ಕೆಲವು ಜಲಸಸ್ಯಜಾತಿ ಈ ಭೂಮಿಗಳ ವೈಶಿಷ್ಟ್ಯ.


logo