logo
भारतवाणी
bharatavani  
logo
Knowledge through Indian Languages
Bharatavani

Krishi Rasayana Shastra Shabdartha Nirupanavali (English-Kannada)
A B C D E F G H I J K L M N O P Q R S T U V W X Y Z

Natural Erosion
ಸ್ವಾಭಾವಿಕ ಕೊಚ್ಚಣೆ; ಸ್ವಾಭಾವಿಕ ಭೂಸವಕಳಿ. ಮನುಷ್ಯ ಮತ್ತು ಪ್ರಾಣಿಗಳ ಕಾರ್ಯದಿಂದಲ್ಲದೇ ಸ್ವಾಭಾವಿಕವಾಗಿ ನಡೆಯುವ ಭೂಕೊಚ್ಚಣೆ.

Natural Radioactivity
ಸ್ವಾಭಾವಿಕ ವಿಕಿರಣ ಕ್ರಿಯೆ. ಸ್ವಾಭಾವಿಕವಾಗಿ ದೊರೆಯುವ ವಸ್ತುಗಳಿಂದುಂಟಾಗುವ ವಿಕಿರಣ ಕ್ರಿಯೆ.

Nephelometry
ನೆಫೆಲೋಮಿಟ್ರಿ. ತೇಲಣದಲ್ಲಿ ಚದುರಿಸಲ್ಪಡುವ ಬೆಳಕಿನ ಪರಿಮಾಣದ ಅಳತೆಯ ಆಧಾರದ ಮೇಲೆ ನಡೆಸುವ ವಿಶ್ಲೇಷಣೆ.

Neutralisation
ತಟಸ್ಥೀಕರಣ. ಆಮ್ಲ ಮತ್ತು ಪ್ರತ್ಯಾಮ್ಲಗಳ ಅನ್ಯೋನ್ಯ ಕ್ರಿಯೆಯಿಂದ ತಮ್ಮ ಆಮ್ಲೀಯ ಮತ್ತು ಪ್ರತ್ಯಾಮ್ಲೀಯ ಗುಣಧರ್ಮಗಳನ್ನು ಕಳೆದುಕೊಂಡು, ಲವಣ ಮತ್ತು ನೀರನ್ನುಂಟು ಮಾಡುತ್ತದೆ. ಆಮ್ಲ ಮತ್ತು ಪ್ರತ್ಯಾಮ್ಲಗಳ ಇಂತಹ ಅನ್ಯೋನ್ಯ ಕ್ರಿಯೆಗೆ ತಟಸ್ಥೀಕರಣ ಎಂದು ಕರೆಯುತ್ತಾರೆ.

Neutral Soil
ಸಮಧಾತು ಅಥವಾ ತಟಸ್ಥ ಮಣ್ಣು. ಹುಳಿ ಅಥವಾ ಕ್ಷಾರವಿಲ್ಲದ ಸಮಧಾತು ಮಣ್ಣು. ಈ ಮಣ್ಣಿನ ಪಿ. ಎಚ್. ಸರಿಯಾಗಿ 7 ಆಗಿರುತ್ತದೆ.

Neutral Oxides
ತಟಸ್ಥ ಆಕ್ಸೈಡ್ ಗಳು. ಲಿಟ್ಮಸ್ ದ್ರಾವಣಕ್ಕೆ ತಟಸ್ಥತೆಯನ್ನು ತೋರುವ ಆಕ್ಸೈಡುಗಳು.

Newton’s Law of Motion
ನ್ಯೂಟನ್ನನ ಚಲನಾನಿಯಮಗಳು. 1) ಬಾಹ್ಯ ಬಲ ಪ್ರಯೋಗವಿಲ್ಲದಿದ್ದಾಗ, ಒಂದು ಸ್ಥಿರವಸ್ತುವು ಸ್ಥಿರವಾಗಿಯೇ ಇರುವುದು. ಚಲಿಸುತ್ತಿರುವ ವಸ್ತು ಸಮವೇಗದಿಂದ ಒಂದೇ ದಿಕ್ಕಿನಲ್ಲಿ ಚಲಿಸುತ್ತಲೇ ಇರುವುದು. 2) ಆ ವೇಗದಲ್ಲಿ ಉಂಟಾಗುವ ವ್ಯತ್ಯಾಸದ ದರವು ಆರೋಪಿತ ಬಲ ಸರಳಾನುಪಾತವಾಗಿರುತ್ತದೆ ಮತ್ತು ಬಲದ ದಿಕ್ಕಿನಲ್ಲೇ ಇರುತ್ತದೆ. 3) ಪ್ರತಿಯೊಂದು ಕ್ರಿಯೆಗೂ ಅದಕ್ಕೆ ಸಮಪ್ರಮಾಣವುಳ್ಳ ಮತ್ತು ವಿಮುಖವಾದ ಪ್ರತಿಕ್ರಿಯೆಯೊಂದಿದೆ.

Nitrogen Cycle
ಸಾರಜನಕ ವೃತ್ತ. ವಾಯುವಿನಲ್ಲಿರುವ ಅನಿಲ ರೂಪದ ಸಾರಜನಕ, ಸಿಡಿಲು, ಮಿಂಚು ಇವುಗಳಿಂದೊದಗಿದ ಶಕ್ತಿಯ ಫಲವಾಗಿ, ಅಮೋನಿಯಮ್ ನೈಟ್ರೇಟ್ ಆಗಿ ಪರಿವರ್ತನೆ ಹೊಂದಿ ಮಣ್ಣಿಗೆ ಸೇರಿ ಸಸ್ಯಗಳಿಗೊದಗುತ್ತದೆ. ಸಸ್ಯ ಅಥವಾ ಸೇಂದ್ರಿಯ ವಸ್ತುಗಳ ವಿಘಟನೆಯಾದಾಗ ಪುನಃ ಬಿಡುಗಡೆಯಾಗಿ ವಾಯುವನ್ನು ಸೇರುತ್ತದೆ. ಇದಕ್ಕೆ ಸಾರಜನಕ ಚಕ್ರ ಎಂದು ಹೆಸರು.

Nitrogen Fixation
ಸಾರಜನಕ ಸ್ಥಿರೀಕರಣ. ಮಣ್ಣಿನಲ್ಲಿರುವ ಸೂಕ್ಷ್ಮಜೀವಿಗಳ ಕ್ರಿಯೆಯಿಂದ ವಾಯುವಿನಲ್ಲಿರುವ ಅನಿಲ ರೂಪದ ಸಾರಜನಕ, ಸಾವಯವ ಸಂಯುಕ್ತವಾಗುವ ಕ್ರಿಯೆ.

Nitrification
ನೈಟ್ರೀಕರಣ. ಸಾರಜನಕ ವಸ್ತುಗಳಿಂದ ನೈಟ್ರೇಟ್ ಉತ್ಪತ್ತಿಯಾಗುವಿಕೆ.


logo