logo
भारतवाणी
bharatavani  
logo
Knowledge through Indian Languages
Bharatavani

Krishi Rasayana Shastra Shabdartha Nirupanavali (English-Kannada)
A B C D E F G H I J K L M N O P Q R S T U V W X Y Z

Ideal Gas
ಆದರ್ಶ ಅನಿಲ. ಬಾಯಲ್ಸ್ ಮತ್ತು ಚಾರ್ಲ್ಸ್, ಅನಿಲ ನಿಯಮಗಳನ್ನು ಸಂಪೂರ್ಣವಾಗಿ ಪಾಲಿಸುವ ಅನಿಲಗಳು.

Ideal Solution
ಆದರ್ಶ ದ್ರಾವಣ. ಎಲ್ಲಾ ಪ್ರಬಲತೆ ಮತ್ತು ಉಷ್ಣತೆಗಳಲ್ಲಿಯೂ ವ್ಹಾಂಟ್ ಹಾಫ್ ನ ತತ್ವವನ್ನು ಪರಿಪಾಲಿಸುವ ದ್ರಾವಣ. PV = RT P = ಒತ್ತಡ; V = ಗಾತ್ರ; R = ಸ್ಥಿರ; T = ಉಷ್ಣತೆ.

Igneous Rock
ಅಗ್ನಿಶಿಲೆ. ಭೂಮಿಯಲ್ಲಿ ಕರಗಿದ ಶಿಲಪಾಕವು ತಂಪಾಗುವುದರಿಂದ ಉಂಟಾಗುವ ಶಿಲೆಯ ಲಾವಾರಸದ ಘನೀಕಣದಿಂದುಂಟಾಗುವ ಶಿಲೆ.

Illuviation
ಇಲ್ಯೂವಿಯೇಷನ್; ಅಧೋಗಮನ; ಶೇಖರಣೆ; ವಸ್ತುಸಂಚಯ. ದ್ರಾವಣದ ಮುಖಾಂತರ ಮಣ್ಣಿನ ವಸ್ತುಗಳು ಕೆಳವಲಯಗಳಲ್ಲಿ ಸಂಗ್ರಹಣೆಯಾಗುವ ವಿಧಾನ.

Immature Soil
ಅಪಕ್ವ ಮಣ್ಣು. ವಲಯಗಳನ್ನು ಹೊಂದಿರದ, ಮೇಲಿನಿಂದ ಕೊಚ್ಚಿಬಂದು ಶೇಖರಣೆಯಾಗುವುದರಿಂದುಂಟಾಗುವ ಮಣ್ಣು.

Impulsive Force
ಅಘಾತ ಬಲ. ಅತ್ಯಲ್ಪ ಕಾಲ ಪ್ರಯೋಗವಾಗುವ ಅತ್ಯಧಿಕ ಪ್ರಮಾಣದ ಜಲಗಳಿಗೆ ಅಘಾತ ಬಲಗಳೆಂದು ಹೆಸರು.

Indicator
ಸೂಚಕ. ತನ್ನ ಬಣ್ಣದ ತೀವ್ರ ಬದಲಾವಣೆಯಿಂದ ನಿಶ್ಚಿತವಾದ ರಾಸಾಯನಿಕ ಕ್ರಿಯೆಯ ಪೂರ್ಣತೆಯನ್ನು ಸೂಚಿಸುವ, ಗಾತ್ರ ವಿಶ್ಲೇಷಣದಲ್ಲಿ ಉಪಯೋಗಿಸುವ ವಸ್ತುವಿಗೆ, ‘ಸೂಚಕ’ ವೆಂದು ಹೆಸರು.

Infiltration
ಇಳಿಯುವಿಕೆ; ಬಸಿಯುವಿಕೆ. ಮಣ್ಣಿನ ಮೇಲೆ ಬಿದ್ದ ನೀರು ಭೂಮಿಯಲ್ಲಿ ಕೆಳ ಮುಖವಾಗಿ ಇಳಿದು ಹೋಗುವುದು.

Infiltration Capacity
ಇಳಿಯುವಿಕೆಯ ಸಾಮರ್ಥ್ಯ; ಬಸಿಯುವಿಕೆಯ ಸಾಮರ್ಥ್ಯ. ನೀರು ಭೂಮಿಯಲ್ಲಿ ಇಳಿಯುವಿಕೆಯ ಸಾಮರ್ಥ್ಯ.

Internal Energy
ಆಂತರಿಕ ಶಕ್ತಿ. ಪ್ರತಿಯೊಂದು ವಸ್ತುವಿನ ಅಂತರ್ಗತ ನಿರ್ದಿಷ್ಟ ಶಕ್ತಿ.


logo