logo
भारतवाणी
bharatavani  
logo
Knowledge through Indian Languages
Bharatavani

Krishi Rasayana Shastra Shabdartha Nirupanavali (English-Kannada)
A B C D E F G H I J K L M N O P Q R S T U V W X Y Z

Lacustrine Soil
ಸರೋವರಮಣ್ಣು; ಸರೋಮೃತ್ತಿಕಾ. ಸರೋವರ ಮತ್ತು ಹೊಂಡದ ಮಣ್ಣಿನಿಂದ ಶೇಖರವಾಗಿರುವ ಮಣ್ಣು.

Lactometer
ಕ್ಷೀರಮಾಪಕ; ಕ್ಷೀರಗುರುತ್ವ ಮಾಪಕ. ಹಾಲನ್ನು ಪರೀಕ್ಷಿಸುವ ವಿಶಿಷ್ಟ ಉದ್ದೇಶಕ್ಕಾಗಿಯೇ ಉಪಯೋಗಿಸುವ ಸಾಪೇಕ್ಷ ಸಾಂದ್ರತೆ ಮಾಪಕ.

Lambert’s Law
ಲ್ಯಾಂಬರ್ಟನ ನಿಯಮ. ಒಂದು ವಸ್ತುವಿನಿಂದ ಹೀರಲ್ಪಟ್ಟ ಏಕವರ್ಣ ಬೆಳಕಿನ ಪರಿಮಾಣ ಬಿದ್ದ ಬೆಳಕಿನ ತೀವ್ರತೆಗೆ ಸರಳ ಪ್ರಮಾಣದಲ್ಲಿರುತ್ತದೆ.

Land Classification
ಭೂವರ್ಗೀಕರಣ. ಭೂ ಹಿಡುವಳಿಗಳನ್ನು ಬೇರೆ ಬೇರೆ ಉಪಯೋಗಕ್ಕಾಗಿ ಅದರ ಸಾಮರ್ಥ್ಯಗಳನುಸಾರ ವಿಂಗಡಿಸುವ ವ್ಯವಸ್ಥೆ.

Land Capability
ಭೂಸಾಮರ್ಥ್ಯ. ಇದು ಭೂಮಿಯ ಬಳಕೆಯ ಸಾಮರ್ಥ್ಯವನ್ನು ಸೂಚಿಸುತ್ತದೆ. ಭೂಸಾಮರ್ಥ್ಯವನ್ನು ಆಧಾರವಾಗಿಟ್ಟುಕೊಂಡು, ಭೂಮಿಯನ್ನು ಒಂದು ನಿರ್ದಿಷ್ಟ ಉಪಯೋಗಕ್ಕೆ ಬೆಳಸಿಕೊಳ್ಳುವುದು ಕೃಷಿಯಲ್ಲಿ ಒಂದು ಮುಖ್ಯವಾದ ಪದ್ಧತಿ.

Land Reclamation
ಭೂಪುನರುತ್ಥಾನ. ಭೂಮಿಯ ಗುಣ ಮತ್ತು ಸ್ವಭಾವವನ್ನು ಬದಲಿಸಿ ಅದನ್ನು ತೀವ್ರ ಬಳಕೆಗೆ ತರಲು ಅನುಸರಿಸುವ ಕ್ರಮ.

Latent Heat of Fusion
ದ್ರವ ಗುಪ್ತೋಷ್ಣ. ಒಂದು ಘನ ವಸ್ತುವನ್ನು ತನ್ನ ಹೆಪ್ಪುಗಟ್ಟುವ ಬಿಂದುವಿನಲ್ಲಿ ದ್ರವವಾಗಿ ಪರಿವರ್ತಿಸಲು ಏಕಮಾನ ದ್ರವ್ಯ ಪರಿಮಾಣಕ್ಕೆ ಪ್ರಯೋಗಿಸಬೇಕಾಗದ ಉಷ್ಣತೆ.

Latent Heat of Vapourisation
ಬಾಷ್ಪಗುಪ್ತೋಷ್ಣ; ಆವಿಯಾಗುವ ಗುಪ್ತೋಷ್ಣ. ಒಂದು ಘನ ವಸ್ತುವನ್ನು ತನ್ನ ಕುದಿಯುವ ಬಿಂದುವಿನಲ್ಲಿ ಆವಿಯನ್ನಾಗಿ ಮಾಡಲು ಏಕಮಾನ ದ್ರವ್ಯ ಪರಿಮಾಣಕ್ಕೆ ಪ್ರಯೋಗಿಸಬೇಕಾದ ಉಷ್ಣತೆ.

Lava
ಶಿಲಾರಸ. ಭೂಮಿಯೊಳಗಿನ ತೆರವಿನಿಂದ ಮೇಲ್ಮೈಗೆ ಉಕ್ಕಿ ಬರುವ ಶಿಲೆಯ ಬಿಸಿ ದ್ರವ.

Law of Conservation of Matter
ವಸ್ತು ನಿತ್ಯತ್ವ ನಿಯಮ. ರಾಸಾಯನಿಕ ಬದಲಾವಣೆ ನಡೆದಾಗ ವಸ್ತುವು ಸೃಷ್ಟಿಯೂ ಆಗುವುದಿಲ್ಲ, ಲಯವೂ ಆಗುವುದಿಲ್ಲ. ಸಂಯುಕ್ತ ವಸ್ತುವಿನ ತೂಕವು ಅದರ ಘಟಕಗಳಾದ ಮೂಲ ವಸ್ತುಗಳ ತೂಕಕ್ಕೆ ಸಮ.


logo