logo
भारतवाणी
bharatavani  
logo
Knowledge through Indian Languages
Bharatavani

Krishi Rasayana Shastra Shabdartha Nirupanavali (English-Kannada)
A B C D E F G H I J K L M N O P Q R S T U V W X Y Z

Fallowing
ಬೀಳು ಬಿಡುವಿಕೆ. ಬೆಳೆ ತೆಗೆಯಲು ಉಪಯೋಗಿಸುವ ಭೂಮಿಯನ್ನು ಕೆಲವು ಕಾಲ ಯಾವ ಬೆಳೆಯನ್ನೂ ತೆಗೆಯದೆ ಪಾಳು ಬಿಡುವುದು. ಈ ಪದ್ಧತಿಯಿಂದ ಭೂಮಿಯ ಫಲವತ್ತತೆಯನ್ನು ವೃದ್ಧಿಗೊಳಿಸಬಹುದು.

Feld spar
ಫೆಲ್ ಸ್ಪಾರ್; ಕ್ಷೇತ್ರಖನಿಜ. ಇವುಗಳು ಸೋಡಿಯಂ, ಪೊಟ್ಯಾಸಿಯಂ, ಕ್ಯಾಲ್ಸಿಯಂ ಮತ್ತು ಬೇರಿಯುಗಳ ನಿರ್ಜಲ ಅಲ್ಯೂಮಿನಿಯಂ ಸಿಲಿಕೇಟುಗಳು.

Fermentation
ಹುಳಿಹಿಡಿಯುವುದು; ಕಳಿಯುವಿಕೆ. ಬ್ಯಾಕ್ಟೀರಿಯಾ ಮತ್ತು ಪಾಚಿಗಳ ದೇಹವರ್ಧನ ಕ್ರಿಯೆಯಿಂದುಂಟಾಗುವ ವಿಶಿಷ್ಟ ಉತ್ಕರ್ಷಣ ವಿಧಾನ.

Fertilizer
ರಾಸಾಯನಿಕ ಗೊಬ್ಬರ. ಸಸ್ಯಗಳ ಬೆಳವಣಿಗೆಗೆ ಅವಶ್ಯವಾದ ಯಾವುದಾದರೊಂದು ಪೋಷಕಾಂಶವನ್ನು ಒದಗಿಸುವ ಈ ಪದಾರ್ಥಗಳು, ಸಾಮಾನ್ಯವಾಗಿ ನಿರಿಂದ್ರಿಯ ಸ್ಥಿತಿಯಲ್ಲಿರುತ್ತವೆ.

Fertilizer, Complete
ಸಂಪೂರ್ಣ ರಾಸಾಯನಿಕ ಗೊಬ್ಬರ. ಸಸ್ಯಗಳ ಬೆಳವಣಿಗೆಗೆ ಅವಶ್ಯಕವಾದಂತಹ ಸಾರಜನಕ, ರಂಜಕ ಮತ್ತು ಪೊಟ್ಯಾಷ್ ಗಳನ್ನೊಳಗೊಂಡ ರಾಸಾಯನಿಕ ಗೊಬ್ಬರ.

Fertilizer, Incomplete
ಅಪೂರ್ಣ ರಾಸಾಯನಿಕ ಗೊಬ್ಬರ. ಸಸ್ಯಗಳ ಬೆಳವಣಿಗೆಗೆ ಅವಶ್ಯಕವಾದಂತಹ ಸಾರಜನಕ, ರಂಜಕ ಮತ್ತು ಪೊಟ್ಯಾಷ್ ಗಳಲ್ಲಿ, ಯಾವುದಾದರೊಂದು ಅಥವಾ ಎರಡು ಪೊಷಕಗಳನ್ನು ಒದಗಿಸುವ ರಾಸಾಯನಿಕ ಗೊಬ್ಬರ.

Fertilizer Grade
ರಾಸಾಯನಿಕ ಗೊಬ್ಬರದ ದರ್ಜೆ. ರಾಸಾಯನಿಕ ಗೊಬ್ಬರದಲ್ಲಿರುವ ಸಾರಜನಕ, ರಂಜಕ ಮತ್ತು ಪೊಟ್ಯಾಷ್ ಗಳ ಶೇಕಡಾ ಪ್ರಮಾಣವನ್ನು ಸೂಚಿಸುವ ವರ್ಗೀಕರಣ.

Fertilizer Placement
ರಾಸಾಯನಿಕ ಗೊಬ್ಬರ ಹಾಕುವಿಕೆ. ಸಸ್ಯಗಳ ಬೇರಿನ ಆವರಣಕ್ಕೆ ರಾಸಾಯನಿಕ ಗೊಬ್ಬರಗಳನ್ನು ಹಾಕುವ ವಿಧಾನ.

Field Capacity
ಜಮೀನಿನ ಜಲಧಾರಣ ಸಾಮರ್ಥ್ಯ. ಮಳೆಯಿಂದ ಇಲ್ಲವೆ ನೀರಾವರಿಯಿಂದ ಭೂಮಿ ಸಂಪೂರ್ಣ ನೆನೆದ ಮೇಲೆ, ನೀರಿನ ಕೆಳಮುಖ ಚಲನೆ ನಿಂತ ನಂತರ ಮಣ್ಣಿನಲ್ಲಿ ಉಳಿಯುವ ತೇವಾಂಶ. ಈ ತೇವಾಂಶವನ್ನು ಮಣ್ಣಿನ ಶೇಕಡಾ ರೂಪವಾಗಿ ನಮೂದಿಸುತ್ತಾರೆ.

Filler
ಭರ್ತಿ ಪದಾರ್ಥ. ರಾಸಾಯನಿಕ ಗೊಬ್ಬರದ ಮಿಶ್ರಣವನ್ನು ಒಂದು ಗೊತ್ತಾದ ತೂಕಕ್ಕೆ ತರಲು ಬೆರೆಸುವ ಗೊಬ್ಬರದಲ್ಲಿನ, ಜಡ ಅಥವಾ ನಿಷ್ಕ್ರಿಯ ವಸ್ತು.


logo