logo
भारतवाणी
bharatavani  
logo
Knowledge through Indian Languages
Bharatavani

Krishi Rasayana Shastra Shabdartha Nirupanavali (English-Kannada)
A B C D E F G H I J K L M N O P Q R S T U V W X Y Z

Gay Lussac’s Law
ಗೇಲುಸ್ಸಾಕನ ನಿಯಮ. ಒಂದೇ ಉಷ್ಣತೆ ಹಾಗೂ ಒತ್ತಡಗಳ ಪರಿಸ್ಥಿತಿಯಲ್ಲಿ ಅನಿಲಗಳು ತಮ್ಮಲ್ಲಿ ವರ್ತಿಸಿದರೆ, ವರ್ತಿಸಿದ ಹಾಗೂ ಸಿದ್ಧ ಅನಿಲಗಳ ಗಾತ್ರಗಳ ಪ್ರಮಾಣ (ಅನುಪಾತ) ಗಳು ಪೂರ್ಣಾಂಕಗಳಲ್ಲಿರುತ್ತವೆ.

Geology
ಭೂ ವಿಜ್ಞಾನ. ಭೂಮಿ ಮತ್ತು ಇತರ ಗ್ರಹಗಳಿಗೆ ಹಾಗೂ ಸೂರ್ಯನಿಗೆ ಇರುವ ಸಂಬಂಧವನ್ನು ಬಿಟ್ಟು, ಭೂಮಿಯ ವಿವಿಧ ವಿಷಯಗಳನ್ನು ಚರ್ಚಿಸುವ ವಿಜ್ಞಾನ.

Germicide
ಕ್ರಿಮಿನಾಶಕ. ರೋಗಕಾರಕ ಜೀವಿಗಳನ್ನು ಕೊಲ್ಲುವ ವಸ್ತು.

Glacial Soil
ಹಿಮ ಮಣ್ಣು; ಮಂಜು ಮಣ್ಣು. ಮಂಜು ಕರಗಿ ಪ್ರವಾಹವಾಗಿ ಹರಿಯುವುದರಿಂದ ಸಾಗಿಸಲ್ಪಟ್ಟ ವಸ್ತುಗಳಿಂದುಂಟಾದ ಮಣ್ಣು.

Gravitational Water
ಗುರುತ್ವಾಕರ್ಷಿತ ನೀರು. ಭೂಮಿಯ ಆಕರ್ಷಣೆಯ ಪ್ರಭಾವದಿಂದಾಗಿ, ಮಣ್ಣಿನಲ್ಲಿ ನಿಲ್ಲದೆ ತಳಮುಖವಾಗಿ ಹರಿದು ಹೋಗುವ ನೀರು.

Ground Water
ಭೂ ಅಂತರ್ಗತಜಲ ನೆಲಮಟ್ಟದ ಕೆಳಗಿನ ರಂಧ್ರಾವರಣವನ್ನು ತುಂಬಿರುವ ನೀರು.

Green Leaf Manure
ಹಸುರೆಲೆ ಗೊಬ್ಬರ. 6-8 ವಾರಗಳ ಕಾಲ ಬೆಳೆಸಿದ ಅಪ್ಸೆಣಬು, ಹುರುಳಿ, ಹಲಸಂದೆಯಂತಹ ಹಸುರು ಸಸ್ಯ ವಸ್ತು ಇಲ್ಲವೇ ಹೊಂಗೆ, ಗ್ಲಿರಿಸಿಡಿಯಾ ಮುಂತಾದ ಮರಗಳಿಂದ ಕತ್ತರಿಸಿದ ಹಸಿರೆಲೆ ವಸ್ತು ಇವನ್ನು ಭೂಮಿಗೆ ಸೇರಿಸಿದಾಗ ಅದರ ಫಲವತ್ತತೆ ಹೆಚ್ಚುತ್ತದೆ.

Great Soil Groups
ಮಣ್ಣಿನ ಪ್ರಧಾನ ಗುಂಪುಗಳು. ಮಣ್ಣಿನ ವರ್ಗೀಕರಣದ ಒಂದು ಹಂತ. ಇದು ಒಂದೇ ವಿಧವಾದ ಗುಣಧರ್ಮಗಳನ್ನುಳ್ಳ ಒಂದು ಅಥವಾ ಹೆಚ್ಚು ಕುಟುಂಬಗಳನ್ನೊಳಗೊಂಡಿರುತ್ತದೆ.

Granular Fertilizer
ಹರಳಾಕೃತಿಯ ರಸಾಯನಿಕ ಗೊಬ್ಬರ. ಸುಮಾರು 1/10 ಅಂಗುಲ ವ್ಯಾಸವುಳ್ಳ ಹರಳುಗಳಿಂದ ಕೂಡಿದ ರಾಸಾಯನಿಕ ಗೊಬ್ಬರ.

Ground Lime Stone
ಸುಣ್ಣ ಕಲ್ಲು ಪುಡಿ. ಕ್ಯಾಲ್ಸಿಯಂ ಅಥವಾ ಡಾಲೊಮೈಟ್ ಸುಣ್ಣಕಲ್ಲನ್ನು ಪುಡಿಮಾಡಿ, 10 ಮೆಷ್ ಗಳಿರುವ ಜರಡಿಯಲ್ಲಿ ಸೋಸಿದಾಗ, ಜರಡಿಯ ಮೂಲಕ ಹಾದು ಹೋಗುವ ವಸ್ತು.


logo