logo
भारतवाणी
bharatavani  
logo
Knowledge through Indian Languages
Bharatavani

Krishi Rasayana Shastra Shabdartha Nirupanavali (English-Kannada)
A B C D E F G H I J K L M N O P Q R S T U V W X Y Z

Salt
ಲವಣ. ಒಂದು ಲೋಹ ಅಥವಾ ಲೋಹವರ್ಗದ ಮೂಲವು ಒಂದು ಅಲೋಹ ಅಥವಾ ಲೋಹವರ್ಗದ ಮೂಲದೊಂದಿಗೆ ಸಂಯೋಜಿತವಾಗಿ ಹೊರಬಂದ ಸಂಯುಕ್ತ ವಸ್ತು.

Saline Soil
ಚೌಳು ಮಣ್ಣು. ಸಾಕಷ್ಟು ಕರಗದ ಲವಣಾಂಶಗಳಿಂದ ಕೂಡಿದ್ದು ಸಸ್ಯಗಳ ಬೆಳವಣಿಗೆಗೆ ಅಡಚಣೆಯನ್ನುಂಟುಮಾಡುವ ಮಣ್ಣು.

Saline Alkali Soil
ಚೌಳುಕ್ಷಾರ ಮಣ್ಣು. ಈ ಮಣ್ಣುಗಳಲ್ಲಿನ ಲವಣಾಂಶ ಹಾಗೂ ವಿನಿಮಯ ಸೋಡಿಯಂ ಎರಡೂ, ಸಸ್ಯ ಬೆಳವಣಿಗೆ ಮತ್ತು ಮಣ್ಣು ರಚನೆಗೆ ಅನಾನುಕೂಲವಾಗುವಷ್ಟು ಮಟ್ಟದಲ್ಲಿರುತ್ತದೆ. ವಿನಿಮಯ ಸೋಡಿಯಂ ಶೇಕಡಾಂಶ 15ಕ್ಕೆ ಮೀರಿದ್ದು ವಿದ್ಯುತ್ ವಾಹಕತ್ವ 4 ಮಿಲಿಮ್ಹೋಸ್ ಗಿಂತ ಹೆಚ್ಚಿರುತ್ತದೆ. pH (ಆಮ್ಲಸೂಚಿ) 8.5 ಕ್ಕಿಂತ ಹೆಚ್ಚಿರುವುದಿಲ್ಲ.

Salinization
ಚೌಳೀಕರಣ ಅಥವಾ ಲವಣೀಕರಣ. ನೀರಿನಲ್ಲಿ ಕರಗುವ ಕ್ಲೋರೈಡ್, ಸಲ್ಫೇಟ್, ಇಂಥ ಲವಣಗಳು ಮಣ್ಣಿನಲ್ಲಿ ಶೇಖರಣೆಯಾಗುವಿಕೆ.

Sand
ಮರಳು. ಸಣ್ಣ ಶಿಲೆ ಅಥವಾ ಖನಿಜಗಳ ಚೂರು, ಇದರ ವ್ಯಾಸ 2 ರಿಂದ 0.02 ಮಿ. ಮೀ. ನಷ್ಟಿರುತ್ತದೆ.

Sandy Clay
ಮರಳು ಜೇಡಿ. ಶೇಕಡ 35 ಅಥವಾ ಹೆಚ್ಚು ಜೇಡಿ ಮತ್ತು 45 ಅಥವಾ ಹೆಚ್ಚು ಮರಳನ್ನುಳ್ಳ ಮಣ್ಣು.

Sandy Clay Loam
ಮರಳು ಜೇಡಿ ಗೋಡು. ಶೇಕಡ 25 ರಿಂದ 35 ರಷ್ಟು ಜೇಡಿ, 45 ಅಥವಾ ಹೆಚ್ಚು ಮರಳು ಮತ್ತು 28 ಕ್ಕಿಂತ ಕಡಿಮೆ ಗೊಡನ್ನುಳ್ಳ ಮಣ್ಣು.

Sandy Loam
ಮರಳು ಗೋಡು. ಶೇಕಡ 50 ರಷ್ಟು ಮರಳು ಹಾಗೂ 20 ಕ್ಕಿಂತ ಕಡಿಮೆ ಗೋಡುಮಣ್ಣು.

Sandy Soil
ಮರಳು ಮಣ್ಣು. ಶೇಕಡ 70 ಕ್ಕಿಂತ ಹೆಚ್ಚು ಮರಳು ಉಳ್ಳ ಮಣ್ಣು.

Sand Deposits
ಮರಳು ನಿಕ್ಷೇಪ. ಪ್ರವಾಹ ಅಥವಾ ಗಾಳಿಯಿಂದ ಸಾಗಿಬಂದ ಮರಳು ತಟ್ಟೆ ಪ್ರದೇಶದಲ್ಲಿ ಪದರ ಪದರವಾಗಿ ಶೇಖರಣೆಯಾಗಿರುವುದು.


logo