logo
भारतवाणी
bharatavani  
logo
Knowledge through Indian Languages
Bharatavani

Krishi Rasayana Shastra Shabdartha Nirupanavali (English-Kannada)
A B C D E F G H I J K L M N O P Q R S T U V W X Y Z

Radiation
ವಿಕಿರಣ. ಯಾವ ಮಾಧ್ಯಮದ ಸಹಾಯವೂ ಇಲ್ಲದೇ ಉಷ್ಣ ಇಲ್ಲವೇ ಬೆಳಕು ಒಂದು ಪದಾರ್ಥದಿಂದ ಮತ್ತೊಂದು ಪದಾರ್ಥಕ್ಕೆ ಹರಿಯುವಿಕೆ.

Raoult’s Law
ರಾವೋಲ್ಟನ ನಿಯಮ. ಅನಿಲ ಒತ್ತಡ ಕಡಿಮೆಯಾಗುವಿಕೆ ವಿಲೀನ ವಸ್ತುವಿನ ಅಣು ತೂಕಕ್ಕೆ ಸಂಬಂಧಿಸಿರುತ್ತದೆ.

Raoult’s Law of Boiling Point
ರಾವೋಲ್ಟನ ಕುದಿಯುವ ಬಿಂದು ನಿಯಮ. ದ್ರಾವಕ ಕುದಿಯುವ ಬಿಂದುವಿನ ಏರಿಕೆ, ವಿಲೀನ ವಸ್ತುಗಳ ಪ್ರಬಲತೆಗೆ ಸರಳ ಪ್ರಮಾಣದಲ್ಲಿರುತ್ತದೆ.

Raoult’s Law of Freezing Point
ರಾವೋಲ್ಟನ ಘನೀಕರಣ ಬಿಂದು ನಿಯಮ. ದ್ರಾವಕ ಹೆಪ್ಪುಗಟ್ಟುವ ಬಿಂದುವಿನ ಕುಗ್ಗುವಿಕೆ, ವಿಲೀನ ವಸ್ತುಗಳ ಪ್ರಬಲತೆಗೆ ಸರಳ ಪ್ರಮಾಣದಲ್ಲಿರುತ್ತದೆ.

Reduction
ಅಪಕರ್ಷಣ. ಇದು ಉತ್ಕರ್ಷಣಕ್ಕೆ ತದ್ವಿರುದ್ಧವಾದದ್ದು. ಈ ಕ್ರಿಯೆಯಲ್ಲಿ ಧನ ವಿದ್ಯುತ್ ಅಥವಾ ಲೋಹದ ಪ್ರಮಾಣ ಹೆಚ್ಚಿಸುವುದು ಮತ್ತು ಋಣ ವಿದ್ಯುತ್ತಿನ ಅಥವಾ ಅಲೋಹದ ಪ್ರಮಾಣವು ಕಡಿಮೆಯಾಗುವುದು. ಆದ್ದರಿಂದ ಎಲ್ಲಾ ಅಪಕರ್ಷಣ ಕ್ರಿಯೆಗಳಲ್ಲಿ ಕೆಳಗಿನ ಸಂಗತಿಗಳನ್ನು ಕಾಣಬಹುದು. 1) ಯಾವುದಾದರೊಂದು ಮೂಲವಸ್ತು ಅಥವಾ ಸಂಯುಕ್ತದೊಡನೆ ಜಲಜನಕ ಅಥವಾ ಬೇರೆ ಯಾವುದಾದರೂ ಧನ ವಿದ್ಯುತ್ತಿನ ಮೂಲವಸ್ತು ಇಲ್ಲವೇ ಮೂಲಗಳ ಸಂಯೋಜನೆ ಅಥವಾ ಅವುಗಳ ಪ್ರಮಾಣದಲ್ಲಿ ಹೆಚ್ಚಳ. 2) ಒಂದು ಸಂಯುಕ್ತದಿಂದ ಆಮ್ಲಜನಕ ಅಥವಾ ಯಾವುದಾದರೊಂದು ಋಣ ವಿದ್ಯುತ್ತಿನ ಮೂಲವಸ್ತು ಇಲ್ಲವೇ ಮೂಲಗಳ ವಿಸರ್ಜನೆ ಅಥವಾ ಅವುಗಳ ಪ್ರಮಾಣದಲ್ಲಿ ಇಳಿತ. 3) ವಸ್ತುವಿಗೆ ಇಲೆಕ್ಟ್ರಾನ್ ಗಳ ಲಾಭವಾಗುವಿಕೆ.

Reduction Equivalent
ಅಪಕರ್ಷಣ ಸಮಾನತೆ. ಒಂದು ಗ್ರಾಂ ಅಣುತೂಕದಷ್ಟು ಋಣಾಂಶಗಳನ್ನು ಬಿಟ್ಟುಕೊಡುವ ಅಪಕರ್ಷಣಕಾರಿಯ ತೂಕ.

Regolith
ರಿಗೋಲಿತ್; ಶಿಲೆಯ ಮೇಲಿನ ಹೊದ್ದಿಕೆ. ಮೂಲ ಬಂಡೆಯ ಮೇಲೆ ಇರುವ ಸಡಿಲವಾದ ಕಲ್ಲುವಸ್ತು ಮತ್ತು ಅದರ ಮೇಲೆ ಇರುವ ಮಣ್ಣನ್ನು ಒಟ್ಟಾಗಿ ರಿಗೋಲಿತ್ ಎಂದು ಕರೆಯುತ್ತಾರೆ.

Regosols
ರೆಗೋಸಾಲ್ಸ್. ಎಸೋನಲ್ (ವಲಯರಹಿತ) ಗುಂಪಿಗೆ ಸೇರಿದ ಈ ಮಣ್ಣು ಮೃದು ಖನಿಜ ವಸ್ತುಗಳಿಂದ ಕೂಡಿದ್ದು ಮರಳು ಗುಡ್ಡ ಮತ್ತು ಕಣಿವೆಯ ಬುಡಗಳಲ್ಲಿ ಕಂಡು ಬರುತ್ತದೆ.

Regur
ರೆಗುರ್; ಎರೆಭೂಮಿ; ಕರೆಭೂಮಿ. ಉಷ್ಣವಲಯದ ಈ ಮಣ್ಣಿನಲ್ಲಿ ಹೇರಳವಾದ ಸುಣ್ಣದ ಶೇಖರಣೆ ಕಂಡು ಬರುತ್ತದೆ. ಪ್ರತ್ಯಾಮ್ಲದಿಂದ ಸಂತೃಪ್ತಿಯಾಗಿರುವ ನಮ್ಮ ದೇಶದ ಕಪ್ಪು ಭೂಮಿಗಳನ್ನು ಈ ಹೆಸರಿನಿಂದ ಕರೆಯುತ್ತಾರೆ.

Regradation
ಪುನರುದ್ಭವತೆ; ಪುನರುತ್ಥತೆ. ಮಣ್ಣಿನಲ್ಲಿ ಲವಣಗಳು ಪುನರ್ ಶೇಖರಣೆಯಾಗುವಿಕೆ.


logo