logo
भारतवाणी
bharatavani  
logo
Knowledge through Indian Languages
Bharatavani

Krishi Rasayana Shastra Shabdartha Nirupanavali (English-Kannada)
A B C D E F G H I J K L M N O P Q R S T U V W X Y Z

Base
ಪ್ರತ್ಯಾಮ್ಲ. ಕೆಂಪು ಲಿಟ್ ಮಸ್ ಕಾಗದವನ್ನು ನೀಲಿ ಬಣ್ಣಕ್ಕೆ ತಿರುಗಿಸಬಲ್ಲ, ಒಗರು-ಕಹಿ ರುಚಿ ಉಳ್ಳ, ಸಾಬೂನು ಸ್ಪರ್ಶವುಳ್ಳ, ಸಾಕಷ್ಟು ಹೈಡ್ರಾಕ್ಸಿಲ್ ಅಯಾನುಗಳನ್ನೊಳಗೊಂಡ ವಸ್ತು. ಲೆವಿಸ್ ಪ್ರತ್ಯಾಮ್ಲ : ಬೇರೆ ಅಣು ಇಲ್ಲವೆ ಅಯಾನ್ ಗಳಲ್ಲಿನ ಪರಮಾಣುವಿನಿಂದ ಪಾಲುಗೊಳ್ಳಬಹುದಾದ ಜೋಡಿ ಎಲೆಕ್ಟ್ರಾನುಗಳನ್ನೊಳಗೊಂಡ ವಸ್ತು.

Basicity
ಪ್ರತ್ಯಾಮ್ಲೀಯತೆ. ಆಮ್ಲದಣುಗಳಲ್ಲಿರುವ, ಪಲ್ಲಟಿಸಬಹುದಾದ ಜಲಜನಕದ ಪರಮಾಣುಗಳ ಸಂಖ್ಯೆಗೆ, ಆಮ್ಲದ ಪ್ರತ್ಯಾಮ್ಲೀಯತೆ ಎಂದು ಹೆಸರು.

Basic Salts
ಪ್ರತ್ಯಾಮ್ಲೀಯ ಲವಣಗಳು. ಆಮ್ಲದ ಮೂಲ ಘಟಕದಿಂದ ಪೂರ್ಣವಾಗಿ ಸ್ಥಾನಾಂತರ ಹೊಂದದ ಪ್ರತ್ಯಾಮ್ಲದ ಹೈಡ್ರಾಕ್ಸಿಲ್ ಅಥವಾ ಆಕ್ಸೈಡ್ ಇದ್ದ ಲವಣಗಳು.

Basic Oxides
ಪ್ರತ್ಯಾಮ್ಲೀಯ ಆಕ್ಸೈಡ್ ಗಳು, ಆಮ್ಲಗಳೊಡನೆ ವರ್ತಿಸಿ ಲವಣ ಮತ್ತು ನೀರನ್ನುಂಟುಮಾಡುವ ಆಕ್ಸೈಡುಗುಳು.

Bactericide
ಬ್ಯಾಕ್ಟೀರಿಯಾ ನಾಶಕ. ಬ್ಯಾಕ್ಟೀರಿಯಾ ಮೇಲೆ ಪ್ರತಿಕ್ರಿಯೆ ತೋರಿ ಅವುಗಳನ್ನು ನಾಶಮಾಡುವ ವಸ್ತು.

Bacteriostatic Agent
ಬ್ಯಾಕ್ಟೀರಿಯಾ ಸ್ಥಿರಕಾರಕ. ಬ್ಯಾಕ್ಟೀರಿಯಾಗಳು ವೃದ್ಧಿಯಾಗುವುದನ್ನು ಮಾತ್ರ ತಡೆಯಬಲ್ಲ, ಹಾಗೂ ಬ್ಯಾಕ್ಟೀರಿಯಾಗಳನ್ನು ಕೊಲ್ಲುವ ಶಕ್ತಿ ಇರುವ ವಸ್ತು.

Bacterium
ಬ್ಯಾಕ್ಟೀರಿಯಂ. ಸಸ್ಯವರ್ಗದಲ್ಲಿ ಇದು ಕೆಳಮಟ್ಟಕ್ಕೆ ಸೇರಿದ ಏಕಕೋಶ ಜೀವಿ; ಇದನ್ನು ಸೂಕ್ಷ್ಮ ದರ್ಶಕ ಯಂತ್ರದಿಂದ ಮಾತ್ರ ನೋಡಬಹುದು.

Base Exchange
ಪ್ರತ್ಯಾಮ್ಲ ವಿನಿಮಯ; ಧನವಿದ್ಯುದಣು ವಿನಿಮಯ. ಅಸ್ಫಟಿಕ ಕೇಂದ್ರದಲ್ಲಿ ಮೇಲ್ಮೈ ಮೇಲೆ ಧನ ಅಯಾನುಗಳು ಹೀರಲ್ಪಟ್ಟು, ಅದಕ್ಕೆ ಪ್ರತಿಯಾಗಿ ಸಮಜಲ ಮೊತ್ತದ ಬೇರೆ ಧನ ಅಯಾನುಗಳು ಬಿಡುಗಡೆ ಹೊಂದುವುದಕ್ಕೆ ಪ್ರತ್ಯಾಮ್ಲ ವಿನಿಮಯ ಎಂದು ಹೆಸರು

Base Map Soil
ಮಣ್ಣಿನ ಆಧಾರ ನಕಾಶೆ. ಒಂದು ಪ್ರದೇಶದಲ್ಲಿ ಇರುವ ವಿವಿಧ ರೀತಿಯ ಮಣ್ಣುಗಳ ಸ್ಥಳ ಮತ್ತು ವ್ಯಾಪ್ತಿಗಳನ್ನು ತೋರಿಸುವ ನಕ್ಷೆ. ಇದರಲ್ಲಿ ಭೂಮಿಯನ್ನು ವ್ಯವಸಾಯಕ್ಕೆ ಉಪಯೋಗಿಸಿಕೊಳ್ಳಲು ಉಪಯುಕ್ತವಾದ ಹಲವು ವಿವರಗಳನ್ನು ಕೊಡಲ್ಪಟ್ಟಿರುತ್ತದೆ.

Base Saturation
ಪ್ರತ್ಯಾಮ್ಲ ಸಂತೃಪ್ತಿ. ಒಂದು ವಸ್ತುವಿನ ವಿನಿಮಯ ಸಂಕೀರ್ಣ ಜಲಜನಕವಲ್ಲದೆ ಉಳಿದ ಧನ ಅಯಾನುಗಳಿಂದ ತೃಪ್ತಿಯಾಗಿದೆ ಎನ್ನುವುದನ್ನು ಸೂಚಿಸುತ್ತದೆ. ಇದನ್ನು ಒಟ್ಟು ವಿನಿಮಯ ಸಾಮರ್ಥ್ಯದ ಶೇಕಡ ಆಗಿ ಸೂಚಿಸುತ್ತಾರೆ.


logo