logo
भारतवाणी
bharatavani  
logo
Knowledge through Indian Languages
Bharatavani

Krishi Rasayana Shastra Shabdartha Nirupanavali (English-Kannada)
A B C D E F G H I J K L M N O P Q R S T U V W X Y Z

Hard Pan
ಗಟ್ಟಿ ಪದರ; ಮಣ್ಣಿನ ಗಟ್ಟಿಸ್ತರ. ಗಟ್ಟಿ ಅಥವಾ ಜಿಗಟು ಮಣ್ಣಿನ ಪದರ. ಈ ಮಣ್ಣು ಮರಳು, ಜೇಡಿ ಕಬ್ಬಿಣದ ಆಕ್ಸೈಡ್, ಸಿಲಿಕಾ ಅಥವಾ ಕ್ಯಾಲ್ಸಿಯಂ ಕಾರ್ಬೊನೇಟ್ ಗಳಿಂದ ಕೂಡಿರುತ್ತದೆ.

Half Bog Soils
ಅರೆಬಾಗ್ ಮಣ್ಣುಗಳು ಇಂಟ್ರಾಸೋನಲ್ ಗುಂಪಿಗೆ ಸೇರಿದ ಈ ಮಣ್ಣು, ಮೇಲ್ಭಾಗದಲ್ಲಿ ಎಲೆಕಸ ಅಥವಾ ದರಗಿನಿಂದ ಕೂಡಿರುತ್ತದೆ.

Heat of Combustion
ದಹನಶಾಖ; ದಹನೋಷ್ಣ. ಒಂದು ಗ್ರಾಂ ಅಣುಮೊತ್ತದ ಮೂಲ ವಸ್ತು ಇಲ್ಲವೆ ಸಂಯುಕ್ತ ವಸ್ತುವು ಸಂಪೂರ್ಣವಾಗಿ ದಹಿಸಿದಾಗ ಉತ್ಪತ್ತಿಯಾಗುವ, ಉಷ್ಣತೆಯ ಮೊತ್ತ.

Heat of Reaction
ಪ್ರತಿಕ್ರಿಯಾ ಶಾಖ; ಪ್ರತಿ ಕ್ರಿಯೋಷ್ಣ. ಒಂದು ರಾಸಾಯನಿಕ ಕ್ರಿಯೆಯು ಒಂದು ಗ್ರಾಂ ಅಣು ಮೊತ್ತದ ವರ್ತಿಸುವ ವಸ್ತುಗಳಲ್ಲಿ ಉತ್ಪತ್ತಿಯಾಗುವ ಉಷ್ಣತೆ.

Heat of Solution
ದ್ರಾವಣಶಾಖ; ದ್ರಾವಣೋಷ್ಣ. ಒಂದು ಗ್ರಾಂ ಅಣುವಿಲೀನಕ ವಸ್ತು ಸಾಕಷ್ಟು ಪ್ರಮಾಣದ ದ್ರಾವಕದಲ್ಲಿ ವಿಲೀನವಾದಾಗ, ಆ ವಸ್ತುವಿನಿಂದ ಉತ್ಪತ್ತಿಯಾಗುವ ಅಥವಾ ಹೀರಲ್ಪಡುವ ಉಷ್ಣತೆಯ ಮೊತ್ತ.

Henry’s Law
ಹೆನ್ರಿಯ ನಿಯಮ. ಉಷ್ಣತೆ ಸ್ಥಿರವಿದ್ದಾಗ ಕ್ಲುಪ್ತ ಗಾತ್ರದ ದ್ರವದಲ್ಲಿ ಕರಗುವ ಅನಿಲದ ತೂಕವು ಆ ಅನಿಲದ ಒತ್ತಡಕ್ಕೆ ಸಮನಾಗಿರುತ್ತದೆ.

Heterotrophic Organisms
ಪರಪೋಷಕೀಯ ಜೀವಿಗಳು. ಸಾವಯವ ವಸ್ತುವನ್ನು ಆಹಾರವಾಗಿ ಬಳಸಿ ಜೀವಿಸುವ ಜೀವಿಗಳು.

Herbicides
ಸಸ್ಯನಾಶಕಗಳು ಬೇಡವಾದ ಸಸ್ಯಗಳನ್ನು ನಾಶಮಾಡಲು ಬಳಸುವ ರಾಸಾಯನಿಕ ವಸ್ತುಗಳು.

Homologous Series
ಸಮಾನ ಸ್ಥಾನ ಶ್ರೇಣಿ. ಒಂದು ಸೂತ್ರಕ್ಕೆ ಹೊಂದಿಕೊಂಡಿರುವ ಒಂದೇ ವಿಧವಾದ ಇಂಗಾಲ ವಸ್ತುಗಳ ಶ್ರೇಣಿ.

Hook’s Law
ಹುಕ್ ನ ನಿಯಮ. ಸ್ಥಿರಸ್ಥಾಪಕತ್ವದ ಮಿತಿಯಲ್ಲಿ ಒಂದು ವಸ್ತುವಿನ ಒತ್ತಡ, ಅದರ ಎಳೆತಕ್ಕೆ ಅನು ಲೋಮವಾಗಿರುತ್ತದೆ.


logo