logo
भारतवाणी
bharatavani  
logo
Knowledge through Indian Languages
Bharatavani

Krishi Rasayana Shastra Shabdartha Nirupanavali (English-Kannada)
A B C D E F G H I J K L M N O P Q R S T U V W X Y Z

Oceanic Climate
ಸಾಗರ ವಾಯುಗುಣ. ಉಷ್ಣತೆ ಅತಿ ಹೆಚ್ಚು ಅಥವಾ ಅತಿ ಕಡಿಮೆ ಆಗದ ಸಮುದ್ರ ತೀರದ ವಾಯುಗುಣ.

Ohm
ಓಮ್. ವಿದ್ಯುತ್ ನಿರೋಧಕ ಶಕ್ತಿಯನ್ನು ಅಳೆಯುವ ಏಕಮಾನ.

Ohm’s Law
ಓಮ್ ನ ನಿಯಮ. ಪ್ರವಾಹ ಮಾರ್ಗದಲ್ಲಿ ಚಲಿಸುತ್ತಿರುವ ವಿದ್ಯುತ್ ಶಕ್ತಿಯು ಪ್ರಯೋಗಿಸಿದ ವಿದ್ಯುದ್ವಾಹಕ ಬಲಕ್ಕೆ ಸರಳ ಪ್ರಮಾಣದಲ್ಲಿರುತ್ತದೆ. E = IR E = ಮೇಲ್ಮೈ. I = ಆಂಪಿಯರನಲ್ಲಿ ಕರೆಂಟ್. R = ನಿರೋಧ (ಓಮ್ ನಲ್ಲಿ).

One Atmosphere
ಒಂದು ವಾಯುಭಾರ. ಶೂನ್ಯ ಡಿಗ್ರಿ ಸೆಂ. ಉಷ್ಣತೆಯಲ್ಲಿ ಆದರ್ಶಪ್ರಾಯ ವಾಯುಮಂಡಲದ ಒತ್ತಡವು 76 ಸೆಂಟಿಮೀಟರ್ ಪಾದರಸ ಎಂದು ನಾವು ಹೇಳುವಾಗ, ವಾಯು ಮಂಡಲದ ಒತ್ತಡವು 76 ಸೆಂಟಿಮೀಟರ್ ಅಥವಾ 760 ಮಿಲಿಮೀಟರ್ ಎತ್ತರದ ಪಾದರಸದ ಕಾಂಡವು ಹಾಕುವ ಒತ್ತಡದಷ್ಟೇ ಇರುತ್ತದೆ. ಈ ಒತ್ತಡವನ್ನು ಏಕಮಾನವಾಗಿ ಪರಿಗಣಿಸಲಾಗಿದೆ.

Open Formula Guarantee
ಸೂತ್ರದ ಬಹಿರಂಗ ನಿಖರತೆ. ರಾಸಾಯನಿಕ ಗೊಬ್ಬರದ ವಿಶ್ಲೇಷಣೆಯನ್ನು ಕೊಡುವುದೇ ಅಲ್ಲದೆ, ಅದರಲ್ಲಿರುವ ಇತರ ಘಟಕಗಳ ರಚನೆ, ಘಟಕದ ಮೊತ್ತ ಮುಂತಾದ ವಿವರಗಳ ನಿಖರತೆಯನ್ನು ನೀಡುವ ಸೂತ್ರ.

Order of Terms in Fertilizers
ರಾಸಾಯನಿಕ ಗೊಬ್ಬರ ಪೋಷಕಗಳ ಕ್ರಮ. ರಾಸಾಯನಿಕ ಗೊಬ್ಬರಗಳಲ್ಲಿರುವ ಪೋಷಕಗಳನ್ನು ಹೆಸರಿಸುವ ಕ್ರಮ ಈ ರೀತಿ ಇದೆ : (1) ಸಾರಜನಕ; (2) ರಂಜಕ ಮತ್ತು (3) ಪೊಟ್ಯಾಷ್.

Organic Phosphorus
ಸಾವಯವ ರಂಜಕ. ಸಾವಯವ ರಂಜಕಗಳನ್ನುಳ್ಳ ರಂಜಕ ಸಂಯುಕ್ತ ಪದಾರ್ಥಗಳು. ಉದಾಹರಣೆ : ಪಾಸ್ಫಾರಿಕ್ ಆಮ್ಲ.

Organic Soils
ಸಾವಯವ ಮಣ್ಣುಗಳು. ಮಣ್ಣಿನ ಗುಣಧರ್ಮಗಳನ್ನು ಚೆನ್ನಾಗಿ ವ್ಯಕ್ತಗೊಳಿಸಲು ಶಕ್ಯವಾಗುವಂತೆ ಈ ಮಣ್ಣಿನಲ್ಲಿ ಸಾಕಷ್ಟು ಸಾವಯವ ಪದಾರ್ಥಗಳಿರುತ್ತವೆ.

Organic Matter
ಸಾವಯವ ವಸ್ತು ; ಸೇಂದ್ರಿಯ ವಸ್ತು. ಸಸ್ಯ ಮತ್ತು ಪ್ರಾಣಿ ಉಳಿಕೆ ವಸ್ತುಗಳು ಮಣ್ಣಿನಲ್ಲಿ ಸೂಕ್ಷ್ಮ ಜೀವಿಗಳ ಕ್ರಿಯೆಯಿಂದ ವಿಘಟನೆಯಾಗಿ, ಮೇಲೆ ಮಣ್ಣಿನ ಅಂಗವಾಗಿ ಉಳಿಯುವ ಅಸ್ಫಟಿಕ ರೂಪದ ಸಾವಯವ ವಸ್ತು.

Osmotic Pressure
ಅಭಿಸರಣ ಒತ್ತಡ. ಒಂದು ಅಪೂರ್ಣ ವ್ಯಾಪ್ಯ ಪೊರೆಯಿಂದ ಒಂದು ದ್ರಾವಣವು ದ್ರಾವಕದಿಂದ ಬೇರ್ಪಡಿಸಲ್ಪಟ್ಟಾಗ, ದ್ರಾವಕ, ದ್ರಾವಣದೊಳಕ್ಕೆ ವ್ಯಾಪಿಸದಂತೆ ತಡೆದು, ವ್ಯವಸ್ಥೆಯಲ್ಲಿ ಸಮತೋಲನವನ್ನೇರ್ಪಡಿಸಲು ದ್ರಾವಣ ಮತ್ತು ದ್ರಾವಕಗಳು ತೋರುವ ಒತ್ತಡ.


logo