logo
भारतवाणी
bharatavani  
logo
Knowledge through Indian Languages
Bharatavani

Krishi Rasayana Shastra Shabdartha Nirupanavali (English-Kannada)
A B C D E F G H I J K L M N O P Q R S T U V W X Y Z

Water Requirement
ಜಲಾವಶ್ಯಪ್ರಮಾಣ. ಒಂದು ಸಸ್ಯದಿಂದ ಎಲೆ, ಕಾಂಡಗಳ ಮೂಲಕ ವಿಸರ್ಜನೆ ಹೊಂದುವ ನೀರಿನ ಮೊತ್ತಕ್ಕೆ ಆ ಸಸ್ಯದಲ್ಲಿ ಉತ್ಪತ್ತಿಯಾಗುವ ಒಣ ವಸ್ತುವಿನ ಪ್ರಮಾಣ.

Water Table
ಅಂತರ್ಜಲಮಟ್ಟ. ಭೂಮಿಯಲ್ಲಿನ ಅಂತರ್ಜಲ ಮಟ್ಟದ ಮೇಲ್ಭಾಗ. ಇದು ನೀರಿನ ಒತ್ತಡ ಮತ್ತು ವಾಯುವಿನ ಒತ್ತಡಕ್ಕೆ ಸಮನಾಗಿರುವ ಒಂದು ಪಥ.

Weathering
ಹವೆಕ್ರಿಯೆ. ಮಳೆಯಿಂದ ಒದ್ದೆಯಾಗಿ, ಬಿಸಿಲಿನಿಂದ ಒಣಗಿ ಮತ್ತು ಗಾಳಿಯ ಆಕ್ರಮಣಕ್ಕೆ, ತುತ್ತಾಗಿ ಒಂದು ವಸ್ತು ಭೌತಿಕ ಹಾಗೂ ರಾಸಾಯನಿಕವಾಗಿ ಒಡೆದು ಶಿಥಿಲವಾಗುವಿಕೆ.

White Alkali Soil
ಬಿಳಿ ಕ್ಷಾರಮಣ್ಣು. ಕ್ಲೋರೈಡ್ ಮತ್ತು ಸಲ್ಫೇಟ್ ಗಳಿಂದ ಕೂಡಿರುವ ಕ್ಷಾರಮಣ್ಣು.

Weak Acid
ದುರ್ಬಲ ಆಮ್ಲ. ವಿಯೋಗ ಸ್ಥಿರ ಕಡಿಮೆ ಇರುವ ಆಮ್ಲ.

Weak Base
ದುರ್ಬಲ ಪ್ರತ್ಯಾಮ್ಲ. ಅಯಾನೀಕರಣ ಸ್ಥಿರ ಕಡಿಮೆ ಇರುವ ಪ್ರತ್ಯಾಮ್ಲ.

Wilting Co – efficient
ಸಸ್ಯ ಕಮರು ಗುಣಕ. ಒಂದು ಸಸ್ಯ ಉಸಿರಾಡುವಿಕೆಯಿಂದುಂಟಾಗುವ ನೀರಿನ ನಷ್ಟವನ್ನು ತುಂಬಿಸಿ ಕೊಳ್ಳಲು, ಆ ಸಸ್ಯಕ್ಕೆ ಸಾಕಷ್ಟು ನೀರನ್ನು ಒದಗಿಸಿ ಕೊಡಲಾರದಂತಹ ಸ್ಥಿತಿಯಲ್ಲಿರುವ ಮಣ್ಣಿನ ತೇವಾಂಶದ ಮೊತ್ತ.


logo