logo
भारतवाणी
bharatavani  
logo
Knowledge through Indian Languages
Bharatavani

Krishi Rasayana Shastra Shabdartha Nirupanavali (English-Kannada)
A B C D E F G H I J K L M N O P Q R S T U V W X Y Z

Kame
ಕೇಮ್. ಮಂಜಿನಿಂದ ದೂಡಿ ಬಂದು ಒಟ್ಟು ಸೇರಿದ ಅಕ್ರಮ ದಿಬ್ಬ ಅಥವಾ ಗುಡ್ಡ ಸಾಲು.

Kaolinite
ಕೆಯೋಲಿನೈಟ್. ಒಂದಾಗುತ್ತಾ ಒಂದರಂತೆ ಅಲ್ಯೂಮಿನಿಯಂ ಮತ್ತು ಸಿಲಿಕಾ ಪದರುಗಳನ್ನೊಳಗೊಂಡ ಜೇಡಿ ಖನಿಜ.

Kinetic Energy
ಗತಿಶಕ್ತಿ ಒಂದು ವಸ್ತು ತನ್ನ ಚಲನೆಯ ಪ್ರಭಾವದಿಂದ ಹೊಂದಿರುವ ಶಕ್ತಿಗೆ ಗತಿ ಶಕ್ತಿ ಎಂದು ಹೆಸರು.

Kinetic Theory of Gases
ಅನಿಲಗಳ ಗತಿತತ್ವ ಅನಿಲದಲ್ಲಿರುವ ಅಣುಗಳ ನಿರಂತರವಾದ ಚಲನೆಯಿಂದಾಗಿ, ಆ ಅನಿಲವು ಗತಿ ಶಕ್ತಿಯನ್ನು ಹೊಂದಿರುತ್ತದೆ. ಈ ಅಣುಗಳು ಸ್ಥಿತಿಸ್ಥಾಪಕ ಗುಣವುಳ್ಳ ಕಣಗಳು. ಈ ಕಣಗಳು ತಮ್ಮಲ್ಲಿ ಆಘಾತ ಹೊಂದುವುದಲ್ಲದೆ, ತಾವಿದ್ದ ಆವರಣದಲ್ಲಿಯೂ ಒತ್ತಡವನ್ನುಂಟುಮಾಡುತ್ತವೆ.

Kohlrausch Law of Independent Mobilities
ಕೊಹ್ಲಾಸ್ಕನ ಸ್ವತಂತ್ರ ಚಲನಾನಿಯಮ. ಕುಗ್ಗಿದ ಸಾರದಲ್ಲಿ ವಾಹನತೆಯ ಮೊತ್ತ, ಧನ ಅಯಾನ್ ಮತ್ತು ಋಣ ಅಯಾನ್ ಗಳ ಒಟ್ಟು ಮೊತ್ತವಾಗಿರುತ್ತದೆ.


logo