logo
भारतवाणी
bharatavani  
logo
Knowledge through Indian Languages
Bharatavani

Krishi Rasayana Shastra Shabdartha Nirupanavali (English-Kannada)
A B C D E F G H I J K L M N O P Q R S T U V W X Y Z

Anion
ಋಣ ಅಯಾನ್ ಋಣ ವಿದ್ಯುತ್ತನ್ನು ಹೊಂದಿರುವ ಕಣ.

Anaerobic Respiration
ನಿರ್ವಾತ ಶ್ವಾಸೋಚ್ಛ್ವಾಸ. ಆಮ್ಲಜನಕವಿಲ್ಲದೆ ಉಸಿರಾಡುವಿಕೆ.

Antagonism
ಪ್ರತಿಜೀವಿ ನಿರೋಧತ್ವ. ಕೆಲವು ಅಸಹಾಯಕ ಸ್ಥಿತಿಗಳಿಂದ ಸೂಕ್ಷ್ಮಜೀವಿಗಳು ತಮ್ಮ ಪ್ರತಿಜೀವಿಗಳ ಬೆಳವಣಿಗೆಗೆ ಅಥವಾ ಚಟುವಟಿಕೆಗೆ ಅಡಚಣೆಯನ್ನುಂಟುಮಾಡುವ ಘಟನೆ.

Antagonist
ಪ್ರತಿಜೀವಿ ನಿರೋಧಿ. ಒಂದು ಜೀವಿಯ ಬೆಳವಣಿಗೆಗೆ ಅಥವಾ ಚಟುವಟಿಕೆಗಳಿಗೆ ಅಡಚಣೆಯನ್ನುಂಟು ಮಾಡುವ ಜೀವಿ.

Antagonistic Substance
ನಿರೋಧಕ ವಸ್ತು ಪ್ರತಿ ಜೀವಿಯ ಕ್ರಿಯೆಯನ್ನು ತಟಸ್ಥಗೊಳಿಸುವ ವಸ್ತು.

Anti-auxin
ಆ್ಯಂಟಿ ಆಕ್ಸಿನ್; ಪ್ರತಿಸಸ್ಯಚೇತಕ; ಪ್ರತಿ ಚೋದಕ ಸ್ರಾವ. ಸಸ್ಯಗಳ ಮೇಲೆ ಸಾವಯವ ಚೋದಕ ಸ್ರಾವ ಉಂಟುಮಾಡುವ ಪರಿಣಾಮವನ್ನು ತಡೆಯುವ ವಸ್ತು.

Anti-biosis
ಪ್ರತಿಜೀವನ. ಎರಡು ಜೀವಿಗಳು ಒಂದೆಡೆ ಇರುವಲ್ಲಿ, ಒಂದರ ಇರುವಿಕೆ ಮತ್ತೊಂದರ ಬೆಳೆವಣಿಗೆಗೆ ಹಾನಿಕರವಾಗಿರುವ ಪರಿಸ್ಥಿತಿ.

Anti-biotic
ಜೀವಿಮಾರಕ; ಪ್ರತಿಜೀವಿ. ಸೂಕ್ಷ್ಮ ಜೀವಿಗಳಿಂದ ಉತ್ಪತ್ತಿಯಾಗುವ ಈ ವಸ್ತು ಬ್ಯಾಕ್ಟೀರಿಯಾ ಮತ್ತು ಇತರ ಸೂಕ್ಷ್ಮಜೀವಿಗಳ ಬೆಳವಣಿಗೆಯನ್ನು ಕುಂದಿಸುವ ಹಾಗೂ ನಾಶಮಾಡುವ ಶಕ್ತಿಯುಳ್ಳದ್ದಾಗಿರುತ್ತದೆ.

Anti-body
ಪ್ರತಿದೇಹ. ಪ್ರತಿವಿಷಜನಕವನ್ನು ಪ್ರಾಣಿಯ ದೇಹಕ್ಕೆ ಸೇರಿಸಿದಾಗ ಪ್ರತಿಯಾಗಿ ಆ ಪ್ರಾಣಿಯಲ್ಲಿ ಉತ್ಪತ್ತಿಯಾಗುವ ಒಂದು ನಿರ್ದಿಷ್ಟ ಸಂರಕ್ಷಕ ವಸ್ತು.

Antigen
ಪ್ರತಿವಿಷಜನಕ. ಪ್ರತಿವಿಷಜನಕವನ್ನು ಪ್ರಾಣಿಯ ದೇಹಕ್ಕೆ ಸೇರಿಸಿದಾಗ ಪ್ರತಿದೇಹ ಉತ್ಪತ್ತಿಯಾಗುತ್ತದೆ.


logo