logo
भारतवाणी
bharatavani  
logo
Knowledge through Indian Languages
Bharatavani

Krishi Rasayana Shastra Shabdartha Nirupanavali (English-Kannada)
A B C D E F G H I J K L M N O P Q R S T U V W X Y Z

Cartographic Unit
ನಕ್ಷಾ ವಿಭಾಗ; ನಕ್ಷಾ ಮಾಪಕ. ಬೇರೆ ಬೇರೆ ರೀತಿಯ ಜಮೀನುಗಳನ್ನು ವರ್ಗೀಕರಿಸುವಾಗ, ಅವುಗಳ ವ್ಯತ್ಯಾಸವನ್ನು ನಕ್ಷೆಯಲ್ಲಿ ಗುರುತಿಸಲು ಅನುಸರಿಸುವ ಸಂಸ್ಥಾವಿಭಾಗ.

Catabolism
ಜೈವಿಕ ವಿಘಟನಾಕ್ರಿಯೆ. ಆಹಾರಾಂಶಗಳ ವಿಘಟನೆಯ ಫಲವಾಗಿ ಇಂಗಾಲದ ಡೈಆಕ್ಸೈಡ್, ನೀರು ಮತ್ತು ಶಕ್ತಿಗಳು ಹೊರಬರುವ ರಾಸಾಯನಿಕ ಬದಲಾವಣೆ.

Catalyst
ವೇಗ ನಿಯಂತ್ರಕ; ಕೆಟಲಿಸ್ಟ್. ತಾನು ಯಾವುದೇ ಬದಲಾವಣೆಯನ್ನು ಹೊಂದದೆ, ರಾಸಾಯನಿಕ ಕ್ರಿಯೆಯ ವೇಗವನ್ನು ತೀವ್ರಗೊಳಿಸುವ ಅಥವಾ ಕಡಿಮೆ ಮಾಡುವ ವಸ್ತುವಿಗೆ ವೇಗ ನಿಯಂತ್ರಕ ಎಂದು ಹೆಸರು.

Cathode
ಋಣಾಗ್ರ. ವಿದ್ಯುತ್ ವಿಭಜನೆಯಿಂದ ವಿದ್ಯುತ್ ಹೊರಗೆ ಬರುವ ಧೃವ.

Cat-ion
ಧನ ಅಯಾನ್. ಧನ ವಿದ್ಯುತ್ ಹೊಂದಿರುವ ಕಣ.

Cat-ion Exchange Capacity
ಧನ ಅಯಾನ್ ವಿದ್ಯುತ್ ಕಣ ವಿನಿಮಯ ಸಾಮರ್ಥ್ಯ. ಧನ ವಿದ್ಯುತ್ ಕಣಗಳನ್ನು ವಿನಿಮಯ ರೂಪದಲ್ಲಿ ಉಳಿಸಿಕೊಳ್ಳಬಲ್ಲ ಮಣ್ಣಿನ ಸಾಮರ್ಥ್ಯ.

Chernozem Soils
ಚೆರ್ನೊಜೆಮ್ ಮಣ್ಣುಗಳು; ಎರೆಮಣ್ಣುಗಳು. ಜೋನಲ್ ಪಂಗಡಕ್ಕೆ ಸೇರಿದ ಈ ಮಣ್ಣಿನ ಮೇಲ್ಪದರ ಕಪ್ಪಾಗಿದ್ದು, ತಳ ಭಾಗದಲ್ಲಿ ಸುಣ್ಣ ಶೇಖರವಾಗಿ ಅದರ ಪದರ ನಿರ್ಮಾಣವಾಗಿರುತ್ತದೆ.

Charle’s Law
ಚಾರ್ಲ್ಸ್ ನ ನಿಯಮ. ಒತ್ತಡವನ್ನು, ನಿಯತವಾಗಿಟ್ಟು ಒಂದು ನಿರ್ದಿಷ್ಟ ಜಡತ್ವ ಅನಿಲದ ಉಷ್ಣವನ್ನು 1°C ಹೆಚ್ಚಿಸಿದರೆ, ಅದರ ಗಾತ್ರವು 0°C ನಲ್ಲಿ ಅದು ಹೊಂದಿದ್ದ ಗಾತ್ರದ ಒಂದು ನಿರ್ದಿಷ್ಟ ಭಿನ್ನಾಂಶದಷ್ಟು ಹೆಚ್ಚಿರುತ್ತದೆ ಎಂದು ತಿಳಿಸುವ ನಿಯಮ.

Chemical Affinity
ರಾಸಾಯನಿಕ ಆಕರ್ಷಣೆ. ಒಂದು ಮೂಲವಸ್ತುವು ಬಿಟ್ಟುಕೊಡುವ ಅಥವಾ ಸೇರಿಸಿಕೊಳ್ಳುವ ಋಣಾಂಶಗಳು ಕಡಿಮೆ ಇದ್ದಂತೆಲ್ಲಾ ರಾಸಾಯನಿಕ ಆಕರ್ಷಣೆ ಹೆಚ್ಚಾಗಿರುತ್ತದೆ.

Chemical Bond
ರಾಸಾಯನಿಕ ಬಂಧನ. ಎರಡು ಪರಮಾಣುಗಳಿಂದ ಹಿಡಿದಿಡಲ್ಪಟ್ಟಿರುವ ಒಂದು ಜೊತೆಯ ಋಣಾಂಶಗಳು (ಇಲೆಕ್ಟ್ರಾನ್ ಗಳು).


logo