logo
भारतवाणी
bharatavani  
logo
Knowledge through Indian Languages
Bharatavani

Krishi Rasayana Shastra Shabdartha Nirupanavali (English-Kannada)
A B C D E F G H I J K L M N O P Q R S T U V W X Y Z

Dendritic Rock
ವೃಕ್ಷಾಕಾರ ಶಿಲೆ. ವೃಕ್ಷದ ಆಕಾರದಲ್ಲಿರುವ, ತಾಮ್ರ ಅಥವಾ ಮ್ಯಾಂಗನೀಸ್ ಗಳ ಲೋಹದ ಆಕ್ಸೈಡ್ ಗಳು ಕೂಡಿ ಬಿದ್ದ ಶಿಲೆ.

Desalinization
ಚೌಳು ಲಯವಾಗುವಿಕೆ; ಲವಣ ರಹಿತವಾಗುವಿಕೆ. ಮಣ್ಣಿನಲ್ಲಿರುವ ಕರಗುವ ಲವಣಗಳು ತೊಳೆದು, ಹೋಗುವಿಕೆ ಅಥವಾ ಕೊಚ್ಚಿ ಹೋಗುವಿಕೆ.

Desert Soil
ಮರುಭೂಮಿ ಮಣ್ಣು. ಈ ಮಣ್ಣು, ಮೇಲ್ಭಾಗದಲ್ಲಿ ಸಾಧಾರಣ ಬಣ್ಣವುಳ್ಳದ್ದಾಗಿದ್ದು, ತಳದಲ್ಲಿ ಸುಣ್ಣದ ವಸ್ತುಗಳಿಂದ ಕೂಡಿರುತ್ತದೆ. ಕೆಲವೆಡೆ ಮಣ್ಣಿನ ತಳದಲ್ಲಿ ಗಟ್ಟಿ ಪದರ ಕಂಡು ಬರುತ್ತದೆ.

Dielectric Constant
ವಿದ್ಯುನ್ನಿಶ್ಚಿತಸ್ಥಿರ. ಎರಡು ಧನ ಇಲ್ಲವೆ ಋಣ ಅಯಾನ್ ಗಳ ಮಧ್ಯದ ಆಕರ್ಷಣೆಯ ಬಲವನ್ನು ಕಡಿಮೆ ಮಾಡಲು ಒಂದು ವಸ್ತುವಿಗಿರುವ ಸಾಮರ್ಥ್ಯ.

Diffusion
ವ್ಯಾಪನ; ವಿಸರಣ. ಅನಿಲಗಳು ಹರಡಿ, ಸುತ್ತ ಮುತ್ತಲಿನ ವಾತಾವರಣದೊಂದಿಗೆ ಬೆರೆಯುವಿಕೆ.

Displacement
ಸ್ಥಾನಪಲ್ಲಟ. ಒಂದು ಮೂಲವಸ್ತು ಒಂದು ಸಂಯುಕ್ತದೊಡನೆ ವರ್ತಿಸಿ, ಆ ಸಂಯುಕ್ತದಲ್ಲಿ ಒಂದು ಮೂಲವಸ್ತುವನ್ನು ಹೊರಗೆಡಹಿ, ಅದರ ಸ್ಥಾನವನ್ನು ತಾನು ಆಕ್ರಮಿಸಿಕೊಂಡಿದ್ದರೆ, ಅಂತಹ ಕ್ರಿಯೆಯನ್ನು ಸ್ಥಾನ ಪಲ್ಲಟ ಎಂದು ಕರೆಯುತ್ತಾರೆ.

Dispersed Phase
ಪ್ರಸರಿಸಿದ ಹಂತ. ನೈಜದ್ರಾವಣದಲ್ಲಿ ಅಸ್ಫಟಿಕ ಕಣಗಳು ಹೆಚ್ಚು ಚದುರಿರುವ ಹಂತ.

Dispersion
ಪ್ರಸರಣೆ. ಸಂಯುಕ್ತ ವಸ್ತುಗಳಲ್ಲಿರುವ ಮೂಲವಸ್ತುಗಳು, ಬೇರೆ ಬೇರೆಯಾಗಿ ಚದುರಿರುವ ಸ್ಥಿತಿ.

Dissociation Constant
ವಿಯೋಗ ಸ್ಥಿರ. ಸಮತೆಯನ್ನುಳಿಸಿಕೊಂಡು ಬರಲು, ಒಂದು ವಸ್ತುವಿನ ಅಣುಗಳ ಸಾಮರ್ಥ್ಯ ಮತ್ತು ಅವುಗಳ ವಿಯೋಗಜನಿತ ಅಯಾನ್ ಗಳ ಸಾಮರ್ಥ್ಯಗಳ ಮಧ್ಯೆ ಕಂಡು ಬರುವ ಸ್ಥಿರತೆಗೆ, ವಿಯೋಗ ಸ್ಥಿರ ಎಂದು ಹೆಸರು.

Distillation
ಭಟ್ಟಿ ಇಳಿಸುವಿಕೆ ಒಂದು ದ್ರಾವಣದಲ್ಲಿನ ಬಹಳ ಮಟ್ಟಿನ ಕಶ್ಮಲಗಳನ್ನು, ದ್ರವವನ್ನು ಆವಿಯಾಗಿ ಪರಿವರ್ತಿಸುವ ಮೂಲಕ ಬೇರ್ಪಡಿಸುವ ಮತ್ತು ಆ ಆವಿಯನ್ನು ತಂಪುಮಾಡಿ ದ್ರವವನ್ನು ಪುನಃ ಪಡೆಯುವ ವಿಧಾನಕ್ಕೆ, ಭಟ್ಟಿ ಇಳಿಸುವಿಕೆ ಎಂದು ಹೆಸರು.


logo