logo
भारतवाणी
bharatavani  
logo
Knowledge through Indian Languages
Bharatavani

Krishi Rasayana Shastra Shabdartha Nirupanavali (English-Kannada)
A B C D E F G H I J K L M N O P Q R S T U V W X Y Z

Cynamide
ಸೈನಮೈಡ್. CaCn₂, Ca (OH)₂ ಮತ್ತು ವಿಮುಕ್ತ ಇಂಗಾಲದೊಂದಿಗೆ, ಸುಣ್ಣ ಕಲ್ಲು ಹಾಗೂ ಕಲ್ಲಿದ್ದಲಿನ ಅಶುದ್ಧ ವಸ್ತುಗಳನ್ನೊಳಗೊಂಡ ಪ್ರೋಟೀನ್ ರಹಿತ ಸಾವಯವ ಸಾರಜನಕ ವಸ್ತು.

Dalton’s Law of Atomic Theory
ಡಾಲ್ಟನ್ನನ ಪರಮಾಣು ಸಿದ್ಧಾಂತ. ಡಾಲ್ಟನ್ನನ ಪರಮಾಣು ಸಿದ್ಧಾಂತದ ಮುಖ್ಯಾಂಶಗಳು ಹೀಗಿವೆ: (a) ಎಲ್ಲಾ ವಸ್ತುಗಳು ಅತಿ ಚಿಕ್ಕದಾದ ಮತ್ತು ಅಭೇದ್ಯವಾದ, ಪರಮಾಣುಗಳೆಂಬ ಕಣಗಳಿಂದ ರಚಿತವಾಗಿವೆ. (b) ಆಕಾರ, ಗಾತ್ರ ಮತ್ತು ತೂಕಗಳಲ್ಲಿ, ಒಂದೇ ವಸ್ತುವಿನ ಎಲ್ಲ ಪರಮಾಣುಗಳು ಸಮನಾಗಿರುತ್ತವೆ. (c) ಪರಮಾಣುಗಳನ್ನು ಸೃಷ್ಟಿಸಲು, ನಾಶಮಾಡಲು ಹಾಗೂ ಭೇದಿಸಲು ಬರುವುದಿಲ್ಲ. (d) ಒಂದು ಮೂಲವಸ್ತುವಿನ ಪರಮಾಣುಗಳ, ಆಕಾರ, ತೂಕ ಮತ್ತು ಗಾತ್ರವು ಮತ್ತೊಂದು ವಸ್ತುವಿನ ಪರಮಾಣುಗಳ ಆಕಾರ, ತೂಕ ಮತ್ತು ಗಾತ್ರಕ್ಕಿಂತ ಬೇರೆಯಾಗಿರುತ್ತವೆ. (e) ಬೇರೆ ಬೇರೆ ಮೂಲವಸ್ತುಗಳ ಪರಮಾಣುಗಳು, ಸಣ್ಣ ಸಣ್ಣ ಸಂಖ್ಯೆಗಳಲ್ಲಿ ಮತ್ತು ನಿರ್ದಿಷ್ಟ ಪ್ರಮಾಣಗಳಲ್ಲಿ ಒಂದುಗೂಡಿ, ಸಂಯುಕ್ತ ಪರಮಾಣು ಅಥವಾ ಅಣುಗಳಾಗುತ್ತವೆ.

Dalton’s Law of Partial Pressure
ಡಾಲ್ಟನ್ನನ ಭಿನ್ನಾಂಶ ಒತ್ತಡ ನಿಯಮ. ಒಂದು ವ್ಯೂಹವು ಎರಡು ಅಥವಾ ಹೆಚ್ಚು ಅನಿಲಗಳ ಮಿಶ್ರಣವಾಗಿದ್ದರೆ ಅವುಗಳ ಪೈಕಿ ಯಾವುದೇ ಒಂದು ಅನಿಲ, ಮಿಶ್ರಣ ಆಕ್ರಮಿಸಿರುವ ಇಡೀ ಗಾತ್ರವನ್ನು ಆಕ್ರಮಿಸಿದರೆ ಅದು ಹೊಂದುತ್ತಿದ್ದ ಒತ್ತಡಕ್ಕೆ, ಅನಿಲದ ಭಿನ್ನಾಂಶ ಒತ್ತಡ ಎಂದು ಹೆಸರು.

Decalcification
ಸುಣ್ಣಕ್ಷೀಣತೆ. ಕೊಚ್ಚಣೆಯಿಂದ, ಮಣ್ಣಿನಲ್ಲಿರುವ ಕ್ಯಾಲ್ಸಿಯಂ ಕಾರ್ಬೊನೇಟ್ ಲಯವಾಗುವಿಕೆ.

Decay
ಕೊಳೆ; ಶಿಥಿಲವಾಗು. ಪ್ರೋಟೀನುಗಳು, ಸಾಕಷ್ಟು ಗಾಳಿಯಿರುವಲ್ಲಿ ವಿಭಜನೆ ಹೊಂದಿ ಸ್ಥಿರಸಂಯುಕ್ತಗಳಾಗಿ ಮಾರ್ಪಾಡಾಗುವಿಕೆ. ಈ ಸ್ಥಿರ ಸಂಯುಕ್ತಗಳಲ್ಲಿ, ದುರ್ವಾಸನೆ ಇರುವುದಿಲ್ಲ.

Degradation
ಶಿಥಿಲತೆ. ಮಣ್ಣಿನಲ್ಲಿಯ ಸೋಡಿಯಂ ವಿದ್ಯುತ್ ಕಣಗಳು, ಜಲಜನಕ ವಿದ್ಯುತ್ ಕಣಗಳಿಗೆ ಅವಕಾಶ ಮಾಡಿಕೊಡುವಿಕೆ.

Degree of Alkalisation
ಕ್ಷಾರಾಂಶಪ್ರಮಾಣ. ಮಣ್ಣಿನಲ್ಲಿರುವ, ಏಕಸಂಯೋಗಸಾಮರ್ಥ್ಯವುಳ್ಳ ಪ್ರತ್ಯಾಮ್ಲಗಳಿಂದ, Na+ ಮತ್ತು K+ ಗಳಿಗೆ ಇರುವ ಪ್ರತ್ಯಾಮ್ಲ ಬದಲಾವಣಾಶಕ್ತಿಯ ಪ್ರಮಾಣ.

Dehydration Curve
ನಿರ್ಜಲ ವಕ್ರರೇಖೆ. ಉಷ್ಣಾಂಶವನ್ನು ಸಮಾನಾಂತರಾಕ್ಷದ ಮೇಲೂ ಮತ್ತು ಒಂದು ದ್ರಾವಣವನ್ನು ಕಾಯಿಸಿದಾಗ ಅದರಿಂದ ಲಯವಾಗುವ ಶೇಕಡ ತೇವಾಂಶವನ್ನು ಲಂಬಾಕ್ಷದ ಮೇಲೂ ಗುರುತಿಸಿದಾಗ, ಉಂಟಾಗುವ ವಕ್ರರೇಖೆ.

Density
ಸಾಂದ್ರತೆ. ಯಾವುದಾದರೊಂದು ನಿಯತವಾದ ಒತ್ತಡ ಮತ್ತು ತಾಪದಲ್ಲಿ ವಸ್ತುವಿನ ಏಕಮಾನ ಗಾತ್ರದಲ್ಲಿರುವ ಜಡತ್ವಕ್ಕೆ ಸಾಂದ್ರತೆ ಎಂದು ಹೆಸರು.

Denitrification
ಡಿನೈಟ್ರಿಫಿಕೇಷನ್ ; ಸಾರಜನಕ ಕುಗ್ಗಿಸುವಿಕೆ. ನೈಟ್ರೇಟ್ ಗಳು, ನೈಟ್ರೈಟ್, ಅಮೋನಿಯ ಮತ್ತು ನೈಟ್ರೋಜನ್ ಗಳಾಗಿ ಕ್ಷೀಣಿಸುವುದು. ಈ ಪರಿವರ್ತನೆ, ಮಣ್ಣಿನಲ್ಲಿರುವ ಸೂಕ್ಷ್ಮಜೀವಿಗಳಿಂದ ಹಲವು ಸಂದರ್ಭಗಳಲ್ಲಿ ಆಗುತ್ತದೆ.


logo