logo
भारतवाणी
bharatavani  
logo
Knowledge through Indian Languages
Bharatavani

Krishi Rasayana Shastra Shabdartha Nirupanavali (English-Kannada)
A B C D E F G H I J K L M N O P Q R S T U V W X Y Z

Critical Volume
ಸಂದಿಗ್ಧ ಗಾತ್ರ. ಸಂದಿಗ್ಧ ಉಷ್ಣತೆ ಮತ್ತು ಒತ್ತಡದಲ್ಲಿ ಒಂದು ಗ್ರಾಂ ಪದಾರ್ಥವು ಆಕ್ರಮಿಸುವ ಘನ ಅಳತೆ.

Crop Rotation
ಬೆಳಸರದಿ ; ಕಾಲುಗೈ. ಒಂದು ಭೂಮಿಯಲ್ಲಿ ಪದೇ ಪದೇ ಒಂದೇ ಬೆಳೆಯನ್ನು ಬೆಳೆಯದೆ, ಒಂದು ಬೆಳೆಯಾದ ನಂತರ ಬೇರೆ ಜಾತಿಯ ಬೆಳೆಯನ್ನು, ತೆಗೆಯುವ ಪದ್ಧತಿ. ಈ ಕ್ರಮದಿಂದ ಮಣ್ಣಿನ ಪರಿಸ್ಥಿತಿಯನ್ನು ಸುಧಾರಿಸುವುದು ಸಾಧ್ಯ.

Crop Residue
ಬೆಳೆಯುಳಿಕೆ (ಬೆಳೆ ಅವಶೇಷ). ಸಸ್ಯ ಕೊಯ್ದ ಮೇಲೆ, ಭೂಮಿಯಲ್ಲಿ ಉಳಿಯುವ ಸಸ್ಯವಸ್ತು.

Cropping System
ಬೆಳೆ ಪದ್ಧತಿ. ಒಂದು ಭೂಮಿಯಲ್ಲಿ, ಯೋಜಿತ ಕ್ರಮದಂತೆ ಒಂದಲ್ಲ ಒಂದು ಬೆಳೆ ತೆಗೆಯುವ ವ್ಯವಸ್ಥೆ.

Crumb Structure
ವಿಚೂರ್ಣಾಕೃತಿ. ಮಣ್ಣಿನ ಸೂಕ್ಷ್ಮ ಕಣಗಳು ಒಟ್ಟುಗೂಡಿ, ಕಾಳುಕಾಳಾಗಿ, ಹದವಾದ ಮಣ್ಣಿನ ಸ್ಥಿತಿಗೆ ಕಾರಣವಾಗುತ್ತದೆ.

Crust Formation
ಹೆಕ್ಕಳಾಗುವಿಕೆ ; ಹೆಪ್ಪು ನಿರ್ಮಾಣ. ತೇವವಾದ ಮಣ್ಣು ಒಣಗಿದಾಗ, ಅದರ ಮೇಲ್ಮೈಯಲ್ಲಿ ಹೆಪ್ಪುಗಟ್ಟಿದ ಪದರಕ್ಕೆ ಹೆಕ್ಕಳು ಎನ್ನುತ್ತಾರೆ ಜೇಡಿಮಣ್ಣಿನಲ್ಲಿ ಅಥವಾ ಕ್ಷಾರಭೂಮಿಗಳಲ್ಲಿ ಇಂಥ ಹೆಕ್ಕಳಿಕೆ ಉಂಟಾಗುವುದು ಸಾಮಾನ್ಯ.

Crystal
ಹರಳು; ಸ್ಫಟಿಕ. ಖನಿಜಗಳು ಹೊಂದುವ, ಒಂದು ನಿರ್ದಿಷ್ಟವಾದ ಘನ ರೇಖಾ ರೂಪ.

Crystalattice Water
ಹರಳು ಜಾಲಂದ್ರ ನೀರು. ಒಡೆದ ಹರಳ ಚೌಕಟ್ಟುಗಳ ತೆರೆದ ಮೊನೆಗಳ ಮೇಲಿರುವ, Al, Si, ಅಥವಾ O ಗಳ ನಿರ್ಬಂಧಾಕರ್ಷಕ ಶಕ್ತಿಗಳ ಸಹಾಯದಿಂದ ಹೀರಲ್ಪಟ್ಟಿರುವ ನೀರು.

Cumulose Soil
ಸಾವಯವ ಶೇಖರಣಾಮಣ್ಣು. ವಿಘಟನೆಯಾದ ಸಾವಯವ ವಸ್ತುಗಳ ಶೇಖರಣೆಯಿಂದುಂಟಾದ ಮಣ್ಣು.

Curie
ಕ್ಯೂರಿ. ಒಂದು ಸೆಕೆಂಡಿಗೆ 3.7 X 10¹⁰ ನಂತೆ ವಿದಳನವಾಗುವ ವಿಕಿರಣ ವಸ್ತುವಿನ ತೂಕ.


logo