logo
भारतवाणी
bharatavani  
logo
Knowledge through Indian Languages
Bharatavani

Krishi Rasayana Shastra Shabdartha Nirupanavali (English-Kannada)
A B C D E F G H I J K L M N O P Q R S T U V W X Y Z

Contour Bund
ಸಮಪಾತಳಿಒಡ್ಡು.

Co-ordination Number
ಸಂಘಟನಾಸಂಖ್ಯೆ. ಒಂದು ಹರಳ ಆಕೃತಿಯಲ್ಲಿ, ಪ್ರತಿಯೊಂದು ಧನ ಅಯಾನ್ ಗಳನ್ನು ಸುತ್ತಿಕೊಂಡಿರುವ ಋಣ ಅಯಾನ್ ಗಳ ಸಂಖ್ಯೆಗೆ ಸಂಘಟನಾ ಸಂಖ್ಯೆ ಎಂದು ಹೆಸರು. ಇದು, ಧನ ಮತ್ತು ಋಣ ಅಯಾನ್ ಗಳ ತ್ರಿಜ್ಯದ ಅನುಪಾತವನ್ನು ಅವಲಂಬಿಸಿರುತ್ತದೆ.

Co-valency
ಸಹಸಂಯೋಗಸಾಮರ್ಥ್ಯ. ರಾಸಾಯನಿಕ ಸಂಯೋಜನೆಯಲ್ಲಿ, ಒಂದಕ್ಕೊಂದು ಸೇರುವ ಎರಡು ಪರಮಾಣುಗಳು, ತಮ್ಮ ತಮ್ಮಲ್ಲಿಯೇ ಋಣಾಂಶಗಳನ್ನು ಹಂಚಿಕೊಳ್ಳುವಾಗ ಉಂಟಾಗುವ ಬಂಧನ ಸಾಮರ್ಥ್ಯ.

Cover Crop
ಹೊದಿಕೆಬೆಳೆ. ಹೆಚ್ಚು ಮಳೆಗಾಲದಲ್ಲಿ ಅಥವಾ ತೀವ್ರ ಬೇಸಿಗೆಯಲ್ಲಿ ಮಣ್ಣು, ಮಳೆ ಅಥವಾ ಬಿಸಿಲಿನ ಹೊಡೆತಕ್ಕೆ ಸಿಕ್ಕಿ ದುಷ್ಪರಿಣಾಮ ಉಂಟಾಗದಂತೆ ಕಾಪಾಡಲು, ಬೆಳೆಸಿರುವ ಹೊದಿಕೆ ಬೆಳೆ.

Coral
ಹವಳ. ಇದು, ಸಮುದ್ರ ಜೀವಿಗಳ ಅಸ್ಥಿಪಂಜರದ ಉಳಿಕೆ. ಇದರಲ್ಲಿ, ಕ್ಯಾಲ್ಸಿಯಂ ಕಾರ್ಬೊನೇಟ್ ಹೇರಳವಾಗಿ ದೊರೆಯುತ್ತದೆ.

Continuity State
ಅವ್ಯಾಹತ ಸ್ಥಿತಿ. ನಿರ್ದಿಷ್ಟ ಒತ್ತಡ ಮತ್ತು ಉಷ್ಣತೆಗಳಲ್ಲಿ ಕೆಲವು ದ್ರವಗಳು ಒಂದಾಗುವಿಕೆ ಅಥವಾ ಅನಿಲಗಳು ದ್ರವಗಳಾಗುವಿಕೆಯ ಕಾಲವನ್ನು ಕಂಡು ಹಿಡಿಯಬಹುದು. ಈ ಘಟನೆಗೆ ಅವ್ಯಾಹತ ಸ್ಥಿತಿ ಎಂದು ಹೆಸರು.

Critical Moisture Point
ಸಂದಿಗ್ಧ ತೇವ ಬಿಂದು. ಒಂದು ಸಸ್ಯ, ತನ್ನ ಜೀವವನ್ನು ಉಳಿಸಿಕೊಳ್ಳಲು ಪ್ರಯತ್ನ ಪಡುತ್ತಿರುವ ಸಮಯದಲ್ಲಿ ಅಥವಾ ಬಾಡುತ್ತಿರುವಾಗ, ಆ ಸಸ್ಯದ ಬೇರುಗಳ ಪ್ರಭಾವಯುತ ಆವರಣದಲ್ಲಿರುವ ಶೇಕಡ ನೀರಿನ ಪ್ರಮಾಣ.

Critical Point
ಸಂದಿಗ್ಧ ಬಿಂದು. ದ್ರವ ಮತ್ತು ಅನಿಲಗಳ ಇರುವಿಕೆಯನ್ನು ಗುರುತಿಸಲು ಸಾಧ್ಯವಿಲ್ಲದಿರುವಂತಹ ಸ್ಥಿತಿಯ, ಒತ್ತಡ ಮತ್ತು ಉಷ್ಣತೆ.

Critical Pressure
ಸಂದಿಗ್ಧ ಒತ್ತಡ. ಸಂತೃಪ್ತ ಬಾಷ್ಪಶೀಲವಸ್ತು ಸಂದಿಗ್ಧ ಉಷ್ಣತೆಯಲ್ಲಿ ದ್ರವವಾಗಲು ಬೇಕಾಗುವ ಒತ್ತಡ.

Critical Temperature
ಸಂದಿಗ್ಧ ಉಷ್ಣತೆ. ಈ ಉಷ್ಣತೆಯನ್ನು ಮೀರಿ, ಯಾವುದೇ ಒಂದು ಅನಿಲವನ್ನು ಹೆಚ್ಚು ಒತ್ತಡಕ್ಕೊಳಪಡಿಸುವುದರಿಂದ ಆ ಅನಿಲ ದ್ರವವಾಗಿ ಪರಿವರ್ತನೆಗೊಳ್ಳಲಾರದು.


logo