logo
भारतवाणी
bharatavani  
logo
Knowledge through Indian Languages
Bharatavani

Krishi Rasayana Shastra Shabdartha Nirupanavali (English-Kannada)
A B C D E F G H I J K L M N O P Q R S T U V W X Y Z

Compressibility
ಕುಗ್ಗುವಿಕೆ. ಒಂದು ವಸ್ತುವಿನ ಮೇಲೆ ಪ್ರಯೋಗಿಸಿದ ಒತ್ತಡದ ಪ್ರಭಾವದಿಂದಾಗಿ, ಆ ವಸ್ತುವಿನ ಗಾತ್ರ ಕಡಿಮೆಯಾಗುವ ಗುಣ.

Complete Fertilizer
ಸಂಪೂರ್ಣ ರಾಸಾಯನಿಕ ಗೊಬ್ಬರ; ಸಾರಜನಕ, ರಂಜಕ ಮತ್ತು ಪೊಟ್ಯಾಷ್ ಅಂಶಗಳನ್ನೊಳಗೊಂಡ ರಾಸಾಯನಿಕ ಸಂಯುಕ್ತವಸ್ತು.

Concretionary Rock
ಶಂಖಶಿಲೆ ; ಮೂರ್ತ ಬಂಡೆ. ಅವ್ಯವಸ್ಥಿತ ದುಂಡು ವಸ್ತುವಿನಂತೆ ಕಾಣುವ, ಶಿಥಿಲವಾದಂತೆ ಈರುಳ್ಳಿಯ ಹಾಗೆ ಹೊರ ಪದರಗಳನ್ನು ಬಿಟ್ಟು ಕೊಡುವ ಶಿಲೆ.

Concretions
ಖನಿಜ ಹರಳುಗಳ ; ಶೇಖರಿತ ಗೋಲ್ ಖನಿಜಗಳು. ಖನಿಜ ಒತ್ತರವಾಗುವಿಕೆಯಿಂದ ಉಂಟಾಗುವ, ಲೋಹದ ಗುಂಪಾದ ಗುಡ್ಡೆಗಳು.

Condensed Milk
ಮಂದೈಸಿದ ಹಾಲು; ಘನೀಕೃತ ಹಾಲು. ಹಾಲನ್ನು ಕುದಿಸಿ, ನೀರಿನ ಅಂಶವನ್ನು ತೀವ್ರವಾಗಿ ಕುಗ್ಗಿಸಿದ ಹಾಲು.

Conditioner
ಸ್ಥಿತಿಕಾರಕ. ನೀರನ್ನು ಹೀರಿಕೊಂಡು ರಾಸಾಯನಿಕ ಗೊಬ್ಬರದ ಮಿಶ್ರಣಗಳು ಹೆಪ್ಪುಗಟ್ಟುವುದನ್ನು ತಡೆಹಿಡಿಯಲು ಉಪಯೋಗಿಸುವ ವಸ್ತು.

Consitancy
ಸ್ಥಾಯಿತ್ವ ; ಸ್ಥಿರತೆ. ಆಕಾರ ಬದಲಾವಣೆಯಾಗುವುದಕ್ಕೆ ಒಂದು ವಸ್ತು ತೋರುವ ನಿರೋಧಕ ಶಕ್ತಿ.

Continental Climate
ಭೂಖಂಡದ ವಾಯುಗುಣ. ಸಮುದ್ರಕ್ಕೆ ಸಾಮೀಪ್ಯತೆ ಅಥವಾ ಇತರ ಪ್ರಭಾವಗಳಿಗೆ ಒಳಗಾಗದೆ, ಉಷ್ಣತೆ ಹೆಚ್ಚು ವ್ಯತ್ಯಾಸವಿರುವ ವಿಶಾಲವಾದ ಭೂಪ್ರದೇಶದಲ್ಲಿ ಕಂಡುಬರುವ ವಾಯುಗುಣ.

Controlled Grazing
ನಿಯಂತ್ರಿತ ಮೇಯಿಸುವಿಕೆ. ಹುಲ್ಲುಗಾವಲಿನಲ್ಲಿ ವಿಂಗಡಿಸಿದ ಕಣಗಳನ್ನು ಒಂದು ಗೊತ್ತಾದ ತೀವ್ರತೆಯಲ್ಲಿ ಹುಲ್ಲುನೆಲ ಸಮನಾಗದಂತೆ ಜಾನುವಾರು ಮೇಯಿಸುವಿಕೆ.

Contour Cultivation
ಸಮಪಾತಳಿಸಾಗುವಳಿ. ಇಳಿಜಾರಿಗೆ ಅಡ್ಡಲಾಗಿ ಉಳುಮೆ, ಪೈರುನಾಟಿ, ನೀರುಹಾಯಿಸುವಿಕೆ ಮುಂತಾದ ಸಾಗುವಳಿ ಕ್ರಮಗಳು.


logo