logo
भारतवाणी
bharatavani  
logo
Knowledge through Indian Languages
Bharatavani

Krishi Rasayana Shastra Shabdartha Nirupanavali (English-Kannada)
A B C D E F G H I J K L M N O P Q R S T U V W X Y Z

Co-efficient of Compressibility
ಕುಗ್ಗುವಿಕೆಯ ಗುಣಕ. ಒಂದು ವಸ್ತುವಿನ ಮೇಲೆ ಒಂದು ನಿರ್ದಿಷ್ಟ ಶಕ್ತಿಯ ಒತ್ತಡವನ್ನು ಪ್ರಯೋಗಿಸಿದಾಗ, ಆ ವಸ್ತುವಿನ ಸ್ಥಿತಿಯಲ್ಲಿ ಉಂಟಾಗುವ ಗಾತ್ರ ಬದಲಾವಣೆ.

Co-efficient of Thermal Conductivity
ಉಷ್ಣವಾಹಕತ್ವದ ಗುಣಕ. ಒಂದು ಸೆಕೆಂಡಿಗೆ ಏಕಮಾನ ಪ್ರಮಾಣದಲ್ಲಿ ಏಕಮಾನ ಖಂಡ ವಿಸ್ತಾರದ ಮೂಲಕ ಸಮಸ್ಥಿತಿಯಲ್ಲಿ ಹರಿಯುವ ಉಷ್ಣಕ್ಕೆ, ವಸ್ತುವಿನ ಉಷ್ಣವಾಹಕತ್ವದ ಗುಣಕವೆಂದು ಹೆಸರು.

Coagulation
ಹೆಪ್ಪುಗಟ್ಟುವಿಕೆ. ರಾಡಿಯಾಗಿರುವ ಮಣ್ಣಿನ ಸೂಕ್ಷ್ಮಕಣಗಳು ವಿದ್ಯುದ್ವಿಭಜನೀಯಗಳ ಪ್ರಭಾವದಿಂದ, ಉದಾಹರಣೆಯಾಗಿ ಸೋಡಿಯಂ ಕ್ಲೋರೈಡ್ ಉಪ್ಪನ್ನು ಸೇರಿಸಿದಾಗ ಗರಣೆಗಟ್ಟುತ್ತದೆ. ಇಂಥ ಕ್ರಿಯೆಗೆ ಹೆಪ್ಪುಗಟ್ಟುವಿಕೆ ಎಂದು ಹೆಸರು.

Colligative Property
ಸಮಾವೇಶ ಗುಣ. ಕೆಲವು ವಸ್ತುಗಳ ಗುಣಧರ್ಮಗಳು ಅವುಗಳಲ್ಲಿರುವ ಕಣ (ಅಣು ಅಥವಾ ಪರಮಾಣು) ಗಳ ಪ್ರಕೃತಿ ಮತ್ತು ಗಾತ್ರವನ್ನು ಅವಲಂಬಿಸಿರದೆ, ಸಂಖ್ಯೆಯನ್ನು ಮಾತ್ರ ಅವಲಂಬಿಸಿರುತ್ತವೆ. ಉದಾಹರಣೆ : ದ್ರವಬಾಷ್ಪಒತ್ತಡ, ಕುದಿಯುವ ಬಿಂದುವಿನ ಏರಿಕೆ ಇತ್ಯಾದಿ.

Colloid
ಕಲಿಲ ಅಥವಾ ಅಸ್ಫಟಿಕ ಕಣ. 0.001 ಮಿ. ಮೀ. ಗಿಂತ ಕಡಿಮೆ ವ್ಯಾಸವಿರುವ ಕಣಗಳು. ಕಣಗಳು ಚದುರಿ ವಿಕಿರಣವಾಗಿದ್ದು, ಮೇಲ್ಮೈಕ್ರಿಯೆ ಅದರ ಪ್ರಧಾನ ಗುಣ.

Colloidal Phosphate
ಕಲಿಲ ಅಥವಾ ಅಸ್ಫಟಿಕ ಫಾಸ್ಪೇಟ್. ಸೂಕ್ಷ್ಮ ಕಣಗಳಿಂದೊಡಗೂಡಿದ ಒಂದು ಕಚ್ಚಾ ಖನಿಜದ ಪಾಸ್ಫೇಟ್ ಅಥವಾ ಪಾಸ್ಫೇಟ್ ಜೇಡಿ.

Colluvium
ಜಾರುಮಣ್ಣು ; ಗಾಳಿಮಣ್ಣು. ಹೆಚ್ಚು ಇಳಿಜಾರು ಪ್ರದೇಶದಲ್ಲಿ ಶೇಖರವಾಗಿರುವ ಶಿಲೆಯ ಹರಳುಗಳನ್ನುಳ್ಳ ಮಣ್ಣು.

Coloumb
ಕೊಲಂಬ್. ಒಂದು ಆಂಪಿಯರ್ ವಿದ್ಯುತ್ ಪ್ರವಾಹವು ಒಂದು ಸೆಕೆಂಡಿನಲ್ಲಿ ಪ್ರವಹಿಸುವ ವಿದ್ಯುಚ್ಛಕ್ತಿಯ ಮೊತ್ತ.

Cohesion
ಸಂಸಕ್ತಿ. ಒಂದು ದ್ರವದಲ್ಲಿರುವ ಕಣಗಳ ಪರಸ್ಪರ ಆಕರ್ಷಣೆಯಿಂದಾಗಿ ಪಲ್ಲಟಕ್ಕೆ ತೋರುವ ಪ್ರತಿಭಟನೆಯ ಗುಣ.

Compost
ಕಾಂಪೋಸ್ಟ್. ಸಸ್ಯ ಹಾಗೂ ಪ್ರಾಣಿಗಳ ಉಳಿಕೆಗಳನ್ನೊಳಗೊಂಡ, ಕಳಿತ, ತುಂಬುಸಾವಯವ ಗೊಬ್ಬರ.


logo