logo
भारतवाणी
bharatavani  
logo
Knowledge through Indian Languages
Bharatavani

Krishi Rasayana Shastra Shabdartha Nirupanavali (English-Kannada)
A B C D E F G H I J K L M N O P Q R S T U V W X Y Z

Bulk Specific Gravity
ಸ್ಥೂಲ ವಿಶಿಷ್ಟ ಸಾಂದ್ರತೆ. ಮಣ್ಣಿನ ಸ್ಥೂಲಸಾಂದ್ರತೆಗೂ ಮತ್ತು ಅದೇ ಗಾತ್ರದ ನೀರಿನ ಪರಿಮಾಣಕ್ಕೂ ಇರುವ ಪರಸ್ಪರ ಸಂಬಂಧ.

Burried Profile
ಹೂತಪ್ರೊಫೈಲ್. ಮಣ್ಣು ಕೊರೆಯುವಿಕೆಯಿಂದಾಗಿ, ಅಕ್ಕ ಪಕ್ಕದ ಮಣ್ಣಿನ ವಸ್ತುಗಳು ಚಲಿಸಿ ಬಂದು ಶೇಖರವಾಗಿ ಮುಚ್ಚಿಹೋಗಿರುವ, ಒಂದು ಮಣ್ಣಿನ ಸಾಮಾನ್ಯ ಪ್ರೊಫೈಲ್.

Caliche
ಕ್ಯಾಲಿಚಿ. ಮಣ್ಣಿನಲ್ಲಿ, ಕ್ಯಾಲ್ಸಿಯಂ ಕಾರ್ಬೊನೇಟ್ ಅಥವಾ ಕ್ಯಾಲ್ಸಿಯಂ ಮತ್ತು ಮೆಗ್ನೀಸಿಯಂ ಕಾರ್ಬೊನೇಟ್ ಗಳ ಮಿಶ್ರಣವುಳ್ಳ ಗಟ್ಟಿಪದರ. ಇದು ಮರಳುಗಾಡು, ಉಷ್ಣವಲಯ ಮತ್ತು ಕಡಿಮೆ ಮಳೆಯಾಗುವ ಪ್ರದೇಶಗಳಲ್ಲಿ ಕಂಡುಬರುತ್ತದೆ.

Calorie
ಕ್ಯಾಲೋರಿ ಉಷ್ಣವನ್ನು ಅಳೆಯುವ ಏಕಮಾನ. ಒಂದು ಗ್ರಾಂ ತೂಕದ ನೀರಿನ ಉಷ್ಣತೆಯನ್ನು 1°C ಗೆ ಏರಿಸಲು ಬೇಕಾಗುವ ಶಾಖವು, ಒಂದು ಕ್ಯಾಲೋರಿಗೆ ಸಮನಾಗಿರುತ್ತದೆ.

Calcareous Soil
ಸುಣ್ಣದ ಮಣ್ಣು. ಈ ಮಣ್ಣು ಕ್ಯಾಲ್ಸಿಯಂ ಕಾರ್ಬೋನೇಟನ್ನು ಹೆಚ್ಚಿನ ಪ್ರಮಾಣದಲ್ಲಿ ಹೊಂದಿದ್ದು, ಕ್ಷಾರೀಯ ಗತಿಯ ಅಂದರೆ 7.0 ಗಿಂತಲೂ ಹೆಚ್ಚು ಪಿ.ಎಚ್. ಅನ್ನು ಹೊಂದಿರುತ್ತದೆ. ದುರ್ಬಲ ಹೈಡ್ರೊಕ್ಲೋರಿಕ್ ಆಮ್ಲದೊಡನೆ ಈ ಮಣ್ಣು ಉಕ್ಕುತ್ತದೆ.

Calcification
ಕ್ಯಾಲ್ಸಿಫಿಕೇಷನ್; ಸುಣ್ಣ ಶೇಖರವಾಗುವಿಕೆ. ಇದು ಮಣ್ಣು ಉತ್ಪತ್ತಿಯಾಗುವ ಒಂದು ವಿಧಾನವಾಗಿದೆ. ಮೇಲ್ಮಣ್ಣು ಸಾಕಷ್ಟು ಸುಣ್ಣದಂಶವನ್ನು ಹೊಂದಿರುತ್ತದೆ.

Calcium Cyanamide
ಕ್ಯಾಲ್ಸಿಯಂ ಸೈನಮೈಡ್. ಶೇಕಡ 20 ರಷ್ಟು ಸಾರಜನಕವುಳ್ಳ ಈ ವಸ್ತು, ಮಾರುಕಟ್ಟೆಯಲ್ಲಿ ಸಿಗುವ ಒಂದು ರಾಸಾಯನಿಕ ಗೊಬ್ಬರ.

Capillary Water
ಲೋಮನಾಳ ಜಲ. ಮೇಲು ಮಣ್ಣಿನ ಒತ್ತಡದ ಜಲಗಳ ಪರಿಣಾಮವಾಗಿ, ಮಣ್ಣಿನ ಸೂಕ್ಷ್ಮ ಕಣಾಂತರಗಳಲ್ಲಿ ಮತ್ತು ಕಣಗಳ ಸುತ್ತ ಪೊರೆಯಂತೆ ಕಂಡುಬರುವ ನೀರು.

Capillary Potential
ಲೋಮನಾಳ ಸ್ಥಾನಶಕ್ತಿ. ಒಂದು ಮಣ್ಣಿನ ಸ್ತಂಭದಲ್ಲಿ ಸ್ವಾಭಾವಿಕ ಜಲಮಟ್ಟದಿಂದ ಮೇಲಕ್ಕೆ ಒಂದು ಗೊತ್ತಾದ ನಿಲುವಿಗೆ, ಒಂದು ನಿರ್ದಿಷ್ಟ ಪ್ರಮಾಣದ ನೀರನ್ನು ಏರಿಸಲು ಬೇಕಾಗುವ ಸಾಮರ್ಥ್ಯ ಅಥವಾ ಶ್ರಮ.

Carbon Cycle
ಇಂಗಾಲದ ಚಕ್ರ. ಇಂಗಾಲದ ಜೀವಿಗಳಿಂದ ಬಳಸಲ್ಪಟ್ಟು, ಅವುಗಳ ಶರೀರದ ಅಂಗವಾಗಿ ಇದ್ದು, ಅವು ಸತ್ತ ನಂತರ ವಿಘಟನೆಯಾಗಿ ಮೊದಲಿನ ಸ್ಥಿತಿಗೆ ಬರುವ ಕ್ರಿಯೆಗೆ ಇಂಗಾಲದ ಚಕ್ರ ಎಂದು ಹೆಸರು.


logo