logo
भारतवाणी
bharatavani  
logo
Knowledge through Indian Languages
Bharatavani

Krishi Rasayana Shastra Shabdartha Nirupanavali (English-Kannada)
A B C D E F G H I J K L M N O P Q R S T U V W X Y Z

Bone Meal
ಮೂಳೆ ಪುಡಿ.

Bone Meal, Raw
ಕಚ್ಚಾ ಮೂಳೆ ಪುಡಿ. ಕಚ್ಚಾ ಮೂಳೆಗಳನ್ನು ಚೆನ್ನಾಗಿ ಪುಡಿಮಾಡಿ ತಯಾರಿಸಿದ ಗೊಬ್ಬರ.

Bone Meal, Steamed
ಹಬೆ (ಉಗಿ) ಗೊಳಿಸಿದ ಮೂಳೆಪುಡಿ. ಒತ್ತಡ ತುಂಬಿದ ಹಬೆ (ಉಗಿ)ಯಲ್ಲಿ ಸಂಸ್ಕರಿಸಿದ ಮೂಳೆಯನ್ನು ಪುಡಿ ಮಾಡುವುದರಿಂದ ದೊರೆಯುವ ಗೊಬ್ಬರ.

Broad Base Terrace
ವಿಶಾಲತಳಜಗತಿಭೂಮಿ, ಮಣ್ಣು ಕೊಚ್ಚಣೆಯನ್ನು ತಡೆಯಲು ಇಳಿಜಾರಿಗೆ ಅಡ್ಡಲಾಗಿ ಎತ್ತರ ಸ್ವಲ್ಪವೇ ಇದ್ದು ಅಗಲ ಹೆಚ್ಚಿರುವ ಜಗತಿ ಭೂಮಿ.

Brown Soils
ಕಂದುಮಣ್ಣುಗಳು. ಇವುಗಳು ಮೇಲ್ಭಾಗದಲ್ಲಿ ಕಂದುಮಣ್ಣಿನ ತೆಳುವಾದ ಪದರವನ್ನು ಹೊಂದಿದ್ದು, ತಳದಲ್ಲಿ ಕಾರ್ಬೊನೇಟ್ ಶೇಖರವಾಗಿರುವ ಪದರವನ್ನುಳ್ಳದ್ದಾಗಿರುತ್ತವೆ.

Brown Forest Soils
ಕಾಡಿನ ಕಂದುಮಣ್ಣುಗಳು. ಇಂಟ್ರಸೋನಲ್ ಗುಂಪಿಗೆ ಸೇರಿದ ಈ ಮಣ್ಣು, ಕಂದು ಬಣ್ಣದ ಮೇಲ್ಮಣ್ಣನ್ನು ಹೊಂದಿದ್ದು, ಹೇರಳವಾಗಿ ಹ್ಯೂಮಸ್ ನಿಂದ ಕೂಡಿರುತ್ತದೆ. ಈ ಮಣ್ಣು ಸ್ವಲ್ಪ ಹುಳಿಯಾಗಿದ್ದು, ಕಬ್ಬಿಣ ಮತ್ತು ಅಲ್ಯೂಮಿನಿಯಂಗಳ ಪ್ರಮಾಣ ಕಡಿಮೆ ಇರುತ್ತದೆ.

Buffer Capacity
ಕಾಪುತಡೆಸಾಮರ್ಥ್ಯ. ಹುಳಿ ಅಥವಾ ಕ್ಷಾರ ಹೆಚ್ಚುವಿಕೆಗೆ ಪ್ರತಿಯಾಗಿ ತೋರುವ, ಕಾಪುತಡೆ ಕ್ರಿಯೆಯ ಸಾಮರ್ಥ್ಯ.

Buffer Solution
ಕಾಪುದ್ರವ. ಕಾದಿರಿಸಿದ ಆಮ್ಲತೆ ಮತ್ತು ಪ್ರತ್ಯಾಮ್ಲತೆಯನ್ನು ಹೊಂದಿರುವ ಈ ದ್ರವ, ಒಂದು ಕಾಲದವರೆಗೆ ಸ್ಥಿರಪ್ರಮಾಣದ ಪಿ.ಎಚ್ ಅನ್ನು ಉಳಿಸಿಕೊಂಡು ಬರುತ್ತದೆ.

Buoyancy
ಪ್ಲವನತೆ. ತನ್ನಲ್ಲಿ ಮುಳುಗಿರುವ ವಸ್ತುವಿನ ಮೇಲೆ ದ್ರವವು ಅರೋಪಿಸುವ ಮೇಲ್ಮುಖ ಒತ್ತಡ ಬಲಕ್ಕೆ, ಹೆಪ್ಲವನತೆ ಎಂದು ಹೆಸರು.

Bulk Density
ಸ್ಥೂಲಸಾಂದ್ರತೆ. ಏಕಮಾನ ಗಾತ್ರದ ದ್ರವ್ಯ ಪರಿಮಾಣ. ಸ್ಥೂಲ ಗಾತ್ರದ ಮಣ್ಣನ್ನು 105°C ಶಾಖಕ್ಕೆ ಒಣಗಿಸಿದ ಮೇಲೆ ಕಂಡುಹಿಡಿಯಲ್ಪಡುತ್ತದೆ.


logo