logo
भारतवाणी
bharatavani  
logo
Knowledge through Indian Languages
Bharatavani

Krishi Rasayana Shastra Shabdartha Nirupanavali (English-Kannada)
A B C D E F G H I J K L M N O P Q R S T U V W X Y Z

Beeta Rays
ಬೀಟಾ ಕಿರಣಗಳು. ಇಲೆಕ್ಟ್ರಾನ್ ಗಳ ಕಿರಣಗಳು.

Benzene Ring
ಬೆನ್ ಜೀನ್ ವರ್ತುಲ. ಆರು ಇಂಗಾಲದ ಪರಮಾಣುಗಳೊನ್ನೊಳಗೊಂಡ ಒಂದು ಬೆನ್ ಜೀನ್ ಅಣುವಿನ ಆಕೃತಿಯನ್ನು ಸೂಚಿಸುವ ಷಟ್ಕೋನಾಕೃತಿ.

Bearing Capacity
ಧಾರಣ ಸಾಮರ್ಥ್ಯ. ಒಂದು ನಿರ್ದಿಷ್ಟ ಗಾತ್ರದ ಏಕಮಾನ ಆವರಣದ ಮೇಲೆ ಬಿದ್ದಿರುವ ಸರಾಸರಿ ಭಾರ. ಈ ಭಾರವಿದ್ದರೂ ಕೂಡ ಸಾಧಾರಣಾವರಣ ಯಾವುದೇ ರೀತಿಯ ವ್ಯತ್ಯಾಸವನ್ನು ಹೊಂದುವುದಿಲ್ಲ.

Biological Mineralisation
ಜೈವಿಕ ಖನಿಜೀಕರಣ. ಸಾವಯವ ವಸ್ತು, ಸೂಕ್ಷ್ಮ ಜೀವಿ ಕ್ರಿಯೆಯಿಂದ ವಿಘಟನೆಯಾಗಿ ನಿರವಯವ ವಸ್ತುಗಳ ಬಿಡುಗಡೆಯಾಗುವಿಕೆ.

Binding Agent
ಬಂಧನಕಾರಿ; ಬಂಧಕ. ಇದು ಹ್ಯೂಮಸ್, ಜೇಡಿ, ಮತ್ತು ಸುಣ್ಣ ಮಣ್ಣಿನ ಕಣಗಳನ್ನು ಒಂದುಗೂಡಿಸಿ ಸಂಯುಕ್ತ ಕಣಗಳನ್ನು ಅಸ್ತಿತ್ವಕ್ಕೆ ತರುತ್ತದೆ.

Biuret
ಬೈಯುರೆಟ್ ಒಂದು ಅಣು ಅಮೋನಿಯ ಬಿಡುಗಡೆ ಹೊಂದಿ ಎರಡು ಅಣು ಯೂರಿಯ ಒಟ್ಟುಗೂಡುವುದರಿಂದ ಉಂಟಾಗುವ ಸಂಯುಕ್ತ ವಸ್ತು. ಇದು ಸಸ್ಯಗಳಿಗೆ ವಿಷಕಾರಿಯಾದ್ದರಿಂದ ಯೂರಿಯದಲ್ಲಿ ಇದರ ಅಂಶ ಶೇಕಡ 1.5 ಕ್ಕಿಂತ ಹೆಚ್ಚಿರಬಾರದು.

Black Alkali Soil
ಕಪ್ಪುಕ್ಷಾರಮಣ್ಣು. ಹೆಚ್ಚು ವಿನಿಮಯ ಸೋಡಿಯಂ ಉಳ್ಳ ಈ ಮಣ್ಣು ಸಾವಯವ ಪದಾರ್ಥಗಳನ್ನು ತನ್ನಲ್ಲಿ ಕರಗಿಸಿಕೊಂಡು, ತೇವಾಂಶ ಆವಿಯಾದಾಗ, ಕಪ್ಪು ಬಣ್ಣದ ಗಷ್ಟನ್ನು ಭೂಮಿಯ ಮೇಲೆ ಬಿಡುತ್ತದೆ. ಆದ್ದರಿಂದ, ಹಿಲ್ ಗಾರ್ಡ್ ಎಂಬುವರು ಈ ಮಣ್ಣನ್ನು ಕಪ್ಪುಕ್ಷಾರಮಣ್ಣು ಎಂದು ಕರೆದರು.

Boiling Point
ಕುದಿಯುವ ಬಿಂದು. ದ್ರಾವಣದ ಬಾಷ್ಪ ಒತ್ತಡವು ಹೊರಗಿನ ಒತ್ತಡಕ್ಕೆ ಸಮನಾಗಿರುವ ಉಷ್ಣತೆ.

Boyle’s Law
ಬಾಯಲ್ ನ ನಿಯಮ. ಉಷ್ಣವು ನಿಯತವಾಗಿದ್ದಾಗ, ಒಂದು ನಿರ್ದಿಷ್ಟ ಜಡತ್ವದ ಅನಿಲದ ಗಾತ್ರವು ಅದರ ಒತ್ತಡಕ್ಕೆ ವಿಲೋಮಾನುಪಾತವಾಗಿರುತ್ತದೆ. ಸೂತ್ರರೂಪದಲ್ಲಿ ಈ ಕೆಳಗಿನಂತೆ ಹೇಳಬಹುದು. V α 1/p V = ನಿರ್ದಿಷ್ಟ ಜಡತ್ವ ಅನಿಲದ ಗಾತ್ರ. P = ಒತ್ತಡ.

Bog Soil
ಬಾಗ್ ಮಣ್ಣು ; ಕೊಳಚೆ ಮಣ್ಣು. ಇಂಟ್ರಸೋನಲ್ ಗುಂಪಿಗೆ ಸೇರಿದ ಈ ಮಣ್ಣು ಮೇಲ್ಭಾಗದಲ್ಲಿ ಕಸ ಅಥವಾ ದರಗು ಮಣ್ಣನ್ನು ಹೊಂದಿದ್ದು, ಕೆಳಭಾಗದಲ್ಲಿ ದರಗು ಮಣ್ಣಿನಿಂದ ಕೂಡಿರುತ್ತದೆ. ಶೀತವಲಯಗಳಲ್ಲಿ, ಜೌಗು ಅಥವಾ ಕೊಳಚೆ ಪ್ರದೇಶಗಳಲ್ಲಿ, ಈ ಮಣ್ಣು ಹೆಚ್ಚಾಗಿ ಕಂಡು ಬರುತ್ತದೆ.


logo