logo
भारतवाणी
bharatavani  
logo
Knowledge through Indian Languages
Bharatavani

Krishi Rasayana Shastra Shabdartha Nirupanavali (English-Kannada)
A B C D E F G H I J K L M N O P Q R S T U V W X Y Z

Autotrophic
ನಿರವಯವ ಮಾಧ್ಯಮ ಜೀವಿ. ಸಾವಯವ ವಸ್ತುವಿಲ್ಲದೆಡೆ ಜೀವಿಸುವ ಶಕ್ತಿಯುಳ್ಳ ಜೀವಿ.

Auxin
ಆಕ್ಸಿನ್ ; ಸಸ್ಯಚೇತಕ. ಸಸ್ಯಗಳ ಬೆಳವಣಿಗೆಯನ್ನು ಹೆಚ್ಚಿಸಲು ಉಪಯೋಗಿಸುವ, ಸಾವಯವ ಸಂಯುಕ್ತಗಳು.

Available Energy
ಒದಗುವ ಶಕ್ತಿ. ದೇಹದಲ್ಲಿ ನಡೆಯುವ ಸಂವರ್ಧನ ಕ್ರಿಯೆಗೆ ದೊರೆಯುವ ಶಕ್ತಿ.

Available Plant Nutrients
ಒದಗುವ ಸಸ್ಯ ಪೋಷಕಗಳು. ಸಸ್ಯಗಳ ಬೆಳವಣಿಗೆಗೆ ದೊರೆಯುವಂತೆ ಮಣ್ಣಿನಲ್ಲಿ ಅಥವಾ ಮಣ್ಣಿನ ದ್ರಾವಣದಲ್ಲಿ ಕಂಡುಬರುವ ಪೋಷಕಗಳು.

Available Water
ಒದಗುವ ನೀರು. ಸಸ್ಯಗಳ ಬೆಳವಣಿಗೆಗೆ ಪ್ರಯೋಜನಕಾರಿಯಾಗುವಷ್ಟು ಮಟ್ಟದಲ್ಲಿ ಮಣ್ಣಿನಿಂದ ದೊರೆಯುವ ನೀರಿನ ಭಾಗ.

Azofication
ಅಜೋಫಿಕೇಷನ್. ಅಸಟೋಬ್ಯಾಕ್ಟರ್ ಗುಂಪಿಗೆ ಸೇರಿದ ಸೂಕ್ಷ್ಮಜೀವಿಗಳು ಸಾರಜನಕವನ್ನು ಮಣ್ಣಿನಲ್ಲಿ ಸ್ಥಿರೀಕರಿಸುವ ಪ್ರಕ್ರಿಯೆ.

Azonal Soil
ಅಜೋನಲ್ ಮಣ್ಣು; ವಲಯ ರಹಿತ ಮಣ್ಣು; ವಲಯಾತೀತ ಮಣ್ಣು. ಅಪರಿಪೂರ್ಣ ಗುಣಧರ್ಮ ಹಾಗೂ ಅಪಕ್ವ ಮಣ್ಣಿನ ಪ್ರೊಫೈಲ್ ಗಳಿಂದ ಕೂಡಿರುವ ಮಣ್ಣು.

Base
ಪ್ರತ್ಯಾಮ್ಲ. ಕೆಂಪು ಲಿಟ್ ಮಸ್ ಕಾಗದವನ್ನು ನೀಲಿ ಬಣ್ಣಕ್ಕೆ ತಿರುಗಿಸಬಲ್ಲ, ಒಗರು-ಕಹಿ ರುಚಿ ಉಳ್ಳ, ಸಾಬೂನು ಸ್ಪರ್ಶವುಳ್ಳ, ಸಾಕಷ್ಟು ಹೈಡ್ರಾಕ್ಸಿಲ್ ಅಯಾನುಗಳನ್ನೊಳಗೊಂಡ ವಸ್ತು. ಲೆವಿಸ್ ಪ್ರತ್ಯಾಮ್ಲ : ಬೇರೆ ಅಣು ಇಲ್ಲವೆ ಅಯಾನ್ ಗಳಲ್ಲಿನ ಪರಮಾಣುವಿನಿಂದ ಪಾಲುಗೊಳ್ಳಬಹುದಾದ ಜೋಡಿ ಎಲೆಕ್ಟ್ರಾನುಗಳನ್ನೊಳಗೊಂಡ ವಸ್ತು.

Basicity
ಪ್ರತ್ಯಾಮ್ಲೀಯತೆ. ಆಮ್ಲದಣುಗಳಲ್ಲಿರುವ, ಪಲ್ಲಟಿಸಬಹುದಾದ ಜಲಜನಕದ ಪರಮಾಣುಗಳ ಸಂಖ್ಯೆಗೆ, ಆಮ್ಲದ ಪ್ರತ್ಯಾಮ್ಲೀಯತೆ ಎಂದು ಹೆಸರು.

Basic Salts
ಪ್ರತ್ಯಾಮ್ಲೀಯ ಲವಣಗಳು. ಆಮ್ಲದ ಮೂಲ ಘಟಕದಿಂದ ಪೂರ್ಣವಾಗಿ ಸ್ಥಾನಾಂತರ ಹೊಂದದ ಪ್ರತ್ಯಾಮ್ಲದ ಹೈಡ್ರಾಕ್ಸಿಲ್ ಅಥವಾ ಆಕ್ಸೈಡ್ ಇದ್ದ ಲವಣಗಳು.


logo