logo
भारतवाणी
bharatavani  
logo
Knowledge through Indian Languages
Bharatavani

Krishi Rasayana Shastra Shabdartha Nirupanavali (English-Kannada)
A B C D E F G H I J K L M N O P Q R S T U V W X Y Z

Antidotic
ವಿಷಹಾರಿ ; ಪ್ರತಿವಿಷ. ಸೂಕ್ಷ್ಮ ಜೀವಿಗಳಿಂದ ಉತ್ಪತ್ತಿಯಾಗುವ ಈ ವಸ್ತು, ವಿಷಪೂರಿತ ಬ್ಯಾಕ್ಟೀರಿಯಾಗಳ ಹಾನಿಯನ್ನು ತಡೆಗಟ್ಟುವ ಶಕ್ತಿಯುಳ್ಳದ್ದಾಗಿರುತ್ತದೆ.

Anti serum
ರಕ್ತನೀರು. ಪ್ರತಿದೇಹ ವಸ್ತುವನ್ನೊಳಗೊಂಡ ಒಂದು ಪ್ರಾಣಿಯ ರಕ್ತನೀರು.

Apo-enzyme
ಅಪೋಕಿಣ್ವ. ಕಿಣ್ವದಲ್ಲಿರುವ ಪ್ರೋಟೀನ್ ಭಾಗ. ಇದು ಕಿಣ್ವದ ನಿರ್ದಿಷ್ಟ ಕ್ರಿಯೆಯನ್ನು ನಿರ್ಣಯಿಸುವುದರಲ್ಲಿ ಸಹಾಯಕವಾಗುತ್ತದೆ.

Apparent Specific Gravity
ದೃಷ್ಟಸಾಪೇಕ್ಷ ಸಾಂದ್ರತೆ. ಒಂದು ನಿರ್ದಿಷ್ಟ ಗಾತ್ರದ ರಂಧ್ರ ಸ್ಥಳಸಹಿತ ಮಣ್ಣಿನಸಾಂದ್ರತೆ. ಇದು ಯಾವಾಗಲೂ ನೈಜ ಸಾಪೇಕ್ಷ ಸಾಂದ್ರತೆಗಿಂತ ಕಡಿಮೆಯಾಗಿರುತ್ತದೆ.

Arable Land
ಸಾಗುವಳಿ ಭೂಮಿ. ಬೆಳೆ ತೆಗೆಯಲು ಉಪಯೋಗಕ್ಕೆ ಬರುವ ಭೂಮಿ.

Arid Climate
ಶುಷ್ಕ ವಾಯುಗುಣ. ಕಡಿಮೆ ಮಳೆಯಾಗುವ ಪ್ರದೇಶದ ವಾಯುಗುಣ. ಮರಳುಗಾಡು ಭೂಮಿಯ ವಾಯುಗುಣ.

Atom
ಪರಮಾಣು ರಾಸಾಯನಿಕ ಕ್ರಿಯೆಯಲ್ಲಿ ತನ್ನ ಅಸ್ತಿತ್ವವನ್ನು ಉಳಿಸಿಕೊಂಡು ಭಾಗವಹಿಸುವ ಅತ್ಯಂತ ಸಣ್ಣ ಮೂಲಕಣ.

Atomic Theory
ಪರಮಾಣು ಸಿದ್ಧಾಂತ. ಪ್ರಪಂಚದಲ್ಲಿರುವ ಎಲ್ಲ ಪದಾರ್ಥಗಳೂ ಕೆಲವು ಮೂಲವಸ್ತುಗಳ ಸಂಯೋಗದಿಂದ ಆಗಿವೆ; ಪ್ರತಿಯೊಂದು ಮೂಲವಸ್ತುವೂ ಒಂದು ನಿರ್ದಿಷ್ಟ ಭಾರವುಳ್ಳ ಕಣಗಳ ಸಮುದಾಯ; ಈ ಕಣಗಳೇ ರಸಾಯನ ಕ್ರಿಯೆಯಲ್ಲಿ ಭಾಗವಹಿಸುವುವು. ಇವು ಪರಮಾಣುವಾದದ ಮುಖ್ಯ ಅಂಶಗಳು.

Atomic Number
ಪರಮಾಣು ಸಂಖ್ಯೆ. ಎಲ್ಲ ಮೂಲವಸ್ತುಗಳ ಪರಮಾಣು ಕೇಂದ್ರಗಳು ಧನ ವಿದ್ಯುದಂಶಗಳನ್ನು ಹೊಂದಿವೆ. ನಿರ್ದಿಷ್ಟ ಸಂಖ್ಯೆಯ ಪ್ರೋಟಾನುಗಳನ್ನು ಹೊಂದಿವೆ. ಈ ಸಂಖ್ಯೆಗೆ ಅನುಗುಣವಾಗಿ ಪರಮಾಣುವಿನ ವ್ಯೂಹದಲ್ಲಿ ಎಲೆಕ್ಟ್ರಾನ್ ಗಳಿರುತ್ತವೆ. ಇವುಗಳ ಸಂಖ್ಯೆಗೆ ಪರಮಾಣು ಸಂಖ್ಯೆ ಎಂದು ಹೆಸರು.

Autolysis
ಆಟೋಲೈಸಿಸ್ ; ಸ್ವಯಂಜೀರ್ಣತೆ; ಸ್ವಯಂನಾಶನ. ಸಜೀವ ಸೂಕ್ಷಜೀವಿಗಳು, ಮಣ್ಣಿನಲ್ಲಿರುವ ನಿರ್ಜೀವ ಸೂಕ್ಷ್ಮಜೀವಿಗಳನ್ನು ತಿಂದು ಜೀರ್ಣಿಸಿಕೊಳ್ಳುವ ವಿಧಾನ.


logo