logo
भारतवाणी
bharatavani  
logo
Knowledge through Indian Languages
Bharatavani

Krishi Rasayana Shastra Shabdartha Nirupanavali (English-Kannada)
A B C D E F G H I J K L M N O P Q R S T U V W X Y Z

Ammonia
ಅಮೋನಿಯ. ಒಂದು ಸಾರಜನಕದ ಪರಮಾಣು ಮೂರು ಜಲಜನಕದ ಪರಮಾಣುಗಳೊಂದಿಗೆ ಕೂಡಿರುವ ವರ್ಣರಹಿತ ಅನಿಲ.

Ammonification
ಅಮೋನೀಕರಣ, ಸಾವಯವ ಸಾರಜನಕ ಸಂಯುಕ್ತ ವಸ್ತುಗಳ ವಿಘಟನೆಯಿಂದ ಅಮೋನಿಯ ಉತ್ಪತ್ತಿಯಾಗುವಿಕೆ. R - NH₂ + NOH → NH₂ + R - OH + ಶಕ್ತಿ.

Ammonium Chloride
ಅಮೋನಿಯಂ ಕ್ಲೋರೈಡ್; ಅಮೋನಿಯ ಮತ್ತು ಹೈಡ್ರೋಕ್ಲೊರಿಕ್ ಆಮ್ಲಗಳ ಸಂಯೋಗದಿಂದುಂಟಾಗಿ, ಶೇಕಡ 26 ರಷ್ಟು ಸಾರಜನಕವನ್ನುಳ್ಳ ರಸಾಯನ ಗೊಬ್ಬರ.

Ammonium Nitrate
ಅಮೋನಿಯಂ ನೈಟ್ರೇಟ್. ಅಮೋನಿಯಂ ಮತ್ತು ನೈಟ್ರಿಕ್ ಆಮ್ಲಗಳ ಸಂಯೋಗದಿಂದುಂಟಾದ ರಸಾಯನ ಗೊಬ್ಬರ. ಅದರಲ್ಲಿ ಶೇಕಡ 33-35 ರಷ್ಟು ಸಾರಜನಕವಿರುತ್ತದೆ.

Ammonium Phosphate
ಅಮೋನಿಯಂ ಫಾಸ್ಫೇಟ್. ರಂಜಕಾಮ್ಲವನ್ನು ಅಮೋನಿಯದೊಂದಿಗೆ ಸಂಸ್ಕರಿಸಿದಾಗ ದೊರೆಯುವ ರಸಾಯನ ಗೊಬ್ಬರ.

Ammonium Sulphate
ಅಮೋನಿಯಂ ಸಲ್ಫೇಟ್. ಅಮೋನಿಯ ಮತ್ತು ಸಲ್ಫ್ಯೂರಿಕ್ ಆಮ್ಲಗಳ ಸಂಯೋಗದಿಂದುಂಟಾದ ರಸಾಯನ ಗೊಬ್ಬರ. ಇದರಲ್ಲಿ ಶೇಕಡ 21 ರಷ್ಟು ಸಾರಜನಕವಿರುತ್ತದೆ.

Ammonium Sulphate Nitrate
ಅಮೋನಿಯಂ ಸಲ್ಫೇಟ್ ನೈಟ್ರೇಟ್. ಇದು ಶೇಕಡ 26 ರಷ್ಟು ಸಾರಜನಕವನ್ನು ಹೊಂದಿರುತ್ತದೆ. ಅದರಲ್ಲಿ 20 ಅಮೋನಿಯ ಮತ್ತು 6 ನೈಟ್ರೇಟ್ ರೂಪದ ಸಾರಜನಕವಿರುತ್ತದೆ. ಇದನ್ನು ರಸಾಯನ ಗೊಬ್ಬರವಾಗಿ ಉಪಯೋಗಿಸುವರು.

Amphoteric Oxides
ಆಮ್ಲಕ್ಷಾರ ಆಕ್ಸೈಡ್ ಗಳು. ಆಮ್ಲದಂತೆಯೂ ಹಾಗೂ ಪ್ರತ್ಯಾಮ್ಲದಂತೆಯೂ, ಕ್ರಿಯೆಯಲ್ಲಿ ತೊಡಗುವ ಆಕ್ಸೈಡ್ ಗಳು. ಉದಾಹರಣೆ : ZnO, SnO, Al₂O₃.

Anhydrous Ammonia
ಅನಾರ್ದ್ರ ಅಮೋನಿಯ. ಇದು, ಅಧಿಕ ಒತ್ತಡದಿಂದ, ಸಂಕುಚಿತಗೊಳಿಸಿದ ಅಮೋನಿಯ ಅನಿಲ. ಇದರಲ್ಲಿ ಶೇಕಡ 82 ರಷ್ಟು ಸಾರಜನಕ ಇರುತ್ತದೆ. ಇದು ಇತ್ತೀಚೆಗೆ ರಸಾಯನ ಗೊಬ್ಬರವಾಗಿ ಬಳಸಲ್ಪಡುತ್ತಿದೆ.

Anode
ಧನ ವಿದ್ಯುತ್ ಧ್ರುವ. ವಿದ್ಯುತ್, ವಿದ್ಯುದ್ವಿಭಜನೀಯವನ್ನು ಪ್ರವೇಶಿಸುವ ಧ್ರುವ.


logo