logo
भारतवाणी
bharatavani  
logo
Knowledge through Indian Languages
Bharatavani

Krishi Rasayana Shastra Shabdartha Nirupanavali (English-Kannada)
A B C D E F G H I J K L M N O P Q R S T U V W X Y Z

Alkaline Soil
ಕ್ಷಾರೀಯ ಮಣ್ಣು. ಕ್ಷಾರ ಪ್ರತಿಕ್ರಿಯೆಯುಳ್ಳ ಅಂದರೆ 7 ಕ್ಕಿಂತ ಹೆಚ್ಚು pH ಆಮ್ಲಸೂಚಿಯುಳ್ಳ (ಆಮ್ಲಾಂಶ) ಮಣ್ಣು.

Alkalinization
ಕ್ಷಾರೀಕರಣ: ಅಯಾನ್ ವಿನಿಮಯದಿಂದಾಗಿ, ಮಣ್ಣಿನ ವಿನಿಮಯ ಸಂಕೀರ್ಣದಲ್ಲಿ ಸೋಡಿಯಂ ಅಂಶ ಹೆಚ್ಚಾಗುವಿಕೆ.

Alkaloid
ಆಲ್ಕಲಾಯಿಡ್, ಕ್ಷಾರ ಸಾರಜನಕ ವಸ್ತು. ಸಾರಜನಕವನ್ನು ಹೊಂದಿರುವ ಸಾವಯವ ರಾಸಾಯನಿಕ ಸಂಯುಕ್ತ ವಸ್ತು.

Alkali Forming Fertilizer
ಕ್ಷಾರಕಾರಕ ರಾಸಾಯನಿಕ ಗೊಬ್ಬರ. ಮಣ್ಣಿನಲ್ಲಿ ಕ್ಷಾರದ ಉಳಿಕೆಯನ್ನು ಬಿಡುವ ರಾಸಾಯನಿಕ ಗೊಬ್ಬರ.

Alluvial Soil
ಮೆಕ್ಕಲು ಮಣ್ಣು. ನೀರಿನಿಂದ ಸಾಗಿಸಲ್ಪಟ್ಟು, ಅಸ್ತಿತ್ವಕ್ಕೆ ಬಂದ ಮಣ್ಣು.

Alluvium
ಮೆಕ್ಕಲು. ಹರಿಯುವ ನೀರಿನಿಂದ ಕೊಚ್ಚಿಬಂದು ಶೇಖರವಾಗಿರುವ ನವಿರು ಮರಳು, ಜೇಡಿ, ಗೋಡು ಮುಂತಾದ ಮೃದು ಮಣ್ಣು ಸಂಗ್ರಹಣೆ.

Alpha Particle
ಆಲ್ಫಾ ಮೊದಲಕ್ಷರ ಕಣಗಳು. ಹೀಲಿಯಂ ಮೂಲವಸ್ತುವಿನ ಕಣಗಳು.

Amide
ಅಮೈಡ್ . ಅಮೋನಿಯದಿಂದ ಸಂಯೋಜಿತವಾದ ಒಂದು ವರ್ಗದ ಸಾವಯವ ಸಂಯುಕ್ತ ವಸ್ತು.

Amphoteric Electrolyte
ಆಮ್ಲಕ್ಷಾರ ವಿದ್ಯುದ್ವಿಶ್ಲೇಷ್ಯ. ಆಮ್ಲ ಮತ್ತು ಕ್ಷಾರ ಎರಡೂ ಗುಣಗಳನ್ನು ಪ್ರದರ್ಶಿಸುವ ವಿದ್ಯುದ್ವಿಶ್ಲೇಷ್ಯ.

Amplitude
ಕಂಪನ ವಿಸ್ತಾರ. ತರಂಗ ಚಲನೆಯಲ್ಲಿ ಒಂದು ಕಣ ಅಧಿಕವಾಗಿ ಸ್ಧಾನ ಪಲ್ಲಟವಾಗುವಿಕೆ.


logo