logo
भारतवाणी
bharatavani  
logo
Knowledge through Indian Languages
Bharatavani

Krishi Rasayana Shastra Shabdartha Nirupanavali (English-Kannada)
A B C D E F G H I J K L M N O P Q R S T U V W X Y Z

Acidic Oxides.
ಆಮ್ಲೀಯ ಆಕ್ಸೈಡ್ ಗಳು. ನೀರಿನಲ್ಲಿ ಬೆರೆತು ಆಮ್ಲವನ್ನುಂಟುಮಾಡುವ ಆಕ್ಸೈಡ್ ಗಳಿಗೆ ಆಮ್ಲೀಯ ಆಕ್ಸೈಡ್ ಗಳು ಎನ್ನುವರು.

Acid Salt
ಆಮ್ಲ ಲವಣ. ಇದರಲ್ಲಿ ಆಮ್ಲದ ಅಪೂರ್ಣ ತಟಸ್ಥೀಕರಣದಿಂದ ಜಲಜನಕದ ಶೇಷವಿರುತ್ತದೆ. ಉದಾಹರಣೆ : NA₂HPO₄.

Acid Soil
ಆಮ್ಲ ಮಣ್ಣು. ಮಣ್ಣಿನಲ್ಲಿ, ‘OH’ ಅಯಾನ್ ಗಳಿಗಿಂತ ‘H’ ಅಯಾನ್ ಗಳು ಹೆಚ್ಚಾಗಿದ್ದು, ದೊರಕುವ ಪ್ರತ್ಯಾಮ್ಲ ಕಡಿಮೆ ಇರುವ ಸ್ಥಿತಿ.

Acid Rock
ಆಮ್ಲ ಶಿಲೆ. ಇದರಲ್ಲಿ ಶೇಕಡ 67 ರಿಂದ 75 ರಷ್ಟು ಸಿಲಿಕಾಂಶವಿರುತ್ತದೆ. ಉದಾಹರಣೆ : ಗ್ರ್ಯಾನೈಟ್.

Acid Forming Fertilizer .
ಆಮ್ಲಕಾರಕ ರಸಾಯನ ಗೊಬ್ಬರ. ಮಣ್ಣಿನಲ್ಲಿ ಹುಳಿ ಪ್ರವೃತ್ತಿಯನ್ನುಂಟುಮಾಡುವ ರಸಾಯನ ಗೊಬ್ಬರ. ಅಮೋನಿಯಮ್ ಸಲ್ಫೇಟ್, ಮಾನೋ ಅಮೋನಿಯ, ಯೂರಿಯಾ, ಇತ್ಯಾದಿ.

Acidification
ಆಮ್ಲೀಕರಣ. ಆಮ್ಲತೆಯನ್ನುಂಟುಮಾಡುವ ಗೊಬ್ಬರಗಳನ್ನು ಕೊಟ್ಟಾಗ ಮಣ್ಣು ಆಮ್ಲಗತಿಗೆ ಸಾಗುತ್ತದೆ.

Active Immunity
ಸ್ವಶಕ್ತಿ ರಕ್ಷಣೆ. ತನ್ನ ಸ್ವಶಕ್ತಿಯಿಂದಲೇ ಒಂದು ಜೀವಿಯು ರೋಗಕಾರಕ ಜೀವಿಗಳಿಂದ ರಕ್ಷಣೆ ಪಡೆಯುವುದು.

Activity Index
ಚಟುವಟಿಕೆ ಸೂಚಿ. ಯೂರಿಯಾ ಫಾರ್ಮಾಲ್ಡಿಹೈಡ್ ಸಂಯುಕ್ತವಸ್ತುವಿನ ಚಟುವಟಿಕೆ ಸೂಚಿಯನ್ನು ಈ ಕೆಳಗಿನ ಸಮೀಕರಣದಿಂದ ವ್ಯಕ್ತಪಡಿಸಬಹುದು. ಚಟುವಟಿಕೆ ಸೂಚಿ = {[(% GWIN)-(%HWIN)] ➗ (% GWIN)} x 100 % GWIN = ತಣ್ಣೀರಿನಲ್ಲಿ ಕರಗದ ಸಾರಜನಕದ ಶೇಕಡ. % HWIN = ಬಿಸಿ ನೀರಿನಲ್ಲಿ ಕರಗದ ಸಾರಜನಕದ ಶೇಕಡ.

Actomag
ಆಕ್ಟೋಮಾಗ್. ಕ್ಯಾಲ್ಸಿಯಂ ಕಾರ್ಬೊನೇಟ್ ಮತ್ತು ಮೆಗ್ನೀಸಿಯಂ ಆಕ್ಸೈಡ್ ಗಳನ್ನೊಳಗೊಂಡ ರಾಸಾಯನಿಕ ವಸ್ತುವಿನ ಮಾರಾಟದ ಹೆಸರು. ಈ ವಸ್ತು, ಶೇಕಡ 67 ರಷ್ಟು ಕ್ಯಾಲ್ಸಿಯಂ ಕಾರ್ಬೊನೇಟ್, 27 ರಷ್ಟು ಮೆಗ್ನೀಸಿಯಂ ಆಕ್ಸೈಡ್ ಮತ್ತು 2 ರಷ್ಟು ಕ್ಯಾಲ್ಸಿಯಂ ಆಕ್ಸೈಡ್ ಗಳನ್ನು ಹೊಂದಿರುತ್ತದೆ.

Activated Sludge
ಜಾಗೃತ ರೊಜ್ಜು. ಚರಂಡಿ ರೊಜ್ಜಿನಲ್ಲಿ ಚದುರಿದ ವಾಯುವಿನ ಪ್ರವಾಹವನ್ನು ಸಾಕಷ್ಟು ಕಾಲ ಪ್ರವಹಿಸಿದಾಗ, ಅದರಲ್ಲಿನ ಸಾವಯವ ವಸ್ತು ತುಂತುಗಟ್ಟುತ್ತದೆ. ವಾಯು ಪ್ರವಾಹ ನಿಂತಾಗ, ಅದು ತಳದಲ್ಲಿ ಕಂದುಬಣ್ಣದ ಗಷ್ಟಾಗಿ ನಿಲ್ಲುತ್ತದೆ; ಮೇಲಿನ ನೀರು ತಿಳಿಯಾಗುತ್ತದೆ. ಈ ನೀರನ್ನು ತೆಗೆದು ಹೊಸ ರೊಜ್ಜನ್ನು ಬಿಟ್ಟು ಹೆಚ್ಚು ಹೆಚ್ಚು ಗಷ್ಟವನ್ನು ಕೂಡಿಸಬಹುದು. ಇಂತಹ ಗಷ್ಟಿಗೆ ಜಾಗೃತ ರೊಜ್ಜು ಎಂದು ಕರೆಯುತ್ತಾರೆ.


logo