logo
भारतवाणी
bharatavani  
logo
Knowledge through Indian Languages
Bharatavani

Champoo Nudigannadi (Halagannada Shabdartha Sankalana)

Please click here to read PDF file Champoo Nudigannadi (Halagannada Shabdartha Sankalana)

ಅಕೂಬಾರ
ಸಮುದ್ರ (ರಾಜದಕೂಬಾರಾವೃತಧರಿತ್ರಿಯೀ ಕೃತಿರತ್ನಕ್ಕೇ ಬೆಲೆಯೆನಿಸಿದುದೆನೆ: ಲೀಲಾವತಿ: ೧೪. ೧೪೬)

ಅಕೃತ್ಯ
ಕೃತಜ್ಞತೆಯಿಲ್ಲದವನು (ದಂಡಮಂ ನಿನಗೆ ಮಾಡಿದ ಅಕೃತ್ಯರಂ ಅಂತು ಮಾಣ್ಬುದೇ ಬಗೆ: ಪಂಪಭಾ, ೮. ೮೮)

ಅಕೃಷ್ಟಪಚ್ಯ
ಬೇಸಾಯವಿಲ್ಲದೆ ಬೆಳೆ ಕೊಡುವ ಭೂಮಿ (ಕಲ್ಪವೃಕ್ಷಪರಿಕ್ಷಯದೊಳ್ ಪ್ರಜಾಜೀವನೋಪಾಯ ಹೇತುಗಳಕೃಷ್ಟಪಚ್ಯಂಗಳಾಗಿ: ಆದಿಪು, ೬. ೭೨ ವ)

ಅಕ್ಕ
ಹಿರಿಯ ಸಹೋದರಿ (ತಮ್ಮಕ್ಕನತ್ತಿಮಬ್ಬೆಯಲ್ಲಿಗೆ ಗುಂಡಮಬ್ಬೆ ಬಂದು: ಅಜಿತಪು: ೧. ೪೬ ವ); ಹಿರಿಯ ಹೆಂಗಸು ಎಂಬ ಗೌರವ ಸಂಬೋಧನೆ (ಗಾಂಧಾರಿವೆಸರ ಅಕ್ಕಂಗಳು ತಾಂ: ಪುಣ್ಯಾಸ್ರ, ೨. ೪೭)

ಅಕ್ಕಜ
ಬೆರಗು, ವಿಸ್ಮಯ (ಮಕ್ಕಳು ಪುಟ್ಟಿದ ಪದದೊಳು ಬೆಕ್ಕಸವಟ್ಟಿರ್ದ ಮರ್ತ್ಯರಂ ಕಂಡಾಗಳ್ ಚೆಕ್ಕನೆಯವರ ಹೃದಯದೊಳಿರ್ದಕ್ಕಜಮಂ ಕಳೆದು ಕೀರ್ತಿಯಂ ಪ್ರಕಟಿಸಿದಂ: ಪುಣ್ಯಾಸ್ರ, ೧೦. ೧೦); ಪ್ರೀತಿ (ದ್ವಿಜನಿಕರಂ ಧೌತವನಕ್ಕಜದಿಂ ಮೇಲ್ಪಡಿದು ಪೋದುದೀಕ್ಷಿಸೆ ಭೂಪಂ: ನಳಚಂಪು, ೫. ೨೯)

ಅಕ್ಕಟ
ವಿಷಾದಸೂಚಕ ಉದ್ಗಾರ (ಅರಗಿನ ಮನೆಯೊಳ್ ಪಾಂಡವರುರುದೞದರಕ್ಕಟಯ್ಯೋ: ಪಂಪಭಾ, ೬. ೭)

ಅಕ್ಕಟಿಕೆ
ಉತ್ಕಟವಾದ ಆಸೆ (ಒಕ್ಕಲನೆಂತುಂ ರಕ್ಷಿಸುವಕ್ಕಟಿಕೆಯನುಳ್ಳ ಭೂಮಿಪಾಲಂ ತಲೆಮಟ್ಟೊಕ್ಕಲ ಕೆಯ್ಗಳಿಗೆಱಗುವ ಪಕ್ಕಿಗಳಂ ಕವಣೆಗೊಂಡು ಕಾಯಲ್ವೇೞ್ಕುಂ: ಸಮಯಪ, ೧೪. ೮೨)

ಅಕ್ಕರ
ಅಕ್ಷರ, ವರ್ಣ (ನೋಡುವೊಡಂದಕ್ಕರಮದು ಮಾಡುವೊಡುಚ್ಚರಣೆಗರಿದು: ಗಿರಿಜಾಕ, ೧. ೩೨); ವಿದ್ಯೆ (ಕಬ್ಬಿಗಳ್ಳರೆಂದು ಕೂಸಾಡಿಸಬಾರದಕ್ಕರ ರಾಜ್ಯದೊಳೀ ಕವಿಚಕ್ರವರ್ತಿಯಾ: ಶಾಂತಿಪು, ೧೨. ೭೭); ಬರವಣಿಗೆ (ಕಂಡರಿಸಿ ಕಲ್ಲೊಳಿಟ್ಕ್ಕರಮುಮೆಂಬಿನೆಗಮೆಸುದುದು: ಅಜಿತಪು, ೧೨. ೨೫)

ಅಕ್ಕರಗೊಟ್ಟಿ
ವಿದ್ವಾಂಸರ ಮೇಳ (ಅಕ್ಕರಗೊಟ್ಟಿಯುಂ ಚದುರರೊಳ್ವಾತುಂ: ಪಂಪಭಾ, ೪. ೩೧)

ಅಕ್ಕರಜಾಣ
ಪಂಡಿತ (ಲೋಕಕ್ಕನುರಾಗಮಂ ಜನಿಯಿಸಣ್ಣ ಮನೋಮುದದಿಂದಮೆಂದು ಸಂದಕ್ಕರಜಾಣರಾಗ್ರಹಿಸೆ: ಆಚವರ್ಧ, ೧. ೨೩)


logo