logo
भारतवाणी
bharatavani  
logo
Knowledge through Indian Languages
Bharatavani

Champoo Nudigannadi (Halagannada Shabdartha Sankalana)

Please click here to read PDF file Champoo Nudigannadi (Halagannada Shabdartha Sankalana)

ಅಕರ್ಣಹೃದಯ
ಕಿವಿ ಮತ್ತು ಹೃದಯಗಳಿಲ್ಲದ; ಹಾವಿನ ಹೃದಯವುಳ್ಳ (ಕವಿತಾವಿಷಯಂ ಕಠಿಣಹೃದಯನಪ್ಪ ಜಡಾತ್ಮಂಗೀವುದೋ: ಮಲ್ಲಿನಾಪು, ೧. ೩೬)

ಅಕರ್ತೃಕ
ಕರ್ತೃವಿಲ್ಲದ, ಸೃಷ್ಟಿಸಿದವನಿಲ್ಲದ (ಲೋಕಪ್ರಕಾರಮೆಂತೆಂದದೊಡೆ ಅದಕರ್ತೃಕಂ ಅದಹಂಕೃತಂ ಅದೂರ್ಧ್ವಂ ಅಧ್ಯಾಧೋಭೇದದಿನಿರ್ಪುದು: ಅನಂತಪು, ೧. ೬೬ ವ)

ಅಕಳಂಕರಾಮ
ಅರಿಕೇಸರಿಯ ಬಿರುದು, ಅರ್ಜುನ (ಚತುರಂಗಮೆಯ್ದೆ ಕೀಲಿಸೆ ಪಡೆ ಚಿತ್ರದೊಂದು ಪಡೆಯಂತೆವೊಲಾಯ್ತು ಅಕಳಂಕರಾಮನಿಂ: ಪಂಪಭಾ, ೧೧. ೧೩೫)

ಅಕಾಂಡ
ಅಕಾಲ (ಸುತ್ತಿದ ಪೆಂಡವಾಸದೆಳವೆಂಡಿರ ಲೋಲಕಟಾಕ್ಷಮಾಲೆ ದಿಗ್ಭಿತ್ತಿಗೆ ಅಕಾಂಡ ಕಾಂಡಪಟಮಂ ಕುಡೆ: ಮಲ್ಲಿನಾಪು, ೫. ೭೧)

ಅಕಾಂಡಜಳದ
ಅನಿರೀಕ್ಷಿತ ಮೋಡ (ಕೆಲದ ಪುಂಡರೀಕದೊಳ್ ಮಂಡಳಿಸಿದ ಮರಾಳಮಂಡಳಿಗಕಾಂಡಜಳದ ಮಂಡಳ ಶಂಕೆಯಂ ಭೋಂಕನಾಗಿಸಿ: ರಾಜಶೇವಿ, ೨. ೭೬ ವ)

ಅಕಾಂಡತಾಂಡವ
ಪಾಂಡಿತ್ಯದ ಅನವಶ್ಯಕ ಪ್ರದರ್ಶನ (ಅಕಾಂಡತಾಂಡವಾರಂಭಶೌಂಡ ಶಿಖಂಡಿಮಂಡಳಮುಮಂ: ಆದಿಪು, ೪. ೫೪ ವ)

ಅಕಾಂಡಪ್ರಳಯ
ಅಕಾಲದಲ್ಲುಂಟಾದ ಪ್ರಳಯ (ಸಮುದ್ಯತ್ ರಜತಗಿರಿ ತಟ ಸ್ಪಷ್ಟ ಸಂಶ್ಲಿಷ್ಟ ಮೌರ್ವೀನಿನದಂ ಪರ್ವಿತ್ತು ಅಕಾಂಡಪ್ರಳಯ ಘನಘಟಾಟೋಪ ಗಂಭೀರನಾದಂ: ಪಂಪಭಾ, ೧೨. ೧೩೭)

ಅಕಾಮಿಕ
ಇಚ್ಛೆಯಿಲ್ಲದ ವ್ಯಕ್ತಿ (ಸಕಳಪರಿಗ್ರಹಮಂ ಬಿಟ್ಟಕಾಮಿಕಂ ಯೋಗಯುಕ್ತನೆನಿಪಂ: ಸಮಯಪ, ೮. ೧೭೯)

ಅಕಾರಣಂ
ಕಾರಣವಿಲ್ಲದೆ (ನಿಮಗಿಂತು ಸಾವುಂ ಏತೆಱದಿನಕಾರಣಂ ನೆಱೆಯೆ ಸಂಭವಿಸಿರ್ದುದೋ ಕುಂಭಸಂಭವಾ: ಗದಾಯು, ೪. ೪೯)

ಅಕಾರಾದಿ ಹಕಾರಾಂತ
ಸಂಸ್ಕೃತ ವರ್ಣಮಾಲೆಯ ಮೊದಲಕ್ಷರವಾದ ಅ ಇಂದ ಕೊನೆಯದಾದ ಹವರೆಗೆ [ಕನ್ನಡದಲ್ಲಾದರೆ ಇದು ಅಕಾರಾದಿಳಕಾರಾಂತ] (ಅಂತಕಾರಾದಿ ಹಕಾರಾಂತಸ್ವರವ್ಯಂಜನಭೇದಭಿನ್ನ ಶುದ್ಧಾಕ್ಷರಂಗಳುಮಂ ಆಯೋಗವಾಹಕಚತುಷ್ಕಮುಮಂ ಸಂಯೋಗಾಕ್ಷರಂಗಳುಮಂ ಬ್ರಹ್ಮಿಗೆ ದಕ್ಷಿಣಹಸ್ತದೊಳ್ ಉಪದೇಶಂಗೆಯ್ದು: ಆದಿಪು, ೮. ೫೯ ವ)


logo