logo
भारतवाणी
bharatavani  
logo
Knowledge through Indian Languages
Bharatavani

Champoo Nudigannadi (Halagannada Shabdartha Sankalana)

Please click here to read PDF file Champoo Nudigannadi (Halagannada Shabdartha Sankalana)

ಅಂದುಗೆ
ಅಂದಿಗೆ, ನೂಪುರ, ಕಾಲ್ಗಡಗ (ಕೞಲೆಂದು ಮಜ್ಜಿಗೆಯುಂ ಅಂದುಗೆಯುಂ ಅಕ್ಕುಂ: ಶಬ್ದಮದ, ೨೯ ಪ್ರ ೨); ಆನೆ ಕಾಲು ಕಟ್ಟುವ ಲೋಹದ ಸರಪಳಿ (ತೆಮಳ್ದು ಕುಪ್ಪಳಿಸುವ ಅಂದುಗೆಯ ತೊಡರ ಬಲ್ಲಿಗೆ ಬಲ್ಲುಲಿಗಂ: ಅನಂತಪು, ೨. ೨೯ ವ)

ಅಂಧಕದ್ವಿಷ
ಅಂಧಕನ ಶತ್ರು, ಈಶ್ವರ (ಆತಂಗೆ ಅಮರಾಪಗೆ ಮೆಚ್ಚಿ ಪಾಯ್ವುದುಂ ಗಗನದಿಂ ಅಂಧಕದ್ವಿಷಜಟಾಟವಿಯೊಳ್ ಬೞಕಾದ ಶೈಳದೊಳ್ ಸೊಗಯಿಸೆ ಪಾಯ್ದುದು: ಪಂಪಭಾ, ೪. ೧೩)

ಅಂಧಕಪಾಷಾಣ
ಲೋಹಾಂಶವಿಲ್ಲದ ಕಲ್ಲು (ನೀರೊಳ್ ಬೆಣ್ಣೆಯಱಸುವಂತಂಧಕಪಾಷಾಣದೊಳ್ ಪೊನ್ನನಱಸುವಂತಕ್ಕುಂ: ಚಾವುಂರಾಪು, ೩೯೧)

ಅಂಧಕಾರ
ಕತ್ತಲೆ (ಇದು ದಲ್ ಘೋರಾಂಧಕಾರಕ್ಕೆ ಮಾಡಿದ ಕೂಪಂ: ಪಂಪಭಾ, ೧೩. ೭೨)

ಅಂಧತಮಸ
ಗಾಢವಾದ ಕತ್ತಲೆ (ನಿರಂತರಮಾ ಭೂಪನೊಳಿರ್ದುದಂಧತಮಸಂ: ಶಾಂತಿಪು, ೧೦. ೧೫೩)

ಅಂಧನೃಪ
ಕುರುಡು ರಾಜ, ಧೃತರಾಷ್ಟ್ರ (ಮನದೊಳ್ ತ್ರೈಭುವನಮಂ ಆಳ್ದನಿತುವರಂ ತನಗೆ ಸಂತಸಂ ಪೆರ್ಚಿಯುಂ ಅಂದು ಇನಿಸು ಅಂಧನೃಪಂ ತನ್ನಯ ಜನದೊಳ್ ಕೆಲನಱಯೆ ಕೃತಕಶೋಕಂಗೆಯ್ದಂ: ಪಂಪಭಾ, ೩. ೮)

ಅಂಧಯಷ್ಟಿ
ಕುರುಡನ ಊರೆಗೋಲು (ಎಮಗೆ ಅಂಧಯಷ್ಟಿಯಾಗಿರ್ದೆ ಮಗನೆ ನೀನುಳ್ಳೊಡೆ ಎಲ್ಲಂ ಒಳವು ಎಂದಿರೆ ನಿನ್ನುಮನಿರಿಸದೆ ಕುರುವಂಶಾನಿಮಿತ್ತರಿಪು ಪಾಶಪಾಣಿ ಸವಿನೋಡಿದನೇ: ಗದಾಯು, ೩. ೭೬)

ಅಂಧರಾಣ್ನಂದನ
(ಅಂಧರಾಜ್+ನಂದನ) ಕುರುಡ ರಾಜನ ಮಗ, ದುರ್ಯೋಧನ (ಅಂದರಾಣ್ನಂದನನಳ್ಲದುಂತು ತಲೆಯುರ್ಚುಗುಮೇ ರಣರಂಗಭೂಮಿಯೊಳ್: ಪಂಪಭಾ, ೧೩. ೭೫)

ಅಂಧಲಾವುಕನ್ಯಾಯ
ಕುರುಡನಿಗೆ ಲಾವಿಗೆ ಸಿಕ್ಕಿದಂತಹ ಅನಿರೀಕ್ಷಿತ ಘಟನೆ (ಅಂಧಲಾವುಕನ್ಯಾಯದೆ ಭಾವಮೊಂದೆರಡು ಲೇಸೆನೆ ಪೇೞ್ದುಱದಿರ್ಪುದೊಪ್ಪಮೇ: ಚಂದ್ರಪ್ರಪು, ೧. ೪೮)

ಅಂಪು
ಅಣ್ಪು, ಅನುಲೇಪನ (ಮುಡಿಯುಸುವ ಅಣ್ಪನಿಕ್ಕುವ ಅಡಿಯೂಡುವ ಕನ್ನಡಿದೋರ್ಪ: ಆಚವರ್ಧ, ೫. ೪೪)


logo