logo
भारतवाणी
bharatavani  
logo
Knowledge through Indian Languages
Bharatavani

Champoo Nudigannadi (Halagannada Shabdartha Sankalana)

Please click here to read PDF file Champoo Nudigannadi (Halagannada Shabdartha Sankalana)

ಹಯಪಲ್ಯಾಣ
ಕುದುರೆಯ ಜೀನು (ಹಯಪಲ್ಯಾಣಪ್ರಭಾಮಂಜರಿ ಗಜಭಿದುಸಿಂಧೂರರಾಗಂ ಭಟಶ್ರೇಣಿಯ ಚೆಂಬೊಂಗಟ್ಟು .. .. ಕೊಲ್ಲಣಿಗೆ ಮೆಱೆಯೆ: ಅನಂತಪು, ೧೩. ೭೫)

ಹಯವಲ್ಲನ
ಕುದುರೆಯ ಒಂದು ಬಗೆಯ ನಡಿಗೆ )ಅದಂ ಗುಣಾರ್ಣವನಿಡಲೊಲ್ದನಿಲ್ಲ ಹಯವಲ್ಲನಸಚಳರತ್ನಕುಂಡಳಂ: ಪಂಪಭಾ, ೫. ೫೧)

ಹಯವೈಹಾಳಿ
ಕುದುರೆ ಸವಾರಿ (ದ್ವಿರದಾರೋಹಣ ಯೋಗ್ಯವೀಧಿ ಹಯವೈಹಾಳಿಕಪ್ರದೇಶಂ ಶಸ್ತ್ರಶ್ರಮಭೂಮಿ .. .. ಸುತ್ತಿರ್ಪಿನೆಗಂ: ಪುಷ್ಪದಂಪು, ೪. ೫೪)

ಹಯವ್ರಾತ
ಕುದುರೆಗಳ ಗುಂಪು (ಶಾತಶತರಪ್ರಹಾರದ ರಥಾಂಗವಿದಾರಣಮಕ್ಷಖಂಡನಂ ಸೂತಸೂದನಂ ಯುಗಸಮುದ್ದಳನಂ ಧ್ವಜಭಂಜನಂ ಹಯವ್ರಾತನಿಶುಂಭನಂ ಸಮನಿಸುತ್ತಿರೆ: ಚಂದ್ರಪ್ರಪು, ೧೦. ೭೫)

ಹಯಶಾಸ್ತ್ರ
ಕುದುರೆಗಳ ಬಗೆಗಿನ ವಿಜ್ಞಾನ (ಇಭೇಂದ್ರಶಿಕ್ಷೆ ಹಯಶಾಸ್ತ್ರಂ .. .. ಅಖಿಲವ್ಯೂಹೋತ್ಕರಮೆಂಬಿನಿತಱೊಳಂ ಬಲ್ಲರೆಲ್ಲರುಂ ಮೆಚ್ಚೆ ಪಡೆದನತಿಕೌಶಲಮಂ: ಪುಷ್ಪದಂಪು, ೪. ೫೯)

ಹಯಶಿಕ್ಷಾ[ಕ್ಷೆ]
ಕುದುರೆಯನ್ನು ಪಳಗಿಸುವಿಕೆ (ಹಯಶಿಕ್ಷಾಕ್ರೀಡೆಯಂ ತೋಱುವ ಹರಿಸುತನೊ ತಾನೆಪ್ಪಂದದಿಂ .. .. ನಾಡೆಯುಮಾ ಕಂದರ್ಪದೇವಂ ಸುರಚಿರತುರಗಾರೂಢಿಯೊಳ್ ಪ್ರೌಢನಾದಂ: ಕುಸುಮಾಕಾ, ೭. ೭೫)

ಹಯಹೇಷಿತ
ಕುದುರೆಯ ಕೆನೆತ (ಮದಸ್ತಂಭೇರಮ ಬೃಂಹಿತಂಗಳಿಂದಂ ಯುಗಪದಾಸ್ಫಾಲಿತ ಅನೇಕ ದುಂದುಭಿಧ್ವನಿ ಮಧುರಗೀತಂಗಳಪ್ಪ ಹಯಹೇಷಿತಂಗಳಿಂದಂ: ಆದಿಪು, ೧೪. ೯೬ ವ)

ಹಯೋಪಾಯ
ಅಶ್ವವಿದ್ಯೆ (ಹಯೋಪಾಯಕುಶಲರಪ್ಪ ಗಾಂಗೇಯರ್ ಅಱಪಿದ ಮಾತಂ ಏಕಾಂತದೊಳ್ ಅಱಪುವುದುಂ: ಪಂಪಭಾ, ೧೨. ೮೮ ವ)

ಹಯೌಘ
ಕುದುರೆ ಸೈನ್ಯ (ಮನಮುಳ್ಳುನ್ಮದ ಗಂಧಸಿಂಧುರಚಯಂ ಚಂಡಾಜಿವಿಕ್ರಾಂತಮರ್ತ್ಯನಿಳಾಕ್ರಾಂತ ಹಯೌಘಂ: ಆದಿಪು, ೪. ೯೧)

ಹಯ್ಯಂಗವೀನ
ಹೊಸದಾಗಿ ತೆಗೆದ ಬೆಣ್ಣೆ (ಸುಗಂಧಿ ಪರಿಮಲಾನೂನವಪ್ಪ ಹಯ್ಯಂಗವೀನಮುಮಂ ಅರಸಂಗಂ ಪಂಕ್ತಿಯೊಳುಣ್ಬ ಪರಿಜನಕ್ಕೆಲ್ಲಂ ಬಡ್ಡಿಸಿದಾಗಳ್: ಸುಕುಮಾಚ, ೧೧. ೨೯ ವ)


logo