logo
भारतवाणी
bharatavani  
logo
Knowledge through Indian Languages
Bharatavani

Champoo Nudigannadi (Halagannada Shabdartha Sankalana)

Please click here to read PDF file Champoo Nudigannadi (Halagannada Shabdartha Sankalana)

ಹಣಾಹಣಿ
ಹಣೆಯಿಂದ ಹಣೆಗೆ ಹೊಡೆದು ಮಾಡುವ ಹೋರಾಟ (ದಂಡಾದಂಡಿ ಕಚಾಕಚಿ ಧಾೞಾಧಾೞ ದೆಖ್ಖಾದೆಖ್ಖಿ ಹಣಾಹಣಿ: ಶಬ್ದಮದ, ೧೯೬ ಪ್ರ)

ಹಣ್ಣು
ಮಾಡು (ಕಿಱಯ ವನಿತೆ .. .. ಬಱಯ ಕಲಹವನೆ ಹಣ್ಣಿ ಕಡುರೋಷದಿದೆ ಬಗ್ಗಿಸಿ ನುಡಿದಳ್: ಧರ್ಮಪ, ೨. ೪೯)

ಹತ
ಭಂಗಗೊಂಡ (ಹತಭುಜಗರ್ವಮಾಗೆ ದೆಸೆಗೆಟ್ಟನಿರುದ್ಧತಳಪ್ರಹಾರದಿಂ: ಜಗನ್ನಾವಿ, ೭. ೧೨೯)

ಹತದೈವ
ದುರದೃಷ್ಟವಂತ (ಹತದೈವಂ ಪ್ರಾರಂಭಂ ಪ್ರತಿಕಾರಂ ದೀರ್ಘಸೂತ್ರ ತತ್ಪ್ರತಿಕಾರಂ ಶತಮಾದೊಡೆ ಅಂತು ಮೋಕ್ಷಂ ಹತೋರುಗೆನಗಾವುದು ಇಂ ಗಡ ಪ್ರತಿಕಾರಂ: ಗದಾಯು, ೯. ೨೫)

ಹತಪ್ರತಿಜ್ಞ
ಪ್ರತಿಜ್ಞಾಭಂಗರಾದವರು (ಆತ್ಮೀಯವಿದ್ಯಾ ಗರ್ವಪರ್ವತಂ ಅವರ ವಚೋನಿರ್ಘಾತದಿಂ ನುಚ್ಚುನುಱಯಾಗಿ ಪೋದೊಡೆ ಹತಪ್ರತಿಜ್ಞರುಂ ಗಳಿತಗರ್ವರುಂ ಆಗಿ: ಆದಿಪು, ೩. ೭೫ ವ)

ಹತವಿತತಕೋಳಾಹಳಂ
ಏಟುಗಳಿಂದ ಕ್ಷೆಭೆಗೊಳಿಸಿ [ದವನು] (ಕಟ್ಟುಗಳೆಲ್ಲಮಂ ಪಱದು ಹತವಿತತಕೋಳಾಹಳಂ ಎೞೆದು ಪೊೞಲೆಲ್ಲಮಂ ಕೊಲ್ವುದಂ ಅರಸ ಕೇಳ್ದು: ವಡ್ಡಾರಾ, ಪು ೬೩, ಸಾ ೧೦)

ಹತವಿಹತ
ಹೊಡೆತ ಮರುಹೊಡೆತ (ವಿದ್ವಿಷ್ಟವಿದ್ರಾವಣನ ಮೊನೆಯಂಬಿನ ಏಱಂಗೆ ಅಳ್ಕಿ ಹತವಿಹತ ಕೋಳಾಹಳರಾಗಿ: ಪಂಪಭಾ, ೫. ೮೮ ವ)

ಹತಿ
ಹೊಡೆತ (ವಿನತಾಪುತ್ರನ ವಜ್ರ ತುಂಡ ಹತಿಗಂ ಮೆಯ್ಯಾಂತು ಕಂಡಂಗಳುಳ್ಳಿನಂ ಅಂಗಂಗಳಂ ಒಡ್ಡಿ ಒಡ್ಡಿ ತನುವಂ ಕೊಟ್ಟಂತು: ಪಂಪಭಾ, ೪. ೨೬)

ಹತೋಶ್ವತ್ಥಾಮಾ
[ಹತಃ+ಅಶ್ವತ್ಥಾಮಾ] ಅಶ್ವತ್ಥಾಮ ಹತನಾ[ದನು/ಯಿತು] (ಸಾಮಜಮಶ್ವತ್ಥಾಮಂ ನಾಮದಿಂದ ಒಂದೞದೊಡೆ ಅಲ್ಲಿ ಕಂಡು ಹತೋಶ್ವತ್ಥಾಮಾ ಎನೆ: ಪಂಪಭಾ, ೧೨. ೨೭)

ಹತೋರು
ತೊಡೆ ಮುರಿದವನು (ಹತದೈವಂ ಪ್ರಾರಂಭಂ ಪ್ರತಿಕಾರಂ ದೀರ್ಘಸೂತ್ರ ತತ್ಪ್ರತಿಕಾರಂ ಶತಮಾದೊಡೆ ಅಂತು ಮೋಕ್ಷಂ ಹತೋರುಗೆನಗಾವುದು ಇಂ ಗಡ ಪ್ರತಿಕಾರಂ: ಗದಾಯು, ೯. ೨೫)


logo