logo
भारतवाणी
bharatavani  
logo
Knowledge through Indian Languages
Bharatavani

Champoo Nudigannadi (Halagannada Shabdartha Sankalana)

Please click here to read PDF file Champoo Nudigannadi (Halagannada Shabdartha Sankalana)

ಹಟತ್ಕಿರೀಟ
ಹೊಳೆಯುವ ಕಿರೀಟ (ಕಟಕ ಕಟಿಸೂತ್ರ ಕುಂಡಲ ಹಟತ್ಕಿರೀಟ ಅಂಗದಾದಿ ಮಣಿಭೂಷಣ ಭಾಜಟಿಳಿತ ಮೂರ್ತ್ಯುತ್ಕರ್ಷಂ ಸ್ಫುಟಹರ್ಷಂ ತನ್ನ ವರ್ಷವರ್ಧನ ದಿನದೊಳ್: ಆದಿಪು, ೨. ೨)

ಹಟದ್ರತ್ನ
[ಹಟತ್+ರತ್ನ] ಹೊಳೆಯುವ ಮಣಿ (ವೈದೇಹಿಗೆ ಮಕುಟಹಟದ್ರತ್ನ ದಿಂದರ್ಘ್ಯಮಿತ್ತಂ: ಪಂಪರಾ, ೯. ೮೪)

ಹಟನ್ನೀರೇಜ
ಕಾಂತಿಮಯವಾದ ತಾವರೆ (ಇರ್ದತ್ತು ಹಟನ್ನೀರೇಜನಾಳಂ ನಿಮಿರ್ದುದನಿದಿರೊಳ್ ಪೊತ್ತು ತೋರ್ಪಂದದಿಂದಂ: ಸುಕುಮಾಚ, ೩. ೧೫)

ಹಟ್ಟಿಕಾಳಗ
ಮನೆ ಜಗಳ (ನಾರಕರಂ ಅನ್ಯಜನ್ಮದ ವೈರಮ ಎೞ್ಚಱಸಿದ ಹಟ್ಟಿಕಾಳಗಮಂ ಕಣ್ಣಾರೆ ನಿರೀಕ್ಷಿಪ ತೆಱದಿಂ: ಪಾರ್ಶ್ವನಾಪು, ೧೩. ೭೩)

ಹಡಣ
ಪಡಣ, ಪತನ, ನಾಶ (ವಿದೂಷಕಂ ಈಕೆ ಹುಟ್ಟುಗೆಟ್ಟ ಹುಟ್ಟಗೆಯಂತೆ ಹಡಣಮೊಣಗಿದ ಹೞೆಯ ಸಿದ್ದಿಗೆಯಂತೊಣಕುಟ್ಟದೆ ಪತ್ತಿದ ಹಾೞೂರ ನಾಯಂತೆ ಒಡಲಂ ಪತ್ತಿದ .. .. ನೆವಮಿಕಿದಪಳೆಂದು ನಗಿಸಿದಂ: ಲೀಲಾವತಿ, ೨. ೧೧೬ ವ)

ಹಡಣಿಗಿತ್ತಿ
ಹಾದರಗಿತ್ತಿ, ಸೂಳೆ (ಮತ್ತೊರ್ವಳ್ ನೆರಮನೆಯ ಮಱಸೂಳೇಯ ಸೊಬಂಗಿಂಗೞಲ್ದು ತನ್ನಂತೆ ಪಡವುಡುಗಿ ಗಡಣಕ್ಕೆ ಬಂದ ಹಡಣಗಿತ್ತಿ ಸೂಳೆಗಿಂತೆಂದಳ್: ಅನಂತಪು, ೮. ೧೮ ವ)

ಹಡಪವಳ
ಸೇವಕ (ಹಡಪವಳನ ಹಡಪದೊಳಿರ್ದಡಕೆಗಳಂ ಮಾಡಿಯಾಡೆ ಪಿಕ್ಕೆಗಳಂ ಮತ್ತೆಡೆಯುಗದೆಲೆಗಳಂ ಮೆಳ್ಪಡಲೆಕ್ಕೆಯ ನೀರ್ಳವನೆಲೆಗಳಾಗಳ್: ಪುಣ್ಯಾಸ್ರ, ೮. ೩೬)

ಹಡಲಂ
(ಹಾಗಲ ಹಡಲಂ ಗುಳ್ಳಂ ಕೂಗುರಿ ಕೂಷ್ಮಾಂಡ ಅವರೆ ಬದಣೆಗಳಿಂ ಲೇಸಾಗಿರೆ: ಧರ್ಮಪ, ೨. ೫೮)

ಹಡಹಾಳಿ
ಸಂಪಾದಿಸುವವನು (ಹಡಹಾಳಿ ಸತ್ತ ಮನೆಯಂತೆ: ಧರ್ಮಾಮೃ, ೫. ೮೩ ವ)

ಹಡುಕೆ
ದುರ್ಗಂಧ, ಅಮೇಧ್ಯ (ಹಡುಕೆಯ ಕೆಲದೊಳ್ ಗೋಹಳಿಯೆಡೆಯೊಳ್ .. .. ವಿಪ್ರಜನಂಗಳ್ ಓದುವರೆಂತೋ: ಸಮಯಪ, ೧೧. ೧೪)


logo