logo
भारतवाणी
bharatavani  
logo
Knowledge through Indian Languages
Bharatavani

Champoo Nudigannadi (Halagannada Shabdartha Sankalana)

Please click here to read PDF file Champoo Nudigannadi (Halagannada Shabdartha Sankalana)

ಹರಿನೀಳ
ಇಂದ್ರನೀಲ ಮಣಿ (ಸುರವಧು ಒರ್ಬಳ್ ದೇವಿಯ ಚರಣಕ್ಕೆ ಓಲಗಿಸೆ ಪೊಳೆವ ಹರಿನೀಳದ ನೂಪುರಂ ಅದು ನೆನೆಯಿಸಿದುದು ಷಟ್ಚರಣಾವಳಿ ಬಳಸಿದ ಅರುಣಸರಸಿಜದ ಇರವಂ: ಶಾಂತೀಶ್ವಪು, ೧೩. ೨೧೪)

ಹರಿನ್ಮಣಿ
ಪಚ್ಚೆ (ಹರಿನ್ಮಣಿವರ್ಣನಂ ನೆರೆದುದಿದು ಮೇಣ್ ಕ್ಷಾತ್ರಂ ತೇಜಂ ಧರಾಧಿಪರೂಪದಿಂ ಧರೆಗೆ: ಆದಿಪು, ೧೪. ೪೪)

ಹರಿನ್ಮುಖ
ದಿಗಂತ (ಹರಿಮುಖಹೇಷಾಘೋಷಂ ಹರಿನ್ಮುಖಾಂತರಮನೆಯ್ದಿ ತೀವುತ್ತಿರೆಯುಂ ಹರಿಪದದಿಂದೊಗೆದ ರಜಂ ಹರಿಪದಮಂತಡರೆ ನಡೆವುದು ನೃಪಸೈನ್ಯಂ: ಶಾಂತೀಶ್ವಪು, ೧೨. ೮)

ಹರಿಪದ
ವಿಷ್ಣುವಿನ ಪಾದ (ಹರಿಪದದಿಂದೊಗೆದ ರಜಂ ಹರಿಪದಮಂ ತೊಡರೆ ನಡೆದುದಾ ನೃಪಸೈನ್ಯಂ: ಕುಸುಮಾಕಾ, ೧೫. ೮೫); ಕುದುರೆಯ ಗೊರಸು (ಹರಿಮುಖಹೇಷಾಘೋಷಂ ಹರಿನ್ಮುಖಾಂತರಮನೆಯ್ದಿ ತೀವುತ್ತಿರೆಯುಂ ಹರಿಪದದಿಂದೊಗೆದ ರಜಂ ಹರಿಪದಮಂತಡರೆ ನಡೆವುದು ನೃಪಸೈನ್ಯಂ: ಶಾಂತೀಶ್ವಪು, ೧೨. ೮); ವಾಯುಮಂಡಲ (ಹರಿಮುಖಹೇಷಾಘೋಷಂ ಹರಿನ್ಮುಖಾಂತರಮನೆಯ್ದಿ ತೀವುತ್ತಿರೆಯುಂ ಹರಿಪದದಿಂದೊಗೆದ ರಜಂ ಹರಿಪದಮಂತಡರೆ ನಡೆವುದು ನೃಪಸೈನ್ಯಂ: ಶಾಂತೀಶ್ವಪು, ೧೨. ೮)

ಹರಿಪೀಠ
ಸಿಂಹಾಸನ (ಇರೆ ಹರಿಪೀಠದೊಳ್ ಭರತಂ ಆದರದಿಂ ಬೆಸಗೊಂಡುದಂ ಜಿನೇಶ್ವರಮತದಿಂದಂ ಆ ವೃಷಭಸೇನಗಣಾಗ್ರಣಿ ಪೇೞ್ದುದಂ: ಆದಿಪು, ೧. ೪೧)

ಹರಿಪೋತ
ಸಿಂಹದ ಮರಿ (ಹರಿಪೋತಮಂ ಬೆದಱುತುಂ ಕರಿಪೋತಂ ಅವುಂಡುಗರ್ಚಿ ಕೇಸರಿಣಿಯಂ ಕೆಚ್ಚಲಂ ತುಡುಕುತಂ ಪರಿದತ್ತು: ಪಂಪಭಾ, ೭. ೮೦)

ಹರಿಪೌರುಷ
ಸಿಂಹಪರಾಕ್ರಮ (ಮಳಯಜಗಂಧಮಂತು ಹರಿಪೌರುಷಮೆಂತು .. .. ನಿಜಂ ತನಗಂತು ಸದ್ಗುಣಾವಳಿ ಸಹಜಾತಂ: ಶಾಂತಿಪು, ೭. ೧೧೯)

ಹರಿಬ
ಕೆಲಸ (ಚರನಂ ಕಿಡೆ ನುಡಿವ ಹರಿಬವೆತ್ತುವ ಕಡಂಗಿ ಮೂದಲಿಪ ರಭಸಮೇನುಣ್ಮಿದುದೋ: ಆಚವರ್ಧ, ೭. ೪೨)

ಹರಿಮೇಖಲೆ
ಯಕ್ಷಿಣಿ (ಹರಿಮೇಖಲೆಯೆಂದು ಇಂದ್ರಜಾಲಂ: ಶಬ್ದಮದ, ಪ್ರಸಾ ೨೩೧)

ಹರಿವಂಶ
ಸೂರ್ಯವಂಶ (ಹರಿವಂಶನಿಯಮದಿಂ ಹಿತಪುರೋಹಿತಂ ಶುಭಮುಹೂರ್ತದೊಳ್ ಕನ್ನಿಕೆಯಂ ತರವೇೞೆ: ಪಂಪರಾ, ೫. ೪೬); ಸರ್ಪಸಂಕುಲ (ಹರಿವಂಶಂ ಹರಿವಂಶದಂತತುಳಭೋಗಖ್ಯಾತಮಾಯ್ತು: ನೇಮಿನಾಪು, ೬. ೭೮)


logo