logo
भारतवाणी
bharatavani  
logo
Knowledge through Indian Languages
Bharatavani

Champoo Nudigannadi (Halagannada Shabdartha Sankalana)

Please click here to read PDF file Champoo Nudigannadi (Halagannada Shabdartha Sankalana)

ವಜ್ರ
ಗಟ್ಟಿಯಾದ (ವಿನತಾಪುತ್ರನ ವಜ್ರ ತುಂಡ ಹತಿಗಂ ಮೆಯ್ಯಾಂತು ಕಂಡಂಗಳುಳ್ಳಿನಂ ಅಂಗಂಗಳಂ ಒಡ್ಡಿ ಒಡ್ಡಿ ತನುವಂ ಕೊಟ್ಟಂತು: ಪಂಪಭಾ, ೪. ೨೬); ನವರತ್ನಗಳಲ್ಲಿ ಒಂದು [ಮುತ್ತಿನ ಪಚ್ಚೆ ಮಾಣಿಕದ ವಜ್ರದ ಕೇೞಯೊಳ್ ಒಂದಿ ಸಾಂದಿನೊಳ್ ಕತ್ತುರಿಯೊಂದು ಕೋೞ್ಗೆಸಱೊಳ್ ಓಕುಳಿ ಚಂದನ ಗಂಧವಾರಿಯೊಳ್ ಸುತ್ತಲುಂ ಅೞ್ಕಱಂ ಪಡೆವ ಗೇಯದ ಪೆಂಪಿನ ಅಲಂಪಂ ಆರ್ಗಂ ಆರ್ತಿತ್ತುದು ಪಟ್ಟಬಂಧ ಮಹೋತ್ಸವಂ ಆ ಪಡೆಮೆಚ್ಚೆ ಗಂಡನಾ: ಪಂಪಭಾ, ೧೪. ೨೦); ಇಂದ್ರನ ಆಯುಧ, ಸಿಡಿಲು (ಇಳಾತಳದೊಳ್ ಕೆಡೆದತ್ತು ವಜ್ರದಿಂ ಸುರಪತಿ ಪೊಯ್ಯೆ ಬೆಟ್ಟು ಕೆಡೆದಂತೆ ಜಟಾಯು ನಭೋವಿಭಾಗದಿಂ: ಪಂಪರಾ, ೯. ೧೦೪)

ವಜ್ರಕವಾಟ
ತೆಗೆಯಲಾಗದ ಬಾಗಿಲು (ಒಡೆವುದೆ ವಜ್ರಕವಾಟಮಂ ಅಡರ್ವುದೆ ವಿಜಯಾರ್ಧಗಿರಿಯಂ .. .. ಎಮ್ಮನೆ ಬೆಸಸಾ: ಆದಿಪು, ೧೩. ೨೧)

ವಜ್ರಕಾಂಡ
[ಜೈನ] ಚಕ್ರವರ್ತಿಗೆ ಲಭಿಸುವ ಬಿಲ್ಲು (ವಜ್ರಕಾಂಡಮೆಂಬ ಚಾಪದಿಂದಂ ಸಿಂಹಾಟಕಮೆಂಬ ಕೊಂತದಿಂದಂ: ಶಾಂತಿಪು, ೧೧. ೮೪ ವ)

ವಜ್ರಕೀಟ
ಅಲರ್ಕ ಎಂಬ ಹುಳು (ಪರಶುರಾಮಂ ಮಱೆದು ಒರಗಿದಾ ಪ್ರಸ್ತಾವದೊಳ್ ಆ ಮುನಿಗೆ ಮುನಿಸಂ ಮಾಡಲೆಂದು ಇಂದ್ರಂ ಉಪಾಯದೊಳ್ ಅಟ್ಟಿದ ವಜ್ರಕೀಟಂಗಳ್: ಪಂಪಭಾ, ೧. ೧೦೪ ವ)

ವಜ್ರತುಂಡ
ಗಟ್ಟಿಯಾದ ಕೊಕ್ಕು (ವಿನತಾಪುತ್ರನ ವಜ್ರತುಂಡಹತಿಗಂ ಮೇಯ್ಯಾಂತು .. .. ನಾಗಾನಂದಮಂ ಮಾಡಿದಂ; ಪಂಪಭಾ, ೪. ೨೬); [ಜೈನ] ಚಕ್ರವರ್ತಿಯ ಶಕ್ತ್ಯಾಯುಧ (ವಜ್ರತುಂಡವೆಂಬ ಶಕ್ತಿಯಿಂದಂ ಮನೋವೇಗವೆಂಬ ಕಣೆಯಿಂದಂ .. .. ನೆಱೆದೈಶ್ವರ್ಯದ ಮೇಗೆ ವಜ್ರಿಬೆಸದಾಳಂತಾಗಿಯುಂ: ಶಾಂತಿಪು, ೧೧. ೮೪ ವ)

ವಜ್ರದಾಳಿ
[ವಜ್ರ+ತಾಳಿ] ವಜ್ರಖಚಿತ ಮಾಂಗಲ್ಯ (ತಿಸರಮಿದಾವುದಕ್ಕೆ ಧರಣೀಂದ್ರನ ಕೊಟ್ಟುದು ವಜ್ರದಾಳಿ ಕಣ್ಗೆಸೆವುವುದಿದಾವುದು: ಪಂಪಭಾ, ೪. ೮೬)

ವಜ್ರಧರ
ಇಂದ್ರ (ಗಾಂಡಿವಧರಂ ಗಂಗಾಧರಂ ತುಂಗಶಕ್ತಿಧರಂ ವಜ್ರಧರಂ ಧರಾಧರಧರಂ ಶ್ರೀಕೀರ್ತಿವಿದ್ಯಾಧರಂ: ಪಂಚತಂತ್ರ, ೩೭)

ವಜ್ರಪಾತ
ಸಿಡಿಲ ಹೊಡೆತ (ವಿಗತ ಪುರುಷಾಕಾರಂ ಭಾಗ್ಯಾನರ್ಥ ವಜ್ರಪಾತಸಂತಪ್ಯಮಾನಮಾನಸನುಂ .. .. ಆಗಿ: ಚಂದ್ರಪ್ರಪು, ೫. ೯ ವ)

ವಜ್ರಮಯ
[ಜೈನ] ಭರತ ಚಕ್ರವರ್ತಿಯ ಏಳು ಅಜೀವರತ್ನಗಳಲ್ಲೊಂದಾದ ಚರ್ಮರತ್ನದ ಹೆಸರು (ಅಗಾಧಜಲದುರ್ಗಸಮುತ್ತರಣ ನಿರತ ಸಕಳ ಶಿಬಿರ ಸಂಧಾರಣಶಕ್ತಿಯುಕ್ತಮಪ್ಪ ವಜ್ರಮಯಮೆಂಬ ಚರ್ಮರತ್ನಮುಂ: ಆದಿಪು, ೧೧. ೩ ವ)

ವಜ್ರಮುಷ್ಟಿ
ಕೈಯಲ್ಲಿ ಹಿಡಿಯುವ ಒಂದು ಆಯುಧ (ವಜ್ರಮುಷ್ಟಿಯ ಪೊಯ್ಲೊಳಂ ಬಾಳ ಕೋಳೊಳಂ ಉಚ್ಚಳಿಸಿದ ಕಪಾಲದೋಡುಗಳಂ ಗಂಗೆಗಟ್ಟುತ್ತುಂ: ಪಂಪಭಾ, ೧೧. ೨ ವ)


logo