logo
भारतवाणी
bharatavani  
logo
Knowledge through Indian Languages
Bharatavani

Champoo Nudigannadi (Halagannada Shabdartha Sankalana)

Please click here to read PDF file Champoo Nudigannadi (Halagannada Shabdartha Sankalana)

ವಖ್ಖಾಣಿಸು
ವ್ಯಾಖ್ಯಾನಿಸು (ಎಂದಿವು ಮೊದಲಾಗೊಡೆಯವನೋದಿ ಅವಱರ್ಥಮಂ ವಖ್ಖಾಣಿಸಿ ಪೇೞ್ದು: ವಡ್ಡಾರಾ, ಪು ೧೩೩, ಸಾ ೬)

ವಚಃಪ್ರಸರ
ಮಾತುಗಳ ಸಮೂಹ (ಉಚಿತಪೀಠನಿವಿಷ್ಟಂ ಭುವನೇಶಂ ಬೆಸಗೊಳೆ ವಿನಯವಚಃಪ್ರಸರಂಗಳ್ ಎಸೆದೊಡಂಬಡೆ ನುಡಿದಂ: ಆದಿಪು, ೧೩. ೨೪)

ವಚನಪ್ರೌಢಿ
ನುಡಿನಿಪುಣತೆ (ವಚನಪ್ರೌಢಿಯಂ ಅರ್ಥಪ್ರಚುರತೆಯಂ ದೋಷದೃಷ್ಟಿಪರನಲ್ಲದವಂ ಶುಚಿಮತಿ ಪೊಗೞ್ಗುಂ: ಮಲ್ಲಿನಾಪು, ೧. ೨೭)

ವಚನರಚನೆ
ಮಾತಿನ ಜೋಡಣೆ (ನಿನ್ನ ಬಗೆಯಂ ಬಗೆದಂತೆ ತೀರ್ಚುವೆಂ ಎಂದು ಅನೇಕ ಪ್ರಕಾರ ವಚನರಚನೆಗಳಿಂದಾಕೆಯ ಮನಮಂ ಆಱೆ ನುಡಿಯುತ್ತಿರ್ಪಿನಂ: ಪಂಪಭಾ, ೪. ೬೯ ವ)

ವಚನಾಮೃತವಾರ್ಧಿ
ಕಾವ್ಯವೆಂಬ ಹಾಲ್ಗಡಲು, ಅಮೃತಸಾಗರ (ವ್ಯಾಸಮುನೀಂದ್ರ ರುಂದ್ರ ವಚನಾಮೃತವಾರ್ಧಿಯನೀಸುವೆಂ ಕವಿವ್ಯಾಸನೆನೆಂಬ ಗರ್ವಮೆನಗಿಲ್ಲ: ಪಂಪಭಾ, ೧. ೧೩)

ವಚಶ್ರೀವರ
ಸರಸ್ವತಿಯ ಪತಿ, ಬ್ರಹ್ಮ (ಆವನ ನಾಭಿಸರೋಜದೊಳ್ ವಚಶ್ರೀವರಂ ಉತ್ಸವಂಬೆರಸು ಪುಟ್ಟಿದಂ: ಪಂಚತಂತ್ರ, ೧)

ವಚೋವಲ್ಲಭ
ಸರಸ್ವತಿಯ ಪತಿ, ಬ್ರಹ್ಮ (ಕಾಲನೇಮಿಯೆಕಂಸಾಸುರನಾಗಿ ಪುಟ್ಟಿರುದ ನಾಂ ಬಲ್ಲೆ ವಚೋವಲ್ಲಭಾ: ಜಗನ್ನಾವಿ, ೧. ೬೮)

ವಚೋವಿಸ್ತರ
ಮಾತಿನ ವಿವರಣೆ (ಸಂಬೋಧಿಸಿದ ಗುರುಗಳ ಮಚೋವಿಸ್ತರಮಂ ಸುಕುಮಾರ ಮುನೀರ್ಶವರನವಧಾರಿಸಿ: ಸುಕುಮಾಚ, ೧೨. ೧೩ ವ)

ವಜ್ಜರಿಗೞ್ತೆ
ಹೇಸರಗತ್ತೆ [ಕರಿಯ ಪಿರಿಯ ಮೆಯ್ಯ ನಿಡಿಯ ಕಿವಿಯ ಕುಣಿದು ಮೆಟ್ಟುವ ವಜ್ಜರಿಗೞ್ತೆಗಳುಮಂ ವ್ಯೂಗದೊಳ್ ನಿಟ್ಟೆವಟ್ಟು: ಆದಿಪು, ೪. ೫೪ ವ); [ಪಾಠಾಂತರ: ಬಜ್ಜರಿಗತ್ತೆ ಆದಿಪು, ನರಸಿಂ]

ವಜ್ಜರಿಗೆ
ಹೇಸರಗತ್ತೆ (ಅವಯವದೆ ಕುಣಿದು ಮೆಟ್ಟಿವ ಸವಡಿಯ ವಜ್ಜರಿಗೆ ಪಿಡಿದ ಸತ್ತಿಗೆಯ ವಿಳಾಸವದು ಅಮರ್ದ ಲೀಲೆಯಿಂ: ಆದಿಪು, ೧೧. ೪೧) [ನರಸಿಂಹಶಾಸ್ತ್ರಿಗಳು ಬಿಜ್ಜಣಿಗೆ ಎಂಬ ಪಾಠವನ್ನೂ ಎಲ್. ಬಸವರಾಜು ಬಜ್ಜರಿಗೆ ಎಂಬ ಪಾಠವನ್ನೂ ಸ್ವೀಕರಿಸುತ್ತಾರೆ]


logo