logo
भारतवाणी
bharatavani  
logo
Knowledge through Indian Languages
Bharatavani

Champoo Nudigannadi (Halagannada Shabdartha Sankalana)

Please click here to read PDF file Champoo Nudigannadi (Halagannada Shabdartha Sankalana)

ವ್ರತಾವರಣ
[ಜೈನ] ಒಂದು ಗರ್ಭಾನ್ವಯಕ್ರಿಯೆ, ಬ್ರಹ್ಮಚರ್ಯವ್ರತತ್ಯಾಗ (ಲಿಪಿಸಂಖ್ಯಾನ ಸಂಗ್ರಹೋಪನಯನ ಬ್ರಹ್ಮಚರ್ಯವ್ರತಾವರಣ .. .. ವಿಹಾರಯೋಗತ್ಯಾಗಾಗ್ರನಿರ್ವೃತಿಯೆಂಬ ಅಯ್ವತ್ತುಮೂಱು ಗರ್ಭಾದಿನಿರ್‍ವಾಣಪರ್‍ಯಂತಂಗಳಪ್ಪ ಗರ್ಭಾನ್ವಯಕ್ರಿಯೆಗಳಂ: ಆದಿಪು, ೧೫. ೧೫ ವ)

ವ್ರಾಜಿತ
ಪ್ರಕಶಮಾನವಾದ (ಈ ಜಡರಂ ಅತರ್ಕಿತಬುಧರಾಜ ಸಭಾಸದರೊಳೊರಿಸಿ ರಿಪುನೃಪಮಕುಟವ್ರಾಜಿತಪದಾಬ್ಜ ವಿಬುಧಸಮಾಜದೊಳ್ ಆದತ್ತು ಹಾಸ್ಯರಸಂ ಅಪ್ರತಿಮಂ; ಸುಕುಮಾಚ. ೨. ೨೫)

ವ್ರಾತ
ಸಮೂಹ (ನವರತ್ನವ್ರಾತ ಸರ್ವೌಷಧಿಫಲಮಿಳಿತ ಅಂಭೋಧಿತೀರ್ಥ ಆಪಗಾವಾರಿ: ಕಾದಂಸಂ, ೨. ೫೭)

ವ್ರೀಡೆ
ಲಜ್ಜೆ (ಇತ್ತ ಕೃತಕಾಕ್ರಂದ ಕಂದಳಿತ ಶುಷ್ಕ ಶೋಕಾಕ್ರಾಂತ ಜೀವದೃಶಾವ್ರೀಡಾವಿಷಾದರ್: ನೇಮಿನಾಪು, ೭. ೩೪ ವ)

ವ್ರೀಹಿ
ಬತ್ತ (ವ್ರೀಹಿ ಮಹಾಶಾಲಿಯೆನಿಕ್ಕುಂ: ಅಭಿಧಾವ, ೧. ೧೬. ೧೬)

ವ್ರೈಹೇಯ
ಬತ್ತದ ಗದ್ದೆ (ಲೀಲೆಯಿಂ ಅದಱ ನೆಲಂ ಪರಿಪಾಲಿಸಿದುವು ಕಣ್ಗೆ ನಾಡೆ ಮೌದ್ಗಲಂ ಮಾಷ್ಯಂ ಶಾಲೇಯಂ ವೈಹ್ರೇಯಂ: ಚಂದ್ರಪ್ರಪು, ೧. ೯೧)


logo