logo
भारतवाणी
bharatavani  
logo
Knowledge through Indian Languages
Bharatavani

Champoo Nudigannadi (Halagannada Shabdartha Sankalana)

Please click here to read PDF file Champoo Nudigannadi (Halagannada Shabdartha Sankalana)

ವನಧಿಪರೀತ
ಸಮುದ್ರದಿಂದ ಸುತ್ತುವರಿದ (ವನಧಿಪರೀತ ಭೂತಳದೊಳೀತನೆ ಸೋಲದ ಗಂಡಂ: ಪಂಪಭಾ, ೧. ೧೬)

ವನಧಿಪ್ರಧ್ವಾನ
ಸಮುದ್ರಘೋಷ (ವನಧಿಪ್ರಧ್ವಾನದಿಂ ಮಂಗಳಪಟಹರವಂ ಪೆರ್ಚೆ ಮಾಂಗಲ್ಯಗೇಯಧ್ವನಿಯಿಂದೆ ಆಶಾಂತರಂ ಘೂರ್ಣಿಸಿ ಸೊಗಯಿಸೆ: ಪಂಪಭಾ, ೧೪. ೧೮)

ವನನಾಗಾರಿ
[ವನನಾಗ+ಅರಿ] ಕಾಡಾನೆಯ ಶತ್ರು, ಸಿಂಹ (ಅಶ್ವಗ್ರೀವಂ ಆ ತ್ರಿಪೃಷ್ಟಂಗಿದಿರ್ಚಿ ವನನಾಗಾರಿಯಂತೆ ದಂತಿಶಿಶುವೋಲ್ .. .. ನೀಡಿಲ್ಲಳ್ಕಾಡುಗುಂ: ಶಾಂತಿಪು, ೫. ೨೭)

ವನನಿಧಿ
ಸಮುದ್ರ (ಎನಗೆ ಪೊಸಂತಿಲೀ ನೆಗೞ್ದ ವಜ್ರದ ವೇದಿಕೆ ಗೋಷ್ಪದಂ ದಲೀ ವನನಿಧಿ: ಆದಿಪು, ೧೨. ೭೧)

ವನಪಥ
ಕಾಡಿನ ಹಾದಿ (ಕಳಭಂ ವನಪಥಮಂ ಯೂಥಪತಿಗೆ ತೋರ್ಪಂತಕ್ಕುಂ: ಆದಿಪು, ೮. ೧೨)

ವನಪಾಲಕ
ಉದ್ಯಾನದ ಮೇಲ್ವಿಚಾರಕ (ಕಾವ ನಾರಾಯಣನ ಸುದರ್ಶನಮೆಂಬ ಚಕ್ರದ ಕೋಳುಮಂ ವಿಕ್ರಮಾರ್ಜುನನ ದಿವ್ಯಾಸ್ತ್ರಂಗಳ ಕೋಳುಮಂ ಅಗ್ನಿದೇವನ ಶಿಖಾಕಳಾಪದ ಕೋಳುಮಂ ಎಂತಾನುಂ ಬಂಚಿಸಿ ಬಲೆಪಱದ ಕೋಕನಂತೆ ಒರ್ವ ವನಪಾಲಕಂ ಪೋಗಿ ದೇವೇಂದ್ರನಂ ಕಂಡು: ಪಂಪಭಾ, ೫. ೯೩ ವ)

ವನಪ್ರಚಾರ
ವನಸಂಚಾರ (ಪಿಱದು ಪೊೞ್ತಂ ವನಪ್ರಚಾರದೊಳ್ ಅಲಸಿದ ನದೀಚರನಪ್ಪ ಯೂಥಪತಿಯಂತೆ ವನವಿಹಾರದೊಳ್ ಅಲಸಿ ಬಂದು ಕಾವಣಂ ಪುಗೆ: ಶಾಂತಿಪು, ೮. ೨೩ ವ)

ವನಭೃತ್
ಮೋಡ (ವನಭೃತ್ಕುಂತಳೆಯಾ ಶಿರೀಷ ಕುಸುಮಾಭಾಂಗಕ್ಕೆ ಕಂದಂ ಕನತ್‌ಕನಕಾಂಭೋಜ ನಿಭಾನನಕ್ಕೆ ಪಿರಿದುಂ ದೀನತ್ವಮಂ: ಪಂಪಭಾ, ೪. ೬೪)

ವನಮದಕರಿ
ಮದಿಸಿದ ಕಾಡಾನೆ (ಉತ್ತಮ ವನಮದಕರಿ ಕರಟಭಿತ್ತಿಗಳಿಂ ಸಿರುವ ಮದದ ಬಂಧುರಗಂಧಂ ಕತ್ತುರಿಮೃಗಮದದೊಳ್ ಪುದಿದು: ಆದಿಪು, ೯. ೧೨೦)

ವನಮಹತ್ತರ
ವನಪಾಲಕ (ಪಸದನಂಗೊಂಡು ಪರಮಹರುಷದಿಂದ ಇನಿಸಾನುಂ ಬೇಗಮಿರ್ದು ವನಮಹತ್ತರನಂ ಕರೆದು: ರಾಜಶೇವಿ, ೧೦. ೧೦೭ ವ)


logo