logo
भारतवाणी
bharatavani  
logo
Knowledge through Indian Languages
Bharatavani

Champoo Nudigannadi (Halagannada Shabdartha Sankalana)

Please click here to read PDF file Champoo Nudigannadi (Halagannada Shabdartha Sankalana)

ವದನಾರವಿಂದೆ
ಕಮಲಮುಖಿ, ಅರಳಿದ ಕಮಲದಂತಹ ಮುಖದವಳು (ಅಂಬಿಕೆಯ ಸೂಳೆಯಪ್ಪಾಕೆ ದರಹಸಿತ ವದನಾರವಿಂದೆಯಾಗಿ ಬರವಂ ಕೈಕೊಂಡಳಪ್ಪುದಱಂದಾಕೆಯ ಮಗಂ ವಿದುರನೆಂಬಂ ಅನಂಗಾಕಾರನುಮಾಚಾರವಂತನುಂ ಬುದ್ಧಿವಂತನುಮಕ್ಕುಂ: ಪಂಪಭಾ, ೧. ೮೫ ವ)

ವದಾನ್ಯ
ಉದಾರಿ (ತೆಗೆದು ಕೊಟ್ಟಪರಲ್ತೆ ವದಾನ್ಯವಲ್ಲಭರ್: ಲೀಲಾವತಿ, ೧. ೫೮); ನಯವಾಗಿ ಮಾತಾಡುವವನು (ಮಾನ್ಯಂ ಪ್ರಕೃಷ್ಟನಱಗೆ ವದಾನ್ಯಂ ಪ್ರಿಯವಾದಿ: ಅಭಿಧಾವ, ೨. ೧. ೧೪)

ವದಾನ್ಯತಾ
ಔದಾರ್ಯ (ಅಂತು ನಿಜ ವದಾನ್ಯತಾ ಗುಣ ವಿಶುದ್ಧ ಸಿದ್ಧರಸ ಪ್ರವಾಹಕ್ಕೆ ಸೇತುಗಟ್ಟುವಂತೆ ಪಟ್ಟಮಂ ಕಟ್ಟಿ: ಪಂಪರಾ, ೭. ೨೨ ವ)

ವಧಾರ್ಥ
ಕೊಲ್ಲುವ ಉದ್ದೇಶ (ಅಂಬೆಯೆಂಬ ದುಂಡುರುಂಬೆ ನಿನಗೆ ವಧಾರ್ಥಮಾಗಿ ಪುಟ್ಟುವೆನಕ್ಕೆಂದು ಕೋಪಾಗ್ನಿಯಿಂದಂ ಅಗ್ನಿಶರೀರಿಯಾಗಿ ದ್ರುಪದನ ಮಹಾದೇವಿಗೆ ಮಗನಾಗಿ ಪುಟ್ಟಿ: ಪಂಪಭಾ, ೧. ೮೦ ವ)

ವಧು
ಹೆಂಗಸು, ಸೊಸೆ (ವಧು ಸೊಸೆ ವಧು ಸೀಮಂತಿನಿ: ಅಭಿಧಾವ, ೩. ೧. ೭)

ವಧುವಿರ್
ಸ್ತ್ರೀಯರು (ಎರಡು ರಥದ ಗಾಲಿಯ ಕೋಳಿಂದಾದ ರಜಃಪಟಲಂ ಕವಿದು ಆದಮೆ ತೀವಿದುದು ದಿವಿಜವಧುವಿರ ಕಣ್ಣೊಳ್: ಪಂಪಭಾ, ೫. ೭೯)

ವಧೂಟಿ
ಯುವತಿ (ವಧೂಟೀಜನ ನೇತ್ರಾಕರ್ಷಣಾಲೇಪನಕ ಜಯಮಂ ಮಾನಿನೀಚಿತ್ತ ಸಂಮೋಹನರೂಪಕ್ಕೆ ಎಗ್ಗನುತ್ಪಾದಿಸುವುದು ನೃಪರೂಪಂ ಜನಾಶ್ಚರ್‍ಯರೂಪಂ: ಮಲ್ಲಿನಾಪು, ೩. ೨೮)

ವಧೂವರ
ವಧುಶ್ರೇಷ್ಠಳು (ಎಣ್ಬರುಂ ಆಶಾವಧೂವರರಂ ಆದಿಪುರುಷಾಂಬಿಕೆಗೆ ಗಾಯಕೀನಾಯಕಿಯರಾಗಿ: ಆದಿಪು, ೭. ೩ ವ)

ವಧೂವರತೆ
ವಧುವಿಗೆ ವರನಾಗುವಿಕೆ (ಮಾಘಮಾಸಂ ಬರೆ ಕೃಷ್ಣಚತುರ್ದಶೀದಿನಂ ಸಮನಿಸೆ ತತ್ಪುರುದೇವಂ ಮುಕ್ತಿವಧೂವರತೆಯಂ ಅಭಿಜಿನ್ಮುಹೂರ್ತದೊಳ್ ಕೈಕೊಂಡಂ: ಆದಿಪು, ೧೬. ೫೧)

ವಧೂವಿಲೋಕನ
ಸೊಸೆಯನ್ನು ನೋಡುವುದು (ಪದೆಯುತ್ತಿರ್ದೆ ವಧೂವಿಲೋಕನಸುಖಕ್ಕೆಂದುಂ ವಿವಾಹಕ್ಕಿದೆ ನೋಡಾಗ್ರಹಮಂ .. .. ಮಾಡಿದಪ್ಪುದು: ಕಾದಂಬ, ೮. ೯೪)


logo