logo
भारतवाणी
bharatavani  
logo
Knowledge through Indian Languages
Bharatavani

Champoo Nudigannadi (Halagannada Shabdartha Sankalana)

Please click here to read PDF file Champoo Nudigannadi (Halagannada Shabdartha Sankalana)

ಲಪನಗಂಧ
ಬಾಯವಾಸನೆ (ಲಪನಗಂಧಮನಳಿಗೆ ಚಪಲತೆಯನರಗಿಳಿಗೆ ಸೋಗೆಗಾಟಮನಿತ್ತು: ಲೀಲಾವತಿ, ೬. ೧೧೫)

ಲಬ್ಧ
ಸಿಕ್ಕಿದ (ಸ್ವಪಕ್ಷ ಸ್ಥಾಪನಂಗೆಯ್ದು ಸನ್ಮಾರ್ಗ ಪ್ರಕಾಶದಿಂ ಮಾರ್ಗಪ್ರಭಾವನೆಯಂ ಮಾಡಿ ಸಭಾಸದರಿಂ ಲಬ್ಧಪ್ರಶಂಸನಾಗಿ: ಆದಿಪು, ೨. ೨೨ ವ)

ಲಬ್ಧಪರಿರಕ್ಷಣ
ಪಡೆದುದನ್ನು ಕಾಪಾಡಿಕೊಳ್ಳುವುದು (ಅಲಬ್ಧಲಾಭಂ ಲಬ್ಧಪರಿರಕ್ಷಣಂ ರಕ್ಷಿತವಿವರ್ಧನಂ ವರ್ಧಿತತೀರ್ಥಪ್ರತಿಪಾದನಂ ಎಂಬ ಚತುರ್ವಿಧ ಪುರುಷಾರ್ಥವೃತ್ತಿಯಾಗಿರ್ಪುದು: ಪಂಚತಂತ್ರ, ೭೫ ವ)

ಲಬ್ಧಿ
[ಜೈನ] ಮೋಕ್ಷಪೂರ್ವಜ್ಞಾನ (ಲಬ್ಧಿ ಕೂಡೆ ಸನ್ಮಾರ್ಗಮಂ ಆದಂ ಸೂಕ್ತದತ್ತಣಱವಿಂದಂ ಸಮ್ಯಕ್ ದೃಷ್ಟಿಯಾಗಿ ತಪಮಂ ಕೊಂಡಂ: ಸಮಯಪ, ೮. ೧೯೪)

ಲಬ್ಧಿಗ್ರಹಣ
ಸಮ್ಯಕ್ತ್ವ ಪಡೆಯುವುದು (ಜಿನದೀಕ್ಷಾಗ್ರಹಮಂ ಪಡೆದಳ್ ಲಬ್ಧಿಗ್ರಹಣದಿನೊಳ್ಪುವಡೆವುದೊಂದಚ್ಚರಿಯೇ: ಪಂಪರಾ, ೨. ೨೫)

ಲಬ್ಧಿತ್ರಯ
[ಜೈನ] ಕಾಯ, ಕರಣ, ಉಪಶಮ ಎಂಬ ಮೂರು ಲಬ್ಧಿಗಳು (ಅಂತು ತನಗೆ ಕಾಲಲಬ್ಧಿಯುಂ ಕರಣಲಬ್ಧಿಯುಂ ಉಪಶಮಲಬ್ಧಿಯುಂ ಎಂಬ ಲಬ್ಧಿತ್ರಯಂ ದೊರೆಕೊಳೆ: ಆದಿಪು, ೩. ೧ ವ)

ಲಬ್ಧಿಬುದ್ಧ
[ಜೈನ] ಸಮ್ಯಕ್‌ಜ್ಞಾನಿ (ಅನುಕೂಲಕನುವಂ ಆಲಸ್ಯನುಂ ಅವಕಾರ್ಯನುಂ ಲಬ್ಧಿಬುದ್ಧಸದೃಶನುಂ: ಅಜಿತಪು, ೧೧. ೩ ವ)

ಲಬ್ಧಿವಿಹೀನ
ಕಾಲಲಬ್ಧಿ ಇಲ್ಲದವನು (ಕುದೃಷ್ಟಿಯಂ ಕಂಡಿನಿಸುಂ ಮುೞಯಂ ಲಬ್ಧಿವಿಹೀನಂ .. .. ದರ್ಶನಶುದ್ಧಂ: ಸಮಯಪ, ೧೩. ೫೬)

ಲಬ್ಧೋಪದೇಶ
ಉಪದೇಶ ಪಡೆದವನು (ನೀಂ ಪೋಗಿ ಕಾಲ್ಗೆಱಗಲೊಡಂ ಕೇವಲಜ್ಞಾನಮಕ್ಕುಂ ಎಂದು ಬೆಸಸಿದೊಡೆ ಲಬ್ಧೋಪದೇಸನಾಗಿ .. .. ಬಂದೆಱಗಿ: ಆದಿಪು, ೧೪. ೧೪೩ ವ)

ಲಯ
ನಾಶ (ಆದಿತ್ಯಂ ಮಸುಳ್ವನ್ನೆಗಂ ಧ್ವಜಘಟಾಟೋಪಂಗಳಿಂದಂ ಲಯ ಅಂಭೋದಂಗಳ್ ಕವಿವಂತೆವೋಲ್ ಕವಿವುದುಂ: ಪಂಪಭಾ, ೧೦. ೯೩); ಕೇಡು (ಯುಧಿಷ್ಠಿರಂ ಕೊಟ್ಟ ನನ್ನಿಯ ಬಲದೊಳ್ ತನಗೆ ಲಯಮಿಲ್ಲದುದನಱದು ಮೇಗಿಲ್ಲದ ಗೊಡ್ಡಾಟಮಾಡಲ್: ಪಂಪಭಾ, ೭. ೪ ವ); ಸಾವು (ಹರಿ ನಿಜಯೋಗದಿಂದಱದು ತನ್ನಳಿಯಂ ಲಯಮಾದುದಂ: ಪಂಪಭಾ, ೧೧. ೧೧೦) ; ತಾಳಗತಿ (ವಾದಿತದೊಳ್ ತಾಳದ ಸಮನಾದುದು ಲಯಮೆಂಬುದೊಂದು ಪೆರ್ವಡೆಗು: ಅಭಿಧಾವ, ೧. ೧೩. ೨೪)


logo