logo
भारतवाणी
bharatavani  
logo
Knowledge through Indian Languages
Bharatavani

Champoo Nudigannadi (Halagannada Shabdartha Sankalana)

Please click here to read PDF file Champoo Nudigannadi (Halagannada Shabdartha Sankalana)

ಲಕುಚ
ಕಂಚಿ ಗಿಡ (ಲಕುಚ ಅಶೋಕ ತಮಾಳ ಶಾಲ ಕದಳೀ ಸಪ್ತಚ್ಛದ ಆಕ್ಷೆೞ ಚಂಪಕ .. .. ಪಾದಪಂ ಕಣ್ಗೊಪ್ಪುಗುಂ ಸುತ್ತಲುಂ: ವರ್ಧಮಾಪು, ೧. ೫೧)

ಲಕುಟ
ದೊಣ್ಣೆ (ಅವರ ಶಿರಂಗಳಂ ಕಿರಾಟಂ ಲಕುಟದಿಂ ಬಿರಿಯೆ ಪೊಯ್ಯಲ್: ಪಂಚತಂತ್ರ, ೨೬೧ ವ)

ಲಕುಟಯಷ್ಟಿ
ದೊಣ್ಣೆಕೋಲು (ಪಾಪಸತ್ವಂಗಳ್ ಕಾಡೆ ಲಕುಟಯಷ್ಟ್ಯಾದಿವಿಧಿಯನುಪದೇಶಂಗೆಯ್ದಾತಂ ಕ್ಷೇಮಂಧರನೆಂಬ ಪೆಸರಂ ಪಡೆದಂ: ಆದಿಪು, ೬. ೫೬ ವ)

ಲಕ್ಕ
ಲಕ್ಷ ಎಂಬ ಸಂಖ್ಯೆ (ಪಟ್ಟಂಗಟ್ಟಿದ ಇಳಾಧಿನಾಥರೆ ಪಯಿಂಛಾಸಿರ್ವರ್ ಒಳ್ಳಾನೆಗಳ್ ಪಟ್ಟಂಗಟ್ಟಿದುವು ಒಂದು ಲಕ್ಕ ತುರಗಂ ಪತ್ತೆಂಟು ಲಕ್ಕಂ: ಪಂಪಭಾ, ೧೦. ೧೧೭)

ಲಕ್ಕಂಬಡೆ
ನೂರು ಸಾವಿರ [ಒಂದು ಲಕ್ಷ] ಬೆಲೆಬಾಳು (ತೊಡವೆನಗಪ್ಪೊಡೆ ಲಕ್ಕಂಬಡೆದುವು ಪಲವೊಳವು ನಂಬೆಯಪ್ಪೊಡೆ ನೋಡೀಗಡೆ: ಧರ್ಮಾಮೃ, ೨. ೭೭)

ಲಕ್ಕಚಣ
ಒಂದು ಆಯುಧ (ಸುಲಿಪಲ್ಲಂ ಮೆಱೆವೈ ಪರಲಲನೆಯರ್ಗೆಂದಿಕ್ಕುೞಂದೆ ಕೀೞ್ವರ್ ಪಲ್ಲಂ ಸಲೆ ಕಣ್ಣಂ ಕೆತ್ತುವೆಯೆಂದು ಲಕ್ಕಚಣದಿಂದೆ ಮೀಂಟಿ ಕಳೆವರ್ ಕಣ್ಣಂ: ಪಾರ್ಶ್ವನಾಪು, ೬. ೯೦)

ಲಕ್ಕಣ
ಲಕ್ಷಣ (ಬೂದಿ ಜೆಡೆ ಲಕ್ಕಣಂ ತಪಕೆ ಆದುವು ಎರೞ್ದೊಣೆ ಶರಾಸನಂ ಕವಚಂ ಇದೆಂತಾದುವೋ ಮುತ್ತುಂ ಮೆೞಸುಂ ಕೋದಂತುಟೆ ನಿನ್ನ ತಪದ ಪಾಂಗೆಂತು ಗಡಾ: ಪಂಪಭಾ, ೭. ೯೨); ದುರ್ಯೋಧನನ ಮಗನ ಹೆಸರು (ಲಕ್ಕಣಂ ಮೊದಲಾಗೆ ನೂರ್ವರ್ ಮಕ್ಕಳುಂ ಸಿತ್ತಿಱದು ಬಳಸಿ ಬರೆ: ಪಂಪಭಾ, ೧೦. ೨೭ ವ)

ಲಕ್ಕೆ
ಲಕ್ಷ ಸಂಖ್ಯೆ (ತುಱುಗಿದ ನಾಲ್ಕುಂ ಲಕ್ಕೆಯುಂ ಅಱುವತ್ತು ಸಾಸಿರಂಗಳಿಂ ಮೇಲಯ್ನೂರಱುವತ್ತುಪಧ್ವಜಂ ಕೈನಿಱದವು ಭಾರತಿಕನಾಗೆ ಮಂದಸಮೀರಂ: ಮಲ್ಲಿನಾಪು, ೧೪. ೧೧೬)

ಲಕ್ಷ
ನೂರು ಸಾವಿರ (ಪೆಣ್ಗೆ ಗಂಡರೇಂ ಪಸನೆ ಸುಡಾತನಂ ನುಡಿಯವೇಡ ಅವನೇವನೊ ಲಕ್ಕವೀವೊಡಂ: ಲೀಲಾವತಿ, ೨. ೭೪)

ಲಕ್ಷಣ
ಗುರುತು (ಅಂಕಂ ಲಕ್ಷನಂ ಅದುವೆ ಕಳಂಕ ಅಭಿಜ್ಞಾನ ಚಿಹ್ಬ ಲಾಂಛನ: ಅಭಿಧಾವ, ೧. ೧. ೬೯); ಸೂತ್ರ, ವ್ಯಾಖ್ಯೆ (ನೆಲಸಿದ ಕಾವ್ಯಂ ಕಾವ್ಯಕ್ಕೆ ಲಕ್ಷಣಂ ಸತತಂ: ಕವಿರಾಮಾ, ೧. ೪೮); ದುರ್ಯೋಧನನ ಮಗ ತನ್ನ ಮಗನಪ್ಪ ಲಕ್ಷಣಕುಮಾರನಂ ಕಂಡು: ಗದಾಯು, ೪. ೫೯ ವ)


logo