logo
भारतवाणी
bharatavani  
logo
Knowledge through Indian Languages
Bharatavani

Champoo Nudigannadi (Halagannada Shabdartha Sankalana)

Please click here to read PDF file Champoo Nudigannadi (Halagannada Shabdartha Sankalana)

ಲುಳಿತಾಳಕ
ಅಲುಗಾಡುವ [ಕೆದರಿದ] ಮುಂಗುರುಳು, (ಪಲವುಮಂದದ ಚೆಂದದ ಚಿನ್ನಪೂಗಳಿಲ್ಲದೆ ಲುಳಿತಾಳಕಂ ಕ್ವಣಿತ ನೂಪುರಮಿಲ್ಲದೆ ಪಾದಪದ್ಮಮೊಪ್ಪಿದುದು: ಆದಿಪು, ೩. ೪೮)

ಲುಳಿತಾಳಕಿ
ಕೆದರಿದ ಕೂದಲುಳ್ಳವಳು (ತಾಳದ ಲಯಮಂ ನಿಱ ನೀಳಾಳಕಮಾರದ ಪೊದಳ್ದ ಮುತ್ತೆಂಬಿವು ಮುಂಮೇಳಿಸಿ ಕೈಕೊಂಡುವು ಲುಳಿತಾಳಕಿ ಕೈಕೊಂಡಳೆಂಬುದೇನಚ್ಚರಿಯೇ: ಆದಿಪು, ೯. ೨೪)

ಲುಳಿತಾಳಕೆ
ಕೆದರಿದ {ಅಲುಗಾಡುವ] ಕೂದಲಿನವಳು (ಅದಱ ಪೊದಳ್ದು ನೀಳ್ದ ಲುಳಿತಾಳಕೆ ತನ್ನ ವಕ್ತ್ರಪದ್ಮದಿನೊಸೆದಾಂತೊಡೆ: ಪಂಪಭಾ, ೩. ೭೬)

ಲೂನ
ಮುರಿಯಲ್ಪಟ್ಟ (ತದೇಕತ್ವಗ್ರಾಹಕಪ್ರತ್ಯಭಿಜಾನಮುಂ ಲೂನ ಪುನರ್ಜಾತ ನಖ ಕೇಶಾದಿಗಳೊಳ್ ಪೂರ್ವಾಪರೈಕತ್ವಮಿಲ್ಲದಲ್ಲಿಯುಂ ಕಾಣಲಕ್ಕುಂ: ಆದಿಪು, ೨. ೯ ವ)

ಲೆಂಕ
ನಿಷ್ಠಾವಂತ ಸೇವಕ, ಭೃತ್ಯ (ನಿಂದ ತುೞಲಾಳ್ಗಳನಾಂ ತಱದು ಒಕ್ಕಲಿಕ್ಕದಿರ್ದೊಡೆ .. .. ನಚ್ಚಿನ ನಿನ್ನ ಲೆಂಕನೇ: ಕಬ್ಬಿಗಕಾ, ೧೮೭)

ಲೆಂಕಿ
ಸೇವಕಿ (ಪ್ರಧಾನರುಂ ಪರಿಚಾರಕರುಂ ಪೆರ್ಗಡೆಗಳುಂ ಲೆಂಕದಂಡರುಂ ಸಾಮಂತರುಂ .. .. ಪೆರ್ಚಿ ಮೇಗುಮೆಯ್ಯಱಯದಂತೆ ರಾಗಿಸಿ ತಮ್ಮೊಳಿಂತೆಮದರ್: ಧರ್ಮಾಮೃ, ೮. ೧೨೪ ವ)

ಲೆಕ್ಕ
ಎಣಿಕೆ (ನುಡಿಯಲಕ್ಕುಮೆ ಪೂಗಳ ಲೆಕ್ಕಮಂ: ಆದಿಪು, ೧೦. ೧೦೫); ಪರಿಗಣನೆ (ತಾಮೆ ತಮ್ಮ ಮನದೊಳ್ ಸರ್ವಜ್ಞರೆಂದಿರ್ಪ ಕಬ್ಬಿಗರುಂ ಕಬ್ಬಿಗರೆಂಬ ಲೆಕ್ಕದೊಳಗೇಂ ಭೂಭೃತ್ಸಭಾಭೂಷಣಂ: ನೇಮಿನಾಪು, ೧. ೩೫)

ಲೆಕ್ಕಂಗೊಳ್
ಎಣಿಕೆಮಾಡು (ಶಾರ್ದೂಲಾಭೀಲವನಂಗಳೊಳ್ ತಿರಿಪಿದೀಯುರ್ಕೊಂದೆ ಲೆಕ್ಕಂಗೊಳಲ್ ಕಾಲಂ ಸಾಲವೆ: ಪಂಪಭಾ, ೯. ೨೨)

ಲೆಕ್ಕಣಿಕೆ
[ಲೇಖನೀ, ಲೇಖನಿಕಾ] ಬರೆಯುವ ಸಾಧನ (ತರಳಾಪಾಂಗವಿಳಾಸಸ್ಪುರಿತಮೆ ಲೆಕ್ಕಣಿಕೆಯಾಗೆ ನಲ್ಲಳ್ ಮುನ್ನಂ ಬರೆದತನುಚರಿತಮೀಗಳ್ ಬರೆದಂತಿರ್ಪುದು ಮನ್ಮನಃಪುಸ್ತಕದೊಳ್: ಆದಿಪು, ೪. ೧೪)

ಲೆಕ್ಕಮುಮಂ ಪೊಕ್ಕಮುಮಂ
ಇವು ಪ್ರತಿಧ್ವನಿಪದಗಳು, ಲೆಕ್ಕಪೊಕ್ಕಗಳನ್ನು (ಉಳ್ಳ ಓದುಗಳೊಳಗೆ ಎನಿತಱವುಳ್ಳರ್ಗಂ ತಿಳಿಪಲರಿಯದೆನಿಪ ಎಡೆಗಳುಮಂ ತೆಳ್ಳಿಗಿರೆ ತಿಳಿಪುಗುಂ ಬೆಸಗೊಳ್ಳ ಗುಣಾರ್ಣವನ ಲೆಕ್ಕಮಂ ಪೊಕ್ಕಮುಮಂ: ಪಂಪಭಾ, ೨. ೩೫)


logo