logo
भारतवाणी
bharatavani  
logo
Knowledge through Indian Languages
Bharatavani

Champoo Nudigannadi (Halagannada Shabdartha Sankalana)

Please click here to read PDF file Champoo Nudigannadi (Halagannada Shabdartha Sankalana)

ಲುಂಠನ
ಅಪಹರಣ, ದರೋಡೆ (ಭಾರ್ಗವಂಗೆ ತಾನೆ ಭಾರ್ಗವನಾಗಿ ಯುವರಾಜಕಂಠಿಕಾಪರಿಕಲಿತ ಕಂಠಲುಂಠನುಂ ಆಗಿ: ಪಂಪಭಾ, ೧. ೬೮ ವ)

ಲುಂದು
ಮಲಗು, ನಿದ್ರಿಸು (ಇರುಳ್ ಕಳ್ಳರ್ ವಂದು ಆಕೆಯ ಲುಂದಿದ ಮನೆಯೊಳ್ ಕನ್ನಮಿಕ್ಕೊದೊಡೆ: ವಡ್ಡಾರಾ, ಪು ೧೯, ಸಾ ೨): ಸಂಭೋಗಿಸು (ಬಳಸುವ ಬೇಟದೊಳ್ ಮೊಳೆತ ಗೊಟ್ಟಿಯೊಳ್ ಇರದೆಲೆವೋದ ಲುಂದಿನೊಳ್ ಬಳೆದ ವಿಯೋಗದೊಳ್: ಆದಿಪು, ೧೨. ೨೦); ಸಂಭೋಗ (ಅಮರ್ದಿನ ಧಾರೆಯಂತೆ ನುಡಿಯಿಂಪು ಅಮರ್ದಂ ತಳಿದಂತೆ ಸೋಂಕಿನಿಂಪು ಅಮರ್ದಿನ ಪೂರದಂತೆ ಪದದಿಂಪು ಅಮರ್ದಂ ಕುಡಿದಂತೆ ಲುಂದಿನಿಂಪು: ಆದಿಪು, ೧೨. ೨೭)

ಲುಂದುವೋವರಿಗೆ
ಮಲಗುವ ಮನೆ (ವಾಮರಥಂ ಕರುಮಾಡದೇೞನೆಯ ನೆಲೆಯೊಳ್ ತನ್ನ ಲುಂದುವೋವರಿಗೆಯ ಪುಡಿಕೆಯೊಳ್ ಇಟ್ಟು ಎಲ್ಲಾ ಕಾಲಮುಂ .. .. ಅರ್ಚಿಸುತ್ತಂ ಪೊಡೆಮಡುತ್ತಂ ಇರ್ಕ್ಕುಂ: ವಡ್ಡಾರಾ, ಪು ೧೨೩, ಸಾ ೮);

ಲುಬ್ಧ
ಲೋಭಗೊಂಡ[ವನು], ಲೋಭಿ (ನೃಪರತ್ನಂ ದಾನದಿಂ ಲುಬ್ಧರಂ ಅನುನಯದಿಂ ಕ್ರುದ್ಧರಂ ಯುದ್ಧದೊಳ್ ಮುನ್ನಪಮಾನಬೆತ್ತರಂ .. .. ತನಗೆ ವಶಂಮಾಡಿ: ಮಲ್ಲಿನಾಪು, ೩. ೧೦)

ಲುಬ್ಧಕ
ಆರ್ದ್ರಾ ನಕ್ಷತ್ರ (ನೆಗೞ್ದಾರ್ದ್ರೆಗೆ ಲುಬ್ಧಕಾಹ್ವಯಂ ವರ್ತಿಸುಗುಂ: ಅಭಿಧಾವ, ೧. ೧. ೮೦); ಬೇಡ (ವಿಷಯವಿಷದ್ರುಮಕಂದಳಿಯುಂ ಇಂದ್ರಿಯಲುಬ್ಧಕ ಸ್ವಚ್ಛಂದ ವಿಹಾರಗಹನಭೂಮಿಯುಂ: ಆದಿಪು, ೧೪. ೧೨೨ ವ)

ಲುಬ್ಧಕಿ
ಬೇಡಿತಿ (ಸನ್ನುತತರ ಮುಗ್ಧ ಲುಬ್ಧಕಿನಿಜೇಕ್ಷಣದಿಂ ಬೆಳಗಾಗಿ ತೋಱೆ: ತ್ರಿಷಷ್ಟಿಪು, ೨೭. ೪೦)

ಲುಲಾಯ
ಕೋಣ, ಮಹಿಷ (ವಿವಾದಿಸಿ ಕರಂ ಸೋಲ್ತಲ್ಲಿ ತದ್ಭಂಗಚಿತ್ತನವಂ ಮೞ ಲುಲಾಯಮಾಗಿ ಜನಿಸಿರ್ದು: ಶಾಂತೀಶ್ವಪು, ೫. ೬೫)

ಲುಲಾಯಚ್ಛವಿಕ
ಕೋಣದ ಬಣ್ಣವುಳ್ಳ, ಕಪ್ಪು (ಯಮೋಚ್ಚೈರ್ಲುಲಾಯಚ್ಛವಿಕಂ .. .. ದೆಸೆದಸೆಯಂ ಮರ್ಬು ಪರ್ಬಿತ್ತಗುರ್ಬಿಂ: ಲೀಲಾವತಿ, ೧೦. ೨೭)

ಲುಲಿತ
ಅಲುಗಾಟ (ತಳಿರ್ಗಳ ಚಾಳೆಯಂ ಎಳಲತೆಗಳ ಲುಳಿ ತಿಳಿಗೊಳದ ತೆರೆಯ ತಾಳಂ ಪೊಸ ಪೂಗಳ ನೋಟಮಾಗೆ: ಯಶೋಧಚ, ೪. ೩)

ಲುಳಿತ
ಲುಲಿತ (ನೋಡಿ ನಾಡೆ ಮನಂಗೊಂಡನಿಳೇಶ್ವರಂ ಲುಳಿತಮತ್ಸ್ಯಾಪಾಮಗೆಯಂ ಗಂಗೆಯಂ: ಆದಿಪು, ೧೧. ೫೬); ಸಿಂಪಡಿಸು (ಮಲಯಜ ರಸಲುಳಿತ ಕದಳೀದಳವ್ಯಜನ ಮಂದಮಾರುತಾಂದೋಳನದಿಂ ಎಂತಾನುಂ ಮೂರ್ಛೆಯಿಂದೆೞ್ಚಱಸಿ: ಆದಿಪು, ೩. ೨೩ ವ); ಕೊಂಕಾದ (ಬಳಸಿರ್ದ ಮದಾಳಿಸಂಕುಲಂ ವಿಷಯಾಂಗನಾಲುಳಿತ ಕುಂತಳದಂತೆವೊಲ್ ಒಪ್ಪಿ ತೋಱುಗುಂ: ಪಂಪಭಾ, ೧. ೫೩); ಮೇಲೆದ್ದ, ಕೆದರಿದ (ಆಗಳ್ ಚಿತ್ರರಥನಂದನೆ ತುರಗಖುರಲುಳಿತ ಲುಳಿತಧೂಳೀ ಧೂಸರಮಪ್ಪ ಭವದ್ಗಮನಮಾರ್ಗಮಂ ನೋಡುತ್ತುಮಿರ್ದು; ಕಾದಂಸಂ, ೫. ೮೪ ವ)


logo