logo
भारतवाणी
bharatavani  
logo
Knowledge through Indian Languages
Bharatavani

Champoo Nudigannadi (Halagannada Shabdartha Sankalana)

Please click here to read PDF file Champoo Nudigannadi (Halagannada Shabdartha Sankalana)

ಲಾಳೆ
ಲಾಲಾಂಬು (ಕೊರೆವೊಡೆ ಬೆಟ್ಟುಗಳ್ ಬಿರಿವುವು ಉಣ್ಮುವ ಲಾಳೆಯ ಲೋಳೆಗಳ್ ಪೊನಲ್ವರಿವುವು ಕೆಮ್ಮಿ ಕುಮ್ಮಿದೊಡೆ ತೋಳೊಳೆ ಜೀವವಿಯೋಗಮಪ್ಪುದು: ಪಂಪಭಾ, ೪. ೧೦೦)

ಲಾೞ
ಲಾಟದೇಶ (ತಱಸಂದು ಲಾೞದೊಳ್ ತಳ್ತಿಱದೇಱಂ ಪೇೞೆ ಕೇಳ್ದು ಮಂಡಲಮಿನ್ನುಂ ತಿಱುನೀರಿಕ್ಕುವುದೆನಿಸಿದ ತಱಸಲವಿನ ಚಲದ ಬಲದ ಕಲಿ ನರಸಿಂಹಂ: ಪಂಪಭಾ, ೧. ೩೩)

ಲಿಂಗಜ
ಇಂದ್ರಿಯಜನ್ಯಜ್ಞಾನ (ಶ್ರುತಭೇದಂ ತದ್ಭೇದ್ವಿತಯಂ ಲಿಂಗಜಮುಮಾವಗಂ ಶಬ್ದಜಮುಂ ಅಲ್ಲಿ ಲಿಂಗಮನೇಕಭೇದಮನಂಗೀಕರಿಸಿರ್ಕುಮಾವಗಂ: ಚಂದ್ರಪ್ರಪು, ೧೪. ೪೩)

ಲಿಂಗವಿಚ್ಛಿತ್ತಿ
ಮರ್ಮಾಂಗವನ್ನು ಕತ್ತರಿಸುವುದು (ಗುರುತಳ್ಪಗತಂಗೆ ಆಯುಧದಿಂದಕಟ ಲಿಂಗವಿಚ್ಛಿತ್ತಿ ಗಡ: ಸಮಯಪ, ೧೧. ೭೩)

ಲಿಕುಚ
ಗಜನಿಂಬೆ, ಹೇರಿಳೆ (ವಕುಳ ಪಾಟಳ ಅಶ್ವತ್ಥಬ್ರಾತಂ ಲಿಕುಚ ನಾಳಿಕೇರದ್ರುಮಜಾತಂ: ಸುಕುಮಾಚ, ೧೦. ೫೬)

ಲಿಪಿ
ಬರೆಯುವ ಅಕ್ಷರ (ಲಿಪಿಯುಂ ಲಿಖಿತಾಕ್ಷರಾಳಿನ್ಯಾಸಂ: ಅಭಿಧಾವ, ೧. ೧೧. ೫೯)

ಲಿಪಿವಿಧಾನ
ಬರೆಯುವ ಕ್ರಮ (ಸೇವಾಧರ್ಮೋಚಿತಮೆನಿಸುವ ಕರ್ಮಮುಮಂ ಅನೇಕ ಲಿಪಿವಿಧಾನಾಧೀನಮಪ್ಪ ಮಷಿಯುಮಂ .. .. ಪಡೆದು: ಆದಿಪು, ೮. ೬೪ ವ)

ಲಿಪಿಸಂಖ್ಯಾನಸಂಗ್ರಹ
[ಜೈನ] ಒಂದು ಗರ್ಭಾನ್ಯ ಕ್ರಿಯೆ (ಲಿಪಿಸಂಖ್ಯಾನಸಂಗ್ರಹ ಉಪನಯನಬ್ರತಚರ್‍ಯ .. .. ಯೋಗತ್ಯಾಗಾಗ್ರನಿರ್ವೃತಿಯೆಂಬ ಅಯ್ವತ್ತುಮೂಱು ಗರ್ಭಾದಿರ್‍ವಾಣಪರ್‍ಯಂತಂಗಳಪ್ಪ ಗರ್ಭಾನ್ವಯಕ್ರಿಯೆಗಳಂ: ಆದಿಪು, ೧೫. ೧೫ ವ)

ಲೀಲಾಂದೋಳ
ಉಯ್ಯಾಲೆ (ಲೀಲಾಂದೋಳಂ ಪ್ರಖ್ಯಾತಂ ಚಾಂಡಾಳ ವಲ್ಲಕೀಪಯಾಯಂ: ಅಭಿಧಾವ, ೧. ೧೦. ೩೮)

ಲೀಲಾಕಿಳಕಿಂಚಿತ ಲಲಿತ ವಿಹ್ವದ್ ವಿಳಾಸ ವಿಚ್ಛಿತ್ತಿ ವಿಭ್ರಮಾದಿ ಗುಣಂಗಳ್
ಸ್ತ್ರೀಯರ ಹತ್ತು ಶೃಂಗಾರಭಾವಗಳು (ಜಳಕೇಳಿಯೊಳ್ ಅಧಿಪನೆರ್ದೆಗೊಳಿಸಿದುವು ಅಂತಃಪುರೀ ಜನಂಗಳ ಲೀಲಾಕಿಳಕಿಂಚಿತ ಲಲಿತ ವಿಹ್ವದ್ ವಿಳಾಸ ವಿಚ್ಛಿತ್ತಿ ವಿಭ್ರಮಾದಿ ಗುಣಂಗಳ್: ಆದಿಪು, ೧೧. ೧೪೨)


logo