logo
भारतवाणी
bharatavani  
logo
Knowledge through Indian Languages
Bharatavani

Champoo Nudigannadi (Halagannada Shabdartha Sankalana)

Please click here to read PDF file Champoo Nudigannadi (Halagannada Shabdartha Sankalana)

ಲಾವಗೆ
ಒಂದು ಹಕ್ಕಿ, ಪತಂಜಲ (ತಗರಾಗಿ ತಾಗಿಯುಂ ಲಾವಗೆಯಾಗಿ ಕಾದಿಯುಂ ತಮತಮಗಿಂತು ಚಿತ್ತಮಱದು ಓಲಗಿಪರ್ ದಿವಿಜರ್ ಕುಮಾರನಂ: ಮಲ್ಲಿನಾಪು, ೧೩. ೫೦)

ಲಾವಣಕ
ಉಪ್ಪಿನಕಾಯಿ (ಎಳೆಮಾವಿನ ಮಿಡಿ ಮಾಗುಳಿ ಮೆೞಸಿನ ಕರೆ ಬೆತ್ತ ಲಟ್ಟೆಯ ಈಳೆಯ ಗೊಲೆಯಿಂದಳವಟ್ಟಿರೆ ಲಾವಣಕಂಗಳನಿಕ್ಕಿದರಾಗಳ್ ಅೞಯಿಂದಂಗನೆಯರ್: ಸುಕುಮಾಚ, ೧೦. ೩೦)

ಲಾವಣಿಗೆ
ಉಪ್ಪಿನಕಾಯಿ (ಪೂರಿಗೆ ಇಡ್ಡಲಿಗೆ ಸೋದಿಗೆ ಲಾವಣಿಗೆ ಘೃತಪೂರಂ ಲಡ್ಡುಗೆ ಮಂಡಗೆ ಮೊದಲಾಗೊಡೆಯ ಪದಿನೆಂಟುಂ ತೆಱದ ಭಕ್ಷ್ಯರೂಪಂಗಳುಮಂ: ವಡ್ಡಾರಾ, ಪು ೭೮ ಸಾ ೧೬)

ಲಾವುಕ
ಲಾವಗೆ ಹಕ್ಕಿ (ಇದೆ ಚಕಿತ ಲಾವುಕಸ್ವನಂ ಇದೆ ಹರಿನಖಭಿನ್ನಕುಂಬ ಕುಂಜರರವಂ ಇಂತಿರೆ ಕುರರಕುಲಸ್ವನಂ ಇಂತಿದೆ ಕುಕ್ಕುಟರಭಸಂ ಇದೆ ಕಪಿಂಜಲನಿನದಂ; ಕಾದಂಬ, ೧. ೧೩೨)

ಲಾಸಕಿ
ನರ್ತಕಿ (ಅಂಗಜಲಾಸ್ಯಲೀಲೆಯಂ ಕ್ಷಿತಿಪನ ಚಿತ್ತವೃತ್ತಿಗುಪದೇಶಿಪ ಲಾಸಕಿಯಂತೆ ತೋಱದಳ್: ಚಂದ್ರಪ್ರಪು, ೩. ೮೩)

ಲಾಸಿಕಾ
ಲಾಸಕಿ (ಮದಮಯೂರೀಲಾಸಿಕಾರಂಗಮಂ .. .. ಶೀತಕೋಶ ಗುಹೆಯಂ ಪೊಕ್ಕಂ ಮಹೀವಲ್ಲಭಂ: ಲೀಲಾವತಿ, ೪. ೧೬)

ಲಾಸಿಕೆ
ಲಾಸಕಿ (ಕಣ್ಗೊಳಿಸಿದಳ್ ಇಂದುಕಾಂತೆ ಮಣಿಮಂಗಳ ರಂಗದೊಳ್ ಅಬ್ಜನಾಳಮಂ ಸೆಳೆವಿಡಿದ ಅಂಗಜನ್ಮ ಜಯಲಕ್ಷ್ಮಿಯ ಲಾಸಿಕೆಯೀಕೆಯೆಂಬಿನಂ: ಮಲ್ಲಿನಾಪು, ೪. ೩೯)

ಲಾಸ್ಯ
ಲಲಿತನರ್ತನ (ಕವಿತಾರಸವಂ ಮೂಢಂ ತವೆ ಲಾಸ್ಯದ ಚೆಲ್ವಂ ಎಸೆವನಂಧಂ .. .. ಬಲ್ಲನೆ: ತ್ರಿಷಷ್ಟಿಪು, ೧. ೨೭)

ಲಾಳವಿಂಡಿಗೆ
ಅಗುಳಿ (ದಿಶಾಧಿಪರ್ ದಿಗಿಭಸಂಹತಿಯಂ ಮನಮೊಲ್ದು ಪಾಱಸಲ್ಕಿಕ್ಕಿದ ಲಾಲವಿಂಡಿಗೆಯ ಮಾೞ್ಕೆಯೊಳಿರ್ದುದು ವಿಂಧ್ಯಪರ್ವತಂ: ವರ್ಧಮಾಪು, ೧೬. ೫)

ಲಾಳಾಜಳ
ಜೊಲ್ಲು (ತುರಂಗಮ ಲಾಳಾಜಳದ ಪೊನಲ್ ತೆಮಳ್ಚಿ ತೊಳೆವುದು ತದೀಯ ಗೇಹಾಂಗಣದೊಳ್: ನೇಮಿನಾಪು, ೩. ೮೭)


logo