logo
भारतवाणी
bharatavani  
logo
Knowledge through Indian Languages
Bharatavani

Champoo Nudigannadi (Halagannada Shabdartha Sankalana)

Please click here to read PDF file Champoo Nudigannadi (Halagannada Shabdartha Sankalana)

ಲಾಭಂಬೆಱು
ಲಾಭವನ್ನು ಪಡೆ (ಮಂದರದಂತೆ ಧೈರ್ಯಂಬೆರಸು ಲಾಭಂಬೆತ್ತ ಪರದನಂತೆ ಉತ್ಸಾಹಂಬೆರಸು: ಧರ್ಮಾಮೃ, ೧. ೧೦೮ ವ)

ಲಾಮಂಚ
ಲಾಳದ ಬೇರು (ಲಾಮಂಚದ ಮುಚ್ಚುಳಮಂ ನೆಮ್ಮಿ ನಿಂದಿರ್ದ ಪಡಿಯಱಗೋಗಿಲೆಗಳಿಂ: ಗಿರಿಜಾಕ, ೭. ೧೧ ವ)

ಲಾಲಂಗಿ
ಆಲಾಪನೆಯ ಒಂದು ವಿಧ (ತಿರುಪು ತೊಮ್ಮೆವಡೆಯೆ ಗತಿ ಸಂಗತಿವಡೆಯೆ ಗಮಕಂ ಗಾರವಂಬಡೆಯೆ ಗಹಗಹಿಕೆಗೊಡಂಗೂಡಿ ಚಡಂಬಾಹಟಂ ಲಾಲಂಗಿ ತನ್ನೆವಣೆ ನಿಸ್ಸರಡೆ ರಂಗಕ್ತಿಬೇಗವಣಿತು ತರಹರಂ : ಶಾಂತೀಶ್ವಪು, ೧೬. ೬೭ ವ)

ಲಾಲಸ
ಬಯಕೆ (ಬಾಹುಗಳ್ ಆಲಿಂಗನಲಾಲಸಂಗಳೆನೆ ಧೈರ್ಯಂಗೆಟ್ಟು ಮೇಲ್ವಾಯ್ವ ಚೇಷ್ಟೆಗೆ: ಪಂಪರಾ, ೯. ೧೪೮)

ಲಾಲಸಕ
ಲಂಪಟ (ಲೋಲುಪಂ ಅಭಿಲಾಷುಕಂ ಅತಿಲಾಲಸಕಂ ಗೃಧ್ನು ಲಂಪಟಂ ಲುಬ್ಧನವಂ; ಅಭಿಧಾವ, ೨. ೧. ೭)

ಲಾಲಾಂಬು
ಜೊಲ್ಲಿನ ರಸ (ಕರಿಶೀಕರಕರಮದಜಳ ತುರಂಗಲಾಲಾಂಬುಸೇಕದಿಂದೞದುೞದಿರ್ದ ರಜಂ ನರೇಂದ್ರಚಾಮರಮರುದಭಿಹತಿಯಿಂ ತೆರಳ್ದು ತೂಳ್ದತ್ತಾಗಳ್: ಆದಿಪು, ೧೧. ೩೮)

ಲಾಲಾಜಲ
ಲಾಲಾಂಬು (ಜಾತ್ಯಶ್ವ ರಥ ಆಶ್ವಸಂಕುಳಖಲೀನ ಉದ್ಭೂತ ಲಾಲಾಜಲಂ ಕದಡೆೞ್ದು: ಪಂಪಭಾ, ೧೦. ೩೧)

ಲಾಲಾಟ
ಲಲಾಟ, ಹಣೆ (ಭವಲಾಲಾಟ ವಿಲೋಚನಾಗ್ನಿಶಿಖೆಯಿಂ ಬೆಂದಳ್ಕಿ ಮತ್ತಂ ಮನೋಭವಂ ಎೞ್ಚತ್ತೊಡೆ: ಪಂಪಭಾ, ೭. ೨೪)

ಲಾಲಿತ
ಪ್ರೀತಿಯಿಂದ ಕೂಡಿದ (ಗುರುಗಂ ಗುರುವೆಂದೊದವಿದ ಪೆಂಪಿದು ನಿನ್ನೊಂದುದಯದಿನಾಯ್ತು ಅಮರಮೌಳಿ ಲಾಲಿತಚರಣಾ: ಆದಿಪು, ೮. ೯)

ಲಾವಕ
ಒಂದು ಹಕ್ಕಿ, ಲಾವಗೆ (ಕ್ರಕರ ಕಪಿಂಜಳ ತಿತ್ತಿರಿ ಚಕೋರ ಹಾರೀತ ಕುರವ ಕಾರಂಡವ ಲಾವಕ ಜೀವಂಜೀವಕ ಶಾರಿಕಾದಿಗಳ್ ವಿಹಗಜಾತಿಯಕ್ಕುಂ ಪಲವುಂ: ಅಭಿಧಾವ, ೧. ೯. ೨೧)


logo